Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ದಕ್ಷಿಣ ಆಫ್ರಿಕಾಗ ದೊಡ್ಡ ಆಘಾತ: ವಿಶ್ವಕಪ್ ತಂಡದಿಂದ ಹೊರಬಿದ್ದ ಇಬ್ಬರು ಘಾತಕ ವೇಗಿಗಳು

ವಿಶ್ವಕಪ್‌ಗೆ ಇನ್ನು ಕೇವಲ ಎರಡು ವಾರಗಳಿಗೂ ಕಡಿಮೆ ಅವಧಿಯಿದೆ. ಇಂಥಾ ಸಂದರ್ಭದಲ್ಲಿ ಎಲ್ಲಾ ತಂಡಗಳು ಕೂಡ ಬಲಿಷ್ಠ ತಂಡದೊಂದಿಗೆ ಟೂರ್ನಿಯಲ್ಲಿ ಅಬ್ಬರಿಸಲು ಸಿದ್ಧತೆ ನಡೆಸುತ್ತಿದೆ. ಆದರೆ ಇಂಥಾ ಸಂದರ್ಭದಲ್ಲಿ ದಕ್ಷಿಣ ಆಪ್ರಿಕಾ ತಂಡ ತನ್ನ ಇಬ್ಬರು ಪ್ರಮುಖ ವೇಗಿಗಳನ್ನು ಈ ಬಾರಿಯ ವಿಶ್ವಕಪ್ ಟೂರ್ನಿಯಿಂದ ಕಳೆದುಕೊಂಡಿರುವುದು ಖಚಿತವಾಗಿದೆ.

ದಕ್ಷಿಣ ಆಫರಿಕಾ ತಂಡದ ಘಾತಕ ವೇಗದ ಬೌಲರ್ ಅನ್ರಿಕ್ ನಾರ್ಕಿಯಾ ಹಾಗೂ ಇನ್ನೋರ್ವ ವೇಗಿ ಸಿಸಂಡ ಮಗಲ ಮುಂಬರುವ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿರುವುದು ಖಚಿತವಾಗಿದೆ. ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಈ ಬಗ್ಗೆ ಖಚಿತಪಡಿಸಿದೆ. ಮಾತ್ರವಲ್ಲ ಈ ವೇಗಿಗಳಿಗೆ ಬದಲಿ ಆಟಗಾರರನ್ನು ಕೂಡ ದಕ್ಷಿಣ ಆಫ್ರಿಕಾ ಹೆಸರಿಸಿದೆ.

Big set back for South Africa as Anrich Nortje and Sisanda Magala ruled out of World Cup

ನಾಯಕ ಟೆಂಬಾ ಬವುಮಾ ನೇತೃತ್ವದ ದಕ್ಷಿಣ ಆಫ್ರಿಕಾ 15 ಸದಸ್ಯರ ತಂಡಕ್ಕೆ ವೇಗದ ಬೌಲಿಂಗ್ ಆಲ್‌ರೌಂಡರ್ ಆಂಡಿಲ್ ಫೆಹ್ಲುಕ್ವಾಯೊ ಮತ್ತು ಲಿಜಾಡ್ ವಿಲಿಯಮ್ಸ್ ಸೇರ್ಪಡೆಗೊಂಡಿದ್ದಾರೆ. ನಾರ್ಕಿಯಾ ಒತ್ತಡದ ಗಾಯಕ್ಕೆ ತುತ್ತಾಗಿ ಟೂರ್ನಿಯೀಮದ ಹೊರಬಿದ್ದಿದ್ದಾರೆ. ಈ ತಿಂಗಳ ಆರಂಭದಲ್ಲಿ ಬ್ಲೋಮ್‌ಫಾಂಟೈನ್‌ನ ಮಂಗುವಾಂಗ್ ಓವಲ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವಿನ 2 ನೇ ಏಕದಿನ ಸರಣಿಯ ಸಂದರ್ಭದಲ್ಲಿ ಸ್ನಾಯುಸೆಳೆತಕ್ಕೆ ಒಳಗಾಗಿದ್ದರು.

ಆ ಪಂದ್ಯದಲ್ಲಿ ನಾರ್ಕಿಯಾ ಕೇವಲ ಐದು ಓವರ್‌ಗಳನ್ನು ಬೌಲ್ ಮಾಡಲು ಸಾಧ್ಯವಾಯಿತು ಆದರೆ 11.60 ರಎಕಾನಮಿ ದರದಲ್ಲಿ 58 ರನ್‌ಗಳನ್ನು ಬಿಟ್ಟುಕೊಟ್ಟಿದ್ದರು. ವಿಪರ್ಯಾಸವೆಂದರೆ ಹೆಬ್ಬೆರಳು ಮುರಿತದಿಮದಾಗಿ ಅವರು 2019ರ ಆವೃತ್ತಿಯ ವಿಶ್ವಕಪ್‌ನಲ್ಲಿಯೂ ಆಡುವ ಅವಕಾಶವನ್ನು ಅವರು ಕಳೆದುಕೊಂಡಿದ್ದರು. ಹೀಗಾಗಿ ಇದು ವೈಯಕ್ತಿಕವಾಗಿ ನಾರ್ಕಿಯಾಗಿ ಭಾರೀ ಹಿನ್ನಡೆಯಾಗಿದೆ.

ಅಪ್‌ಡೇಟ್ ಆದ ಬಳಿಕದ ದಕ್ಷಿಣ ಆಫ್ರಿಕಾ ಸ್ಕ್ವಾಡ್ ಹೀಗಿದೆ:

ಟೆಂಬಾ ಬವುಮಾ (ನಾಯಕ), ಜೆರಾಲ್ಡ್ ಕೋಟ್ಜಿ, ಕ್ವಿಂಟನ್ ಡಿ ಕಾಕ್, ರೀಜಾ ಹೆಂಡ್ರಿಕ್ಸ್, ಮಾರ್ಕೊ ಜಾನ್ಸೆನ್, ಹೆನ್ರಿಚ್ ಕ್ಲಾಸೆನ್, ಕೇಶವ್ ಮಹಾರಾಜ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಲುಂಗಿ ಎನ್‌ಗಿಡಿ, ಆಂಡಿಲೆ ಫೆಹ್ಲುಕ್ವಾಯೊ, ಕಗಿಸೊ ರಬಾಡಾ, ತಬ್ರೈಜ್ ಶಮ್ಸಿ, ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್, ಲಿಜಾದ್ ವಿಲಿಯಮ್ಸ್

Story first published: Thursday, September 21, 2023, 23:49 [IST]
Other articles published on Sep 21, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+