ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್‌ಗೆ ಮತ್ತೆ ಕಾಡಿದ ಮೊಣಕೈ ನೋವು

ಇಂಗ್ಲೆಂಡ್ ತಂಡದ ಯುವ ವೇಗಿ ಜೋಫ್ರಾ ಆರ್ಚರ್ ಗಾಯದಿಂದ ಚೇತರಿಸಿಕೊಂಡು ಪ್ರಥಮದರ್ಜೆ ಕ್ರಿಕೆಟ್‌ನಲ್ಲಿ ಆಡಲು ಕಣಕ್ಕಿಳಿದಿದ್ದರು. ಆದರೆ ಮತ್ತೊಮ್ಮೆ ಮೊಣಕೈ ನೋವು ಇಂಗ್ಲೆಂಡ್ ತಂಡದ ವೇಗಿಗೆ ಕಾಣಿಸಿಕೊಂಡಿದೆ. ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ ಐದು ಓವರ್‌ಗಳನ್ನು ಎಸೆದು ಹೊರಗುಳಿದಿದ್ದಾರೆ.
ಈ ಪ್ರಥಮ ದರ್ಜೆ ಕ್ರಿಕೆಟ್‌ನ್ಲಿ ಆಡುವ ಮೂಲಕ ಜೋಪ್ರಾ ಆರ್ಚರ್ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಟಿಕೆಟ್ ಗಿಟ್ಟಿಸಿಕೊಳ್ಳುವ ಪ್ರಯತ್ನವನ್ನು ನಡೆಸಿದ್ದರು ಆರ್ಚರ್. ಆದರೆ ಮೊಣಕೈ ಗಾಯ ಮತ್ತೊಮ್ಮೆ ಕಾಣಿಸಿಕೊಂಡಿರುವುದರಿಂದಾಗಿ ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಆರ್ಚರ್ ಆಯ್ಕೆ ಅನಿಶ್ಚಿತತೆಗೆ ಒಳಗಾಗಿದೆ.
ಸಸೆಕ್ಸ್ ತಂಡದ ಪರವಾಗಿ ಮೊದಲ ಇನ್ನಿಂಗ್ಸ್‌ನಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದ ಆರ್ಚರ್ 29 ರನ್‌ಗಳಿಗೆ 2 ವಿಕೆಟ್ ಪಡೆದುಕೊಂಡಿದ್ದರು. ಆದರೆ ಎರಡನೇ ಓವರ್‌ನಲ್ಲಿ ಮಳೆಯಿಂದಾಗಿ ಪಂದ್ಯ ಅಂತ್ಯಗೊಂಡಿದ್ದ ವೇಳೆ ಆರ್ಚರ್ ಕೇವಲ 5 ಓವರ್ ಮಾತ್ರವೇ ಎಸೆದಿದ್ದರು. ಪಂದ್ಯ ಮುಂದುವರಿದ ಸಂದರ್ಭದಲ್ಲಿ ತಂಡದ ನಾಯಕ ಬೌಲಿಂಗ್ ಮುಂದುವರಿಸುವಂತೆ ಕೇಳಿಕೊಂಡಾಗ ಬೌಲಿಂಗ್ ಮಾಡಲು ಆರ್ಚರ್ ನಿರಾಕರಿಸಿದ್ದು ನೋವಿನ ಬಗ್ಗೆ ಮಾಹಿತಿ ನೀಡಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿಯೂ ಆರ್ಚರ್ 13 ಓವರ್‌ಗಳನ್ನಷ್ಟೇ ಎಸೆದಿದ್ದರು.
ಇದಾದ ಬಳಿಕ ಮಾತನಾಡಿದ ಸಸೆಕ್ಸ್ ತಂಡದ ಕೋಚ್ ಇಯಾನ್ ಸಲಿಸ್ಬರಿ ಜೋಫ್ರಾ ಆರ್ಚರ್ ಅವರ ಮೊಣಕೈ ನೋವಿನ ಬಗ್ಗೆ ಗೊಂದಲವಿರುವುದಾಗಿ ಹೇಳಿಕೊಂಡಿದ್ದಾರೆ. "ಜೋಫ್ರಾ ಆರ್ಚರ್ ಅವರ ಮೊಣಕೈ ಸ್ಥಿತಿಯ ಬಗ್ಗೆ ಗೊಂದಲಗಳು ಇದೆ ಎಂದು ನನಗೆ ಅನಿಸುತ್ತದೆ. ಆರ್ಚರ್ ಬೌಲಿಂಗ್ ಮಾಡುತ್ತಾರೆ ಎಂದು ಭಾವಿಸಿದ್ದರು. ಆದರೆ ಆರ್ಚರ್ ನೋವಿನ ಬಗ್ಗೆ ಹೇಳಿಕೊಂಡಿದ್ದು ಅವರು ಬೌಲಿಂಗ್ ಮಾಡಲು ಸಾಧ್ಯವಿಲ್ಲ. ಇವತ್ತು ನೀವು ನೋಡುತ್ತಿದ್ದರೆ ನಾಳೆಯೂ ಆತ ಬೌಲಿಂಗ್ ಮಾಡುವುದು ಅಸಾಧ್ಯ. ಈ ಬಗ್ಗೆ ಇಸಿಬಿ ಬಳಿ ಮಾಹಿತಿ ಪಡೆಯಲಿದ್ದೇವೆ" ಎಂದು ಕೋಚ್ ಪ್ರತಿಕ್ರಿಯಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications