For Quick Alerts
ALLOW NOTIFICATIONS  
For Daily Alerts
 

ಏಷ್ಯಾಕಪ್ ಸೋತ ಬೆನ್ನಲ್ಲೇ ಶ್ರೀಲಂಕಾಗೆ ಮತ್ತೊಂದು ಆಘಾತ; ವಿಶ್ವಕಪ್ ತಂಡದಿಂದ ಸ್ಟಾರ್ ಸ್ಪಿನ್ನರ್ ಔಟ್!

2023ರ ಏಷ್ಯಾ ಕಪ್ ಪಂದ್ಯಾವಳಿಯ ಫೈನಲ್‌ನಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ಭಾರತ ವಿರುದ್ಧ ಶ್ರೀಲಂಕಾ ತಂಡ ಹೀನಾಯ ಸೋಲು ಅನುಭವಿಸಿತ್ತು. ಇಂತಹ ಪರಿಸ್ಥಿತಿ ನಡುವೆ ಮತ್ತೊಂದು ಆಘಾತವನ್ನು ಶ್ರೀಲಂಕಾ ಕ್ರಿಕೆಟ್ ತಂಡ ಎದುರಿಸುತ್ತಿದೆ.

ಭಾರತದಲ್ಲಿ ಅಕ್ಟೋಬರ್ 5ರಿಂದ ಆರಂಭಗೊಳ್ಳುವ 2023ರ ಐಸಿಸಿ ಏಕದಿನ ವಿಶ್ವಕಪ್‌ ಪಂದ್ಯಾವಳಿಯಿಂದ ಸ್ಟಾರ್ ಸ್ಪಿನ್ ಆಲ್‌ರೌಂಡರ್ ವನಿಂದು ಹಸರಂಗ ಹೊರಗುಳಿಯುವ ಕಾರಣ ಶ್ರೀಲಂಕಾ ತಂಡಕ್ಕೆ ದುರದೃಷ್ಟಕರ ಸುದ್ದಿ ಬಂದೊದಗಿದೆ.

Big SetBack For Sri Lanka Team After Asia Cup Loss; This Star Spinner Ruled Out Of the World Cup 2023

ಇಂಡಿಯಾ ಡಾಟ್ ಕಾಮ್ ವರದಿ ಪ್ರಕಾರ, ವನಿಂದು ಹಸರಂಗ ಅವರು ಮಂಡಿರಜ್ಜು ನೋವಿನಿಂದಾಗಿ ಭಾರತದಲ್ಲಿ ನಡೆಯುವ ಪ್ರತಿಷ್ಠಿತ ಐಸಿಸಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ.

ವನಿಂದು ಹಸರಂಗ ಅವರ ಬದಲಾಗಿ ಬೇರೆ ಆಟಗಾರನನ್ನು ಘೋಷಿಸಲು ಶ್ರೀಲಂಕಾ ಕ್ರಿಕೆಟ್‌ ಮಂಡಳಿಗೆ ಇನ್ನೂ ನಾಲ್ಕು ದಿನಗಳ ಕಾಲಾವಧಿ ಇದೆ. ಏಕೆಂದರೆ, ವಿಶ್ವಕಪ್‌ಗೆ ಅಂತಿಮ ತಂಡವನ್ನು ಸೆಪ್ಟೆಂಬರ್ 28ರೊಳಗೆ ಸಲ್ಲಿಸಬೇಕು.

ಈ ಹಿಂದೆ ವನಿಂದು ಹಸರಂಗ ಅವರು ಮಂಡಿರಜ್ಜು ಗಾಯದ ಕಾರಣದಿಂದ ಇತ್ತೀಚೆಗೆ ಮುಕ್ತಾಯಗೊಂಡ 2023ರ ಏಷ್ಯಾ ಕಪ್‌ ಪಂದ್ಯಾವಳಿಯಲ್ಲಿ ಶ್ರೀಲಂಕಾ ತಂಡದ ಭಾಗವಾಗಲು ಸಾಧ್ಯವಾಗಿರಲಿಲ್ಲ.

Big SetBack For Sri Lanka Team After Asia Cup Loss; This Star Spinner Ruled Out Of the World Cup 2023

ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ವನಿಂದು ಹಸರಂಗ ಕೊನೆಯ ಬಾರಿಗೆ ಮೈದಾನದಲ್ಲಿ ಕಾಣಿಸಿಕೊಂಡಿದ್ದರು. ಆ ವೇಳೆ ಅವರು ಬಿ ಕ್ಯಾಂಡಿ ಲವ್ ತಂಡವನ್ನು ಮುನ್ನಡೆಸಿದ್ದರು.

ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಲೆಗ್ ಸ್ಪಿನ್ನರ್ ವನಿಂದು ಹಸರಂಗ ಅಸಾಧಾರಣ ಆಲ್‌ರೌಂಡ್ ಪ್ರದರ್ಶನ ನೀಡಿದ್ದರು ಮತ್ತು ಉತ್ತಮ ಫಾರ್ಮ್‌ನಲ್ಲಿ ಕಂಡುಬಂದಿದ್ದರು. ಪಂದ್ಯಾವಳಿಯಲ್ಲಿ 279 ರನ್ ಗಳಿಸುವ ಮೂಲಕ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಮತ್ತು 19 ವಿಕೆಟ್‌ಗಳನ್ನು ಪಡೆದಿದ್ದರು.

ವನಿಂದು ಹಸರಂಗ ಗರಿಷ್ಠ ಸಿಕ್ಸರ್‌ಗಳು, ಅತಿ ಹೆಚ್ಚು ವಿಕೆಟ್ ಟೇಕರ್, ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಗೆದ್ದರು ಮತ್ತು ಸರಣಿಶ್ರೇಷ್ಠ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದರು.

ಇದು ಶ್ರೀಲಂಕಾ ತಂಡದಲ್ಲಿ ವನಿಂದು ಹಸರಂಗ ಅವರ ಮಹತ್ವವನ್ನು ಎತ್ತಿ ತೋರಿಸುತ್ತದೆ. ಒಂದು ವೇಳೆ ಹಸರಂಗ ಅವರು ಶ್ರೀಲಂಕಾ ವಿಶ್ವಕಪ್‌ ತಂಡದಲ್ಲಿ ಆಡಲು ಸಾಧ್ಯವಾಗದಿದ್ದರೆ ಅದು ತಂಡಕ್ಕೆ ಭಾರೀ ನಷ್ಟವಾಗಲಿದೆ.

ಇನ್ನು ಏಷ್ಯಾಕಪ್ ವೇಳೆ ಸ್ಪಿನ್ನರ್ ಮಹೀಶ್ ತೀಕ್ಷಣ ಗಾಯಗೊಂಡು ಶ್ರೀಲಂಕಾ ತಂಡ ಮತ್ತೊಂದು ಹಿನ್ನಡೆ ಅನುಭವಿಸಿದೆ. ಆದರೆ, ವಿಶ್ವಕಪ್‌ನ ವೇಳೆಗೆ ಅವರು ಚೇತರಿಸಿಕೊಳ್ಳುತ್ತಾರೆ ಮತ್ತು ಪಂದ್ಯಾವಳಿಯಲ್ಲಿ ಭಾಗವಹಿಸುತ್ತಾರೆ ಎನ್ನಲಾಗಿದೆ.

ಶ್ರೀಲಂಕಾದ ಪ್ರಮುಖ ವೇಗದ ಬೌಲರ್ ದುಷ್ಮಂತ ಚಮೀರಾ ಅವರು ವಿಶ್ವಕಪ್‌ನಲ್ಲಿ ಭಾಗವಹಿಸುವುದು ಹೆಚ್ಚು ಕಡಿಮೆ ಅನುಮಾನವಾಗಿದೆ. ಇನ್ನೂ ಅವರು ಗಾಯದಿಂದ ಬಳಲುತ್ತಿದ್ದಾರೆ ಮತ್ತು ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು.

ಪ್ರಮುಖ ಆಟಗಾರರ ಗಾಯದ ಸಮಸ್ಯೆಗಳು ನಿಸ್ಸಂದೇಹವಾಗಿ ಶ್ರೀಲಂಕಾ ತಂಡಕ್ಕೆ ದೊಡ್ಡ ಹಿನ್ನಡೆ ಉಂಟಾಗಬಹುದು ಮತ್ತು ಐಸಿಸಿ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಸಾಧ್ಯತೆಯನ್ನು ತಡೆಯಬಹುದು.

ಬಹು ನಿರೀಕ್ಷಿತ 2023ರ ಏಕದಿನ ವಿಶ್ವಕಪ್ ಪಂದ್ಯವಳಿಯುವ ಹಿಂದಿನ ಆವೃತ್ತಿಯ ಫೈನಲಿಸ್ಟ್‌ಗಳಾದ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ಹಣಾಹಣಿಯಿಂದ ಚಾಲನೆ ದೊರೆಯಲಿದೆ. ಶ್ರೀಲಂಕಾ ತಂಡದ ಮೊದಲ ಪಂದ್ಯವು ದಕ್ಷಿಣ ಆಫ್ರಿಕಾ ವಿರುದ್ಧ ಅಕ್ಟೋಬರ್ 7ರಂದು ನಡೆಯಲಿದೆ.

Story first published: Sunday, September 24, 2023, 12:53 [IST]
Other articles published on Sep 24, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+