'ಪೊಲಾರ್ಡ್‌ಗೆ ಕುಂಬ್ಳೆ ನನ್ನ ಹೋಲಿಸಿದ್ದು ದೊಡ್ಡ ಸಂಗತಿ, ಆದ್ರೆ ನನಗೆ ಸ್ವಂತ ಗುರುತು ಬೇಕು'

ನವದೆಹಲಿ: 2021ರ ಇಂಡಿಯನ ಪ್ರೀಮಿಯರ್ ಲೀಗ್ (ಐಪಿಎಲ್‌ನಲ್ಲಿ) ಪಂಜಾಬ್ ಕಿಂಗ್ಸ್ ಪರ ಆಡಿದ್ದ ತಮಿಳುನಾಡು ಬ್ಯಾಟ್ಸ್‌ಮನ್ ಶಾರುಖ್ ಖಾನ್ ಸ್ಫೋಟಕ ಬ್ಯಾಟಿಂಗ್‌ಗಾಗಿ ಗಮನ ಸೆಳೆದಿದ್ದರು. ತಮಿಳುನಾಡು ತಂಡದ ಪರವೂ ಮಿಂಚಿದ್ದ ಯುವ ಬ್ಯಾಟ್ಸ್‌ಮನ್ ಐಪಿಎಲ್‌ನಲ್ಲೂ ಆ ಫಾರ್ಮ್ ಮುಂದುವರೆಸಿದ್ದರು.
2021ರ ಐಪಿಎಲ್ ಹರಾಜಿನ ವೇಳೆ ಪಂಜಾಬ್ ಕಿಂಗ್ಸ್ ಶಾರುಖ್ ಖಾನ್ ಅವರನ್ನು 5.25 ಕೋಟಿ ರೂ.ಗೆ ಖರೀದಿಸಿತ್ತು. ಅದಕ್ಕೆ ತಕ್ಕಹಾಗೆ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದ ಶಾರುಖ್ ಅವರನ್ನು ಪಂಜಾಬ್ ಮುಖ್ಯ ಕೋಚ್ ಅನಿಲ್ ಕುಂಬ್ಳೆ ಅವರು ವೆಸ್ಟ್ ಇಂಡೀಸ್‌ನ ಬೀಸುಗೈ ದಾಂಡಿಗ, ಆಲ್ ರೌಂಡರ್ ಕೀರನ್ ಪೊಲಾರ್ಡ್‌ಗೆ ಹೋಲಿಸಿದ್ದರು.
ಕುಂಬ್ಳೆ ತನ್ನನ್ನು ಪೊಲಾರ್ಡ್‌ಗೆ ಹೋಲಿಸಿದ್ದಕ್ಕೆ ಶಾರುಖ್ ಪ್ರತಿಕ್ರಿಯಿಸಿದ್ದಾರೆ. ಕುಂಬ್ಳೆ ನನ್ನನ್ನು ಪೊಲಾರ್ಡ್‌ಗೆ ಹೋಲಿಸಿದ್ದು ದೊಡ್ಡ ಸಂಗತಿಯೇ. ಆದರೆ ನಾನು ನನ್ನ ಸ್ವಂತ ಗುರುತನ್ನು ಸೃಷ್ಟಿಸಬಯಸಿದ್ದೇನೆ ಎಂದು ಖಾನ್ ಹೇಳಿದ್ದಾರೆ. 25ರ ಹರೆಯದ ಶಾರುಖ್ ಈ ಐಪಿಎಲ್‌ನ 8 ಇನ್ನಿಂಗ್ಸ್‌ಗಳಲ್ಲಿ 127.38ರ ಸ್ಟ್ರೈಕ್ ರೇಟ್‌ನಂತೆ 107 ರನ್ ಬಾರಿಸಿದ್ದರು.
'ಖಂಡಿತವಾಗಿಯೂ, ಅನಿಲ್ ಕುಂಬ್ಳೆ ನನ್ನನ್ನು ಕೀರನ್ ಪೊಲಾರ್ಡ್‌ಗೆ ಹೋಲಿಸಿದ್ದು ಅದು ದೊಡ್ಡ ವಿಷಯ. ಆದರೆ ನಾನು ಈಗಷ್ಟೇ ನನ್ನ ಆಟ ಪ್ರಾರಂಭಿಸಿದ್ದೇನೆ. ಆದ್ದರಿಂದ, ನನ್ನದೇ ಆದ ಗುರುತನ್ನು ನಾನು ರಚಿಸಬೇಕಾಗಿದೆ ಎಂದು ನಾನು ಭಾವಿಸುತ್ತೇನೆ,' ಎಂದು ಶಾರುಖ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications