For Quick Alerts
ALLOW NOTIFICATIONS  
For Daily Alerts
 

ಶ್ರೀಲಂಕಾ ಪ್ರವಾಸದಲ್ಲಿ ರೋಹಿತ್ ಶರ್ಮಾ ಆಕ್ಷನ್ ಕಾಣಿಸುತ್ತಾ?; ನಾಯಕತ್ವದ ರಹಸ್ಯವೇನು?

ಜುಲೈ 17 ಬುಧವಾರ, ಟಿ20 ವಿಶ್ವಕಪ್‌ ಗೆಲುವಿನ ಬಳಿಕ ರೋಹಿತ್‌ ಶರ್ಮಾ ಚುಟುಕು ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಇದಾದ ಬಳಿಕ ರೋಹಿತ್‌ ಅಭಿಮಾನಿಗಳ ಚಿಂತೆ ಹೆಚ್ಚಾಗಿದೆ. ಏಕೆಂದರೆ ಮೈದಾನದಲ್ಲಿ ರೋಹಿತ್ ಆಕ್ಷನ್ ಅನ್ನು ನೋಡಲು ಹಿಟ್‌ಮ್ಯಾನ್‌ ಅಭಿಮಾನಿಗಳ ಬಹಳ ಸಮಯ ಕಾಯಬೇಕಾಗುತ್ತದೆ.

ಆದರೆ ಈಗ ರೋಹಿತ್‌ ಅವರ ಬಗ್ಗೆ ಬಿಗ್‌ ಅಪ್‌ಡೇಟ್ ಸಿಕ್ಕಿದೆ. ಅದು ಏನೆಂದರೆ ಹಿಟ್‌ಮ್ಯಾನ್ ಶ್ರೀಲಂಕಾ ಪ್ರವಾಸದ ಸಮಯದಲ್ಲಿ ಮಾತ್ರ ಮೈದಾನದಲ್ಲಿ ಕಾಣಿಸಿಕೊಳ್ಳಬಹುದು.

Big update on Rohit Sharma playing in Sri Lanka tour

ಜುಲೈ 18 ರಂದು ಸಭೆ

ಜುಲೈ 17 ರಂದು ಶ್ರೀಲಂಕಾ ಪ್ರವಾಸಕ್ಕೆ ಟೀಮ್‌ ಇಂಡಿಯಾದ ಘೋಷಣೆಯನ್ನು ನಿರೀಕ್ಷಿಸಲಾಗಿತ್ತು. ಆದರೆ ಆಯ್ಕೆ ಸಭೆಯನ್ನು ಬಿಸಿಸಿಐ ಒಂದು ದಿನ ಮುಂದೂಡಲಾಗಿದೆ. ಇದೀಗ ಜುಲೈ 18ರಂದು ಈ ಸಭೆ ನಡೆಯಲಿದ್ದು, ಟೀಮ್‌ ಇಂಡಿಯಾ ಘೋಷಣೆಯಾಗಲಿದೆ.

ಕ್ರಿಕ್‌ಬಜ್ ವರದಿ ಪ್ರಕಾರ, ಆಗಸ್ಟ್‌ನಲ್ಲಿ ನಡೆಯಲಿರುವ ಭಾರತ ಮತ್ತು ಶ್ರೀಲಂಕಾ ಏಕದಿನ ಸರಣಿಗೆ ರೋಹಿತ್ ಶರ್ಮಾ ಲಭ್ಯವಿರಬಹುದು. ಹೊಸ ಹೆಡ್‌ ಕೋಚ್‌ ಗೌತಮ್‌ ಗಂಭೀರ್ ಇತ್ತೀಚೆಗೆ ಎಲ್ಲಾ ಆಟಗಾರರು ಮೂರು ಸ್ವರೂಪಗಳಿಗೆ ಲಭ್ಯವಿರಬೇಕು ಎಂದು ಹೇಳಿದ್ದರು. ಆದರೆ ಅವರು ಸಭೆಯಲ್ಲಿ ಈ ಬಗ್ಗೆ ಒತ್ತು ನೀಡಲಿಲ್ಲ.

ನಾಯಕತ್ವದ ರಹಸ್ಯ ಬಗೆಹರಿಯಲಿದೆ

ಶ್ರೀಲಂಕಾ ಪ್ರವಾಸಕ್ಕೆ ರೋಹಿತ್ ಶರ್ಮಾ ವಿರಾಮ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಆದರೆ ಹಿಟ್‌ಮ್ಯಾನ್‌ನ ಗಮನವು 2025ರ ಚಾಂಪಿಯನ್ಸ್ ಟ್ರೋಫಿಯ ಮೇಲೆ ಇದೆ. ಅದಕ್ಕೂ ಮೊದಲು ಟೀಮ್‌ ಇಂಡಿಯಾ ಹೆಚ್ಚಿನ ಏಕದಿನ ಪಂದ್ಯಗಳನ್ನು ಆಡುತ್ತಿಲ್ಲ.

ಇಂತಹ ಪರಿಸ್ಥಿತಿಯಲ್ಲಿ ರೋಹಿತ್ ಶರ್ಮಾ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯನ್ನು ಆಡಬಹುದು. ಈ ಸರಣಿಯಲ್ಲಿ ರೋಹಿತ್ ಶರ್ಮಾ ಬಂದರೆ ತಂಡದ ಕಮಾಂಡ್ ಅವರ ಕೈಯಲ್ಲೇ ಇದ್,ದು ನಾಯಕತ್ವದ ಪ್ರಶ್ನೆಯೂ ಬಗೆಹರಿಯಲಿದೆ. '

ಟಿ20 ವಿಶ್ವಕಪ್ 2024ರ ನಂತರ, ಹಿಟ್‌ಮ್ಯಾನ್ ಯುಎಸ್‌ ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಕೆಎಲ್‌ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಕೂಡ ಈ ಸರಣಿಯಲ್ಲಿ ಮರಳಬಹುದು.

ವಿರಾಟ್-ಬುಮ್ರಾ ವಿಶ್ರಾಂತಿ

ರೋಹಿತ್ ಜೊತೆಗೆ ಶ್ರೀಲಂಕಾ ಪ್ರವಾಸದಿಂದ ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ಅವರಂತಹ ಸ್ಟಾರ್ ಆಟಗಾರರಿಗೆ ವಿಶ್ರಾಂತಿ ನೀಡುವ ಬಗ್ಗೆ ಮಾತುಕತೆ ನಡೆದಿದೆ. ಬುಮ್ರಾ ಮತ್ತು ವಿರಾಟ್ ತಂಡವನ್ನು ಸೇರುವ ಸಾಧ್ಯತೆಯಿಲ್ಲ ಎಂದು ವರದಿ ಹೇಳುತ್ತಿವೆ.

ಆದಾಗ್ಯೂ, ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಬುಮ್ರಾ ಮತ್ತು ವಿರಾಟ್ ಟೀಮ್ ಇಂಡಿಯಾದಲ್ಲಿ ಕಾಣಿಸಬಹದು. ಈ ಎಲ್ಲ ಗೊಂದಲಗಳಿಗೆ ಜುಲೈ 18ರಂದು ತೆರೆ ಬೀಳಲಿದೆ.

Story first published: Wednesday, July 17, 2024, 20:41 [IST]
Other articles published on Jul 17, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+