ಭಾರತ, ಬಾಂಗ್ಲಾ ಕ್ರಿಕೆಟ್ ಆಟಗಾರರ ಸ್ಯಾಲರಿಯಲ್ಲಿ ಆಕಾಶ ಭೂಮಿಯ ಅಂತರ: ಇಲ್ಲಿದೆ ಮಾಹಿತಿ
2023ರ ವಿಶ್ವಕಪ್‌ನಲ್ಲಿ ಭಾರತ ತಂಡ ಮುಂದಿನ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಸೆಣಸಾಟ ನಡೆಸಲಿದೆ. ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಎರಡು ತಂಡಗಳ ನಡುವೆ ದೊಡ್ಡ ವ್ಯತ್ಯಾಸವಿದ್ದು, ಉಭಯ ತಂಡಗಳ ಆಟಗಾರರ ವೇತನದಲ್ಲೂ ಈ ವ್ಯತ್ಯಾಸ ಎದ್ದು ಕಾಣುತ್ತಿದೆ.
ಬಿಸಿಸಿಐ ಭಾರತೀಯ ಕ್ರಿಕೆಟಿಗರನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಿದ ರೀತಿಯೇ, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ತನ್ನ ಆಟಗಾರರನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸುವ ಮೂಲಕ ವಾರ್ಷಿಕವಾಗಿ ಒಪ್ಪಂದ ಮಾಡಿಕೊಳ್ಳುತ್ತದೆ. ಈ ವರ್ಗಗಳು: ಎ ಪ್ಲಸ್, ಎ, ಬಿ ಮತ್ತು ಸಿ.

ಬಿಸಿಸಿಐನ 'ಎ ಪ್ಲಸ್' ವಿಭಾಗದಲ್ಲಿ ಗುತ್ತಿಗೆ ಹೊಂದಿರುವ ಕ್ರಿಕೆಟಿಗರು ವಾರ್ಷಿಕ 7 ಕೋಟಿ ರೂ. ಇರುತ್ತದೆ. BCB ತನ್ನ 'ಎ ಪ್ಲಸ್' ವರ್ಗದ ಆಟಗಾರರಿಗೆ ವಾರ್ಷಿಕ 48 ಲಕ್ಷ ರೂ. ನೀಡುತ್ತದೆ.
ಭಾರತೀಯ ಕ್ರಿಕೆಟಿಗರ 'ಎ ಕೆಟಗರಿ' ಕ್ರಿಕೆಟಿಗರು ವಾರ್ಷಿಕ 5 ಕೋಟಿ ರೂ. ಪಡೆದರೆ, ಬಾಂಗ್ಲಾದೇಶದ 'ಎ ಕೆಟಗರಿ' ಕ್ರಿಕೆಟಿಗರು ವಾರ್ಷಿಕ 36 ಲಕ್ಷ ರೂ. ಪಡೆಯುತ್ತಾರೆ. ಬಿಸಿಸಿಐನ 'ಬಿ ಕೆಟಗರಿ' ಪಟ್ಟಿಯಲ್ಲಿರುವ ಕ್ರಿಕೆಟಿಗರು ವಾರ್ಷಿಕ 3 ಕೋಟಿ ರೂ. ಪಡೆದುಕೊಂಡರೆ, ಬಾಂಗ್ಲಾದೇಶದಲ್ಲಿ ಈ ವಿಭಾಗದ ಆಟಗಾರರಿಗೆ ವಾರ್ಷಿಕ 24 ಲಕ್ಷ ರೂ ನೀಡುತ್ತದೆ.
ಭಾರತದಲ್ಲಿ 'ಸಿ' ವರ್ಗದ ಕ್ರಿಕೆಟಿಗರು ಕೂಡ ವಾರ್ಷಿಕವಾಗಿ 1 ಕೋಟಿ ರೂ. ನೀಡುತ್ತದೆ. ಬಾಂಗ್ಲಾದೇಶದಲ್ಲಿ 'ಸಿ ಕೆಟಗರಿ' ಕ್ರಿಕೆಟಿಗರು ವಾರ್ಷಿಕವಾಗಿ ಕೇವಲ 12 ಲಕ್ಷ ರೂ. ಪಡೆಯುತ್ತಾರೆ.
ಭಾರತ ಮತ್ತು ಬಾಂಗ್ಲಾದೇಶದ ಕ್ರಿಕೆಟಿಗರ ನಡುವಿನ ವಾರ್ಷಿಕ ಒಪ್ಪಂದದಲ್ಲಿ ವ್ಯತ್ಯಾಸವಿರುವಂತೆಯೇ ಪಂದ್ಯ ಶುಲ್ಕದಲ್ಲೂ ಅಷ್ಟೇ ವ್ಯತ್ಯಾಸವಿದೆ. ಭಾರತೀಯ ಕ್ರಿಕೆಟಿಗರು ಟೆಸ್ಟ್‌ಗೆ 15 ಲಕ್ಷ, ಏಕದಿನಕ್ಕೆ 6 ಲಕ್ಷ ಮತ್ತು ಟಿ20ಗೆ 3 ಲಕ್ಷ ರೂಪಾಯಿ ಪಡೆಯುತ್ತಾರೆ. ಮತ್ತೊಂದೆಡೆ, ಬಾಂಗ್ಲಾದೇಶ ಕ್ರಿಕೆಟಿಗರು ಟೆಸ್ಟ್‌ಗೆ 3 ಲಕ್ಷ ರೂ., ಏಕದಿನಕ್ಕೆ 2 ಲಕ್ಷ ರೂ. ಮತ್ತು ಟಿ20ಗೆ 1 ಲಕ್ಷ ರೂ. ಪಡೆಯುತ್ತಾರೆ.
ಬಿಸಿಸಿಐ ವಿಶ್ವದ ಶ್ರೀಮಂತ ಕ್ರೀಡಾ ಸಂಸ್ಥೆಯಾಗಿರುವುದರಿಂದ ತಮ್ಮ ಆಟಗಾರರಿಗೆ ಉತ್ತಮ ವೇತನವನ್ನು ನೀಡುತ್ತಿದೆ. ಇನ್ನು, ಐಪಿಎಲ್ ಕೂಡಾ ಆದಾಯ ಕೊಡುವ ಕ್ರೀಡಾಕೂಟವಾಗಿದೆ. ಹಾಗಾಗಿಯೇ, ಈ ಕ್ರೀಡಾಕೂಟದಲ್ಲಿ ಎಲ್ಲಾ ದೇಶದ ಆಟಗಾರರು ಉತ್ಸುಕರಾಗಿರುತ್ತಾರೆ. ಪಾಕಿಸ್ತಾನದ ಕ್ರೀಡಾಪಟುಗಳು ಹೊರತಾಗಿ ಐಪಿಎಲ್ ನಲ್ಲಿ ಭಾಗವಹಿಸುತ್ತಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications