ವೈಭವ್ ಶತಕದ ದಾಖಲೆ ಅಳಿಸಿದ ಸಕಿಬುಲ್ ಗನಿ: ಬಿಹಾರ ವಿಶ್ವದಾಖಲೆ
ಬುಧವಾರ ವಿಜ್ ಹಜಾರೆ ಏಕದಿನ ಕ್ರಿಕೆಟ್ ಟೂರ್ನಿಗಳು ನಡೆಯುತ್ತಿವೆ. ಈ ಟೂರ್ನಿಯ ಮೊದಲ ದಿನವೇ ಬಿಹಾರ ಇತಿಹಾಸದ ಪುಟ ಸೇರಿದೆ. ರಾಂಚಿಯಲ್ಲಿ ನಡೆದ ಪಂದ್ಯದಲ್ಲಿ ಬಿಹಾರ, ಅರುಣಾಚಲ್ ಪ್ರದೇಶ ವಿರುದ್ಧ ದೊಡ್ಡ ಮೊತ್ತವನ್ನು ಕಲೆ ಹಾಕಿ ಬೀಗಿದೆ. ಈ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಸಿಡಿಲಬ್ಬರದ ಶತಕ ಬಾರಿಸಿ ಮಿಂಚಿದರೆ, ನಾಯಕ ಸಕಿಬುಲ್ ಗನಿ ವೇಗದ ಶತಕದ ನೆರವಿನಿಂದ ಬಿಹಾರ ದೊಡ್ಡ ಮೊತ್ತ ಕಲೆ ಹಾಕಿದೆ. ಇದು ವಿಶ್ವ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ.
ವಿಜಯ್ ಹಜಾರೆ ಟ್ರೋಫಿ ಲೀಸ್ಟ್ ಎ ಪಂದ್ಯ ಎಂದು ಪರಿಗಣಿಸಲಾಗುತ್ತದೆ. ಈ ಪಂದ್ಯದಲ್ಲಿ ಬಿಹಾರ ಅರುಣಾಚಲ್ ಪ್ರದೇಶ ವಿರುದ್ಧ 50 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 574 ರನ್ ಸಿಡಿಸಿತು. ಲೀಸ್ಟ್ ಎ ಕ್ರಿಕೆಟ್‌ನಲ್ಲಿ ಇದು ದೊಡ್ಡ ದಾಖಲೆಯಾಗಿದೆ. ದೇಶೀಯ ಕ್ರಿಕೆಟ್‌ನಲ್ಲೂ ಯಾವೊಂದು ತಂಡ ಇಷ್ಟು ರನ್ ಕಲೆ ಹಾಕಿಲ್ಲ. ಈ ಮೂಲಕ ಬಿಹಾರ ತಮಿಳುನಾಡು ದಾಖಲೆಯನ್ನು ಅಳಿಸಿ ಹಾಕಿದೆ.

2022ರಲ್ಲಿ ತಮಿಳುನಾಡು ಅರುಣಾಚಲ್ ಪ್ರದೇಶ ವಿರುದ್ಧ 50 ಓವರ್‌ಗಳ ಪಂದ್ಯಗಳಲ್ಲಿ 2 ವಿಕೆಟ್ ನಷ್ಟಕ್ಕೆ 502 ರನ್ ಕಲೆ ಹಾಕಿತ್ತು. ಈ ದಾಖಲೆಯನ್ನು ಈಗ ಬಿಹಾರ ಅಳಿಸಿ ಹಾಕಿದೆ.
ಲೀಸ್ಟ್ ಎ ಪಂದ್ಯದಲ್ಲಿ ಗರಿಷ್ಠ ಸ್ಕೋರ್
ಬಿಹಾರ್ 547/6 ಅರುಚಾಲ್ ವಿರುದ್ಧ
ತಮಿಳುನಾಡು 506/2 ಅರುಣಾಚಾಲ್ ವಿರುದ್ಧ, 2022
ಇಂಗ್ಲೆಂಡ್ 498/4 ನೆದರ್ಲ್ಯಾಂಡ್ಸ್ ವಿರುದ್ಧ, 2022
ಸರ್ರೆ 496/4 ಗ್ಲೌಕ್ಸ್ ವಿರುದ್ಧ, 2007
ಇಂಗ್ಲೆಂಡ್ 481/6 ಆಸ್ಟ್ರೇಲಿಯಾ ವಿರುದ್ಧ, 2018
ಇದೇ ಪಂದ್ಯದಲ್ಲಿ ಭರವಸೆಯ ಬ್ಯಾಟರ್ ವೈಭವ್ ಸೂರ್ಯವಂಶಿ ಸಿಡಿಲಬ್ಬರದ ಶತಕ ಬಾರಿಸಿ ಮಿಂಚಿದ್ದರು. ಇವರು 36 ಎಸೆತಗಳಲ್ಲಿ ಶತಕ ಬಾರಿಸಿ ಅಬ್ಬರಿಸಿದ್ದರು. ಇನ್ನು ಬಿಹಾರ ತಂಡದ ನಾಯಕ ಸಕಿಬುಲ್ ಗನಿ ವೈಭವ್ ಸುರ್ಯವಂಶಿ ದಾಖಲೆ ಅಳಿಸಿ ಹಾಕುವ ಇನಿಂಗ್ಸ್ ಕಟ್ಟಿದರು. ಸಕಿಬುಲ್ ಗನಿ ಕೇವಲ 84 ಎಸೆತಗಳಲ್ಲಿ 190 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಕಟ್ಟಿದರು. ಈ ವೇಳೆ ಸಕಿಬುಲ್ ಗನಿ ಅವರು ಕೇವಲ 32 ಎಸೆತಗಳಲ್ಲಿ ಶತಕ ಬಾರಿಸಿ ದಾಖಲೆ ಬರೆದರು. ಲೀಸ್ಟ್ ಎ ಕ್ರಿಕೆಟ್‌ನಲ್ಲಿ ವೇಗದ ಶತಕ ಬಾರಿಸಿದ ಹಿರಿಮೆ ತಮ್ಮದಾಗಿಸಿಕೊಂಡರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications