Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮಹಿಳಾ ಕ್ರಿಕೆಟ್‌ನಲ್ಲಿ ವೈಭವ್ ಸೂರ್ಯವಂಶಿ ರೇಂಜ್‌ಗೆ ಚಚ್ಚಿದ ಬಿಹಾರ ಬಾಲಕಿ; 306 ರನ್ ಬಾರಿಸಿ ವಿಶ್ವದಾಖಲೆ ಬರೆದ ಅಕ್ಷರಾ ಗುಪ್ತಾ

ಕ್ರಿಕೆಟ್‌ ಮೈದಾನದಲ್ಲಿ ಸದ್ಯ ಬಿಹಾರ ಆಟಗಾರರ ಅಬ್ಬರ ಜೋರಾಗಿದೆ. ಪುರುಷರ ಕ್ರಿಕೆಟ್‌ನಲ್ಲಿ 15 ವರ್ಷದ ವೈಭವ್ ಸೂರ್ಯವಂಶಿ, ತಮ್ಮ ಸ್ಫೋಟಕ ಬ್ಯಾಟಿಂಗ್‌ನಿಂದ ಹೆಸರು ಮಾಡುತ್ತಿದ್ದಾರೆ. ಈಗ ಮಹಿಳಾ ಕ್ರಿಕೆಟ್‌ನಲ್ಲೂ ಅದೇ ರಾಜ್ಯದಿಂದ ಮತ್ತೊಬ್ಬ ಯುವ ಆಟಗಾರ್ತಿ ಅಕ್ಷರ ಗುಪ್ತಾ ಆರ್ಭಟಿಸುತ್ತಿದ್ದಾರೆ. ಅವರು ಏಕದಿನ ಪಂದ್ಯಗಳಲ್ಲಿ ತ್ರಿಶತಕ ಗಳಿಸುವ ಮೂಲಕ ಕ್ರಿಕೆಟ್ ಜಗತ್ತನ್ನು ಬೆರಗುಗೊಳಿಸಿದ್ದಾರೆ.

ಭಾಗಲ್ಪುರ ಮೈದಾನದಲ್ಲಿ ಗುರುವಾರ ಪ್ರಾರಂಭವಾದ ಬಿಸಿಎ ಮಹಿಳಾ ಅಂಡರ್ -19 ಏಕದಿನ ಟ್ರೋಫಿ ಪಂದ್ಯಾವಳಿಯಲ್ಲಿ ಅಕ್ಷರಾ ಅಬ್ಬರಿಸಿದ್ದಾರೆ. ಇವರು ಸ್ಫೋಟಕ ಬ್ಯಾಟಿಂಗ್ ನಡೆಸಿ 55 ಬೌಂಡರಿಗಳು ಮತ್ತು 8 ಸಿಕ್ಸರ್‌ ಸಹಾಯದಿಂದ ಅಜೇಯ 306 ರನ್‌ ಬಾರಿಸಿ ಮಿಂಚಿದರು.

Bihar s Akshara Gupta

ರಾಜ್ಯ ಮಟ್ಟದ ದೇಶೀಯ ಪಂದ್ಯದಲ್ಲಿ ಅಜೇಯ 346 ರನ್ ಗಳಿಸಿದ ಮುಂಬೈನ ಇರಾ ಗುಪ್ತಾ ಅವರ ಹೆಸರಿನಲ್ಲಿ ಅತ್ಯಧಿಕ ವೈಯಕ್ತಿಕ ಸ್ಕೋರ್ ದಾಖಲೆ ಇದೆ. ಅವರ ಇನ್ನಿಂಗ್ಸ್‌ನಲ್ಲಿ 42 ಬೌಂಡರಿಗಳು ಮತ್ತು 16 ಸಿಕ್ಸರ್‌ಗಳು ಸೇರಿವೆ. ಅಕ್ಷರ ಗುಪ್ತಾ ಈಗ ಈ ಸಾಲಿಗೆ ಸೇರಿದ್ದಾರೆ.

ಭರ್ಜರಿ ಬ್ಯಾಟಿಂಗ್ ನಡೆಸಿದ ಅಕ್ಷರಾ

ಬಿಹಾರದ ಅಕ್ಷರಾ ಗುಪ್ತಾ ಕೇವಲ 126 ಎಸೆತಗಳಲ್ಲಿ ಅಜೇಯ 306 ರನ್ ಗಳಿಸಿದರು. ಅವರ ಸ್ಟ್ರೈಕ್ ರೇಟ್ 242.86 ಆಗಿತ್ತು. ಇವರು ಕೇವಲ 16 ಎಸೆತಗಳಲ್ಲಿ ಅರ್ಧಶತಕ ಮತ್ತು 34 ಎಸೆತಗಳಲ್ಲಿ ಶತಕ ಬಾರಿಸಿದರು. ಇವರ ಉತ್ತಮ ಬ್ಯಾಟಿಂಗ್ ನೆರವಿನಿಂದ ಬಿಸಿಎ ಮಹಿಳಾ ಅಂಡರ್-19 ತಂಡ ಎ 40 ಓವರ್‌ಗಳಲ್ಲಿ 5 ವಿಕೆಟ್‌ಗೆ 450 ರನ್‌ ದೊಡ್ಡ ಮೊತ್ತ ಪೇರಿಸಿತು.

ಬೆಳೆಯುವ ಸಿರಿ ಮೊಳಕೆಯಲ್ಲಿ

ಅಕ್ಷರಾ ಅವರು ಕೇವಲ 8 ವರ್ಷದವಳಿದ್ದಾಗ ಮೊದಲು ಬ್ಯಾಟ್ ಹಿಡಿದರು. ಕ್ರಿಕೆಟ್‌ ಮೇಲಿನ ಅಪಾರ ಪ್ರೀತಿ ಇವರ ಬೆಳವಣಿಗೆಗೆ ಪೂರಕವಾಯಿತು. ಇವರು ಕ್ರಿಕೆಟ್‌ ಆಟಗಾರ್ತಿ ಯಾಗುವಲ್ಲಿ ಅವರ ಚಿಕ್ಕಪ್ಪ ಪ್ರಮುಖ ಪಾತ್ರ ವಹಿಸಿದರು. ಪ್ರತಿದಿನ ಐದು ಗಂಟೆಗಳ ಕಾಲ ಅಭ್ಯಾಸ ಮಾಡುವುದು ಅವಳ ದಿನಚರಿಯಾಗಿತ್ತು. ಹಳ್ಳಿಯಲ್ಲಿ ವಾಸಿಸುತ್ತಿದ್ದ ಅಕ್ಷರಾ ಹುಡುಗರ ಜೊತೆ ಆಡುತ್ತಾ ಬೆಳೆದರು. ಹಳ್ಳಿಯಲ್ಲಿ ಅವರ ತಂದೆ ಚಿಕ್ಕ ಕೋಳಿ ಅಂಗಡಿ ನಡೆಸುತ್ತಿದ್ದಾರೆ.

ಅಕ್ಷರ ಗುಪ್ತಾ ಅವರ ಇನ್ನಿಂಗ್ಸ್‌ಗೆ ಪ್ರತಿಕ್ರಿಯಿಸಿದ ಬಿಹಾರ ಕ್ರಿಕೆಟ್ ಅಸೋಸಿಯೇಷನ್ ​​ಅಧ್ಯಕ್ಷ ಹರ್ಷವರ್ಧನ್, 15 ವರ್ಷದ ಬ್ಯಾಟ್ಸ್‌ಮನ್‌ರನ್ನು ಅಭಿನಂದಿಸಿದರು.

Story first published: Thursday, June 18, 2026, 23:49 [IST]
Other articles published on Jun 18, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+