ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಲಿಯರ್ಡ್ಸ್ ಚಾಂಪಿಯನ್ ಪಂಕಜ್ ಅಡ್ವಾಣಿ

ನವದೆಹಲಿ: ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ ಪಂಕಜ್ ಅಡ್ವಾಣಿ ಅವರು ಬುಧವಾರ ಮುಂಬೈನಲ್ಲಿ ಸಾನಿಯಾ ಶದಾದದಪುರಿ ಎಂಬವರನ್ನು ವರಿಸಿದ್ದಾರೆ. ಸಣ್ಣ ಮದುವೆ ಸಮಾರಂಭದಲ್ಲಿ ಅಡ್ವಾಣಿಯ ಕುಟುಂಬಸ್ಥರು ಮತ್ತು ಹತ್ತಿರದ ಸ್ನೇಹಿತರು ಪಾಲ್ಗೊಂಡಿದ್ದಾರೆ.
23 ಬಾರಿ ವಿಶ್ವ ಚಾಂಪಿಯನ್ ಆಗಿರುವ ಪಂಕಜ್ ಅಡ್ವಾಣಿ, ತಾನು ಮದುವೆಯಾಗುತ್ತಿರುವ ಸಂಗತಿಯನ್ನು ಸಾಮಾಜಿಕ ಜಾಲತಾಣದ ಮೂಲಕ ಹೇಳಿಕೊಂಡಿದ್ದಾರೆ. '6 ಜನವರಿ 2021 ನಾವು ಜೊತೆಯಾಗಿದ್ದರ ಹುಟ್ಟುಹಬ್ಬವಿದು. ನಾವು ಜೊತೆಯಾಗಿ ಪಯಣ ಆರಂಭಿಸಿದ್ದರ ಸಂಭ್ರಮಾಚರಣೆ' ಎಂದು ಬರೆದುಕೊಂಡಿದ್ದಾರೆ.
ಅಡ್ವಾಣಿ ಐಬಿಎಸ್‌ಎಫ್ ಬಿಲಿಯರ್ಡ್ಸ್ ಚಾಂಪಿಯನ್‌ಶಿಪ್ ಅನ್ನು ಒಟ್ಟು 15 ಬಾರಿ ಗೆದ್ದಿದ್ದರು. ಅಲ್ಲದೆ ಪಂಕಜ್‌ಗೆ ವಿಶ್ವ ತಂಡ ಬಿಲಿಯರ್ಡ್ಸ್ ಚಾಂಪಿಯನ್‌ಶಿಪ್ ಮತ್ತು ಐಬಿಎಸ್‌ಎಫ್ ಸ್ನೂಕರ್ ಚಾಂಪಿಯನ್‌ಶಿಪ್ ಮೂರು ಬಾರಿ ಲಭಿಸಿದೆ.
ಸಾನಿಯಾ ಶದಾದ್‌ಪುರ್ ಅವರು ಜನಪ್ರಿಯ ಸೆಲೆಬ್ರಿಟಿಗಳಿಗೆ ಮೇಕ್‌ಅಪ್ ಆರ್ಟಿಸ್ಟ್ ಮತ್ತು ಹೇರ್‌ಸ್ಟೈಲಿಸ್ಟ್ ಆಗಿದ್ದಾರೆ. ಶಾಹಿದ್ ಕಪೂರ್ ಪತ್ನಿ ಮಿರಾ ರಜಪೂತ್ ಕಪೂರ್ ಜೊತೆ ಕೆಲಸ ಮಾಡಿ ಸಾನಿಯ ಗುರುತಿಸಿಕೊಂಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications