ಬಯೋಬಬಲ್ ಉಲ್ಲಂಘನೆ: ಭಾರತದ ವಿರುದ್ಧದ ಸರಣಿಯಿಂದ ಲಂಕಾದ 3 ಆಟಗಾರರು ಹೊರಕ್ಕೆ

ಇಂಗ್ಲೆಂಡ್ ವಿರುದ್ಧದ ಸೀಮಿತ ಓವರ್‌ಗಳ ಸರಣಿಯ ಸಂದರ್ಭದಲ್ಲಿ ಬಯೋಬಬಲ್ ಉಲ್ಲಂಘನೆ ಕಾರಣಕ್ಕೆ ಮೂವರು ಆಟಗಾರರನ್ನು ಲಂಕಾ ಕ್ರಿಕೆಟ್ ಮಂಡಳಿ ಅಮಾನತು ಮಾಡಿತ್ತು. ಇದೀಗ ಈ ಮೂವರು ಕ್ರಿಕೆಟಿಗರು ಭಾರತದ ವಿರುದ್ಧ ನಡೆಯುವ ಸೀಮಿತ ಓವರ್‌ಗಳ ಸರಣಿಯಿಂದಲೂ ಹೊರಗುಳಿಯಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಶ್ರೀಲಂಕಾದ ಕ್ರಿಕೆಟಿಗರಾದ ಕುಸಲ್ ಮೆಂಡಿಸ್, ನಿರೋಶನ್ ಡಿಕ್ವೆಲ್ ಮತ್ತು ದನುಷ್ಕಾ ಗುಣತಿಲಕ ಇಂಗ್ಲೆಂಡ್‌ನಲ್ಲಿ ಟಿ20 ಸರಣಿಯ ಅಂತ್ಯದ ಬಳಿಕ ಬಯೋಬಬಲ್ ಉಲ್ಲಂಘನೆ ಮಾಡಿದ ಆರೋಪಕ್ಕೆ ಗುರಿಯಾಗಿದ್ದರು. ಇದಕ್ಕೆ ಪೂರಕವಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಕಾರಣ ಲಂಕಾ ಮಂಡಳಿ ಈ ಆಟಗಾರರನ್ನು ತಕ್ಷಣವೇ ಅಮಾನತುಗೊಳಿಸಿ ತವರಿಗೆ ವಾಪಾಸ್ ಕರೆಸಿಕೊಳ್ಳುವ ನಿರ್ಧಾರ ಮಾಡಿತ್ತು. ಮಂಗಳವಾರ ಈ ಆಟಗಾರರು ಶ್ರೀಲಂಕಾಗೆ ವಾಪಾಸಾಗಿದ್ದರು.
ಇನ್ನು ಲಂಕಾದ ಈ ಆಟಗಾರರು ಐಸೋಲೇಟೆಡ್ ಹೋಟೆಲ್‌ನಿಂದ ಹೊರಗೆ ಬಂದ ವಿಚಾರವಾಗಿ ತನಿಖೆ ನಡೆಸಲಾಗುತ್ತದೆ ಎಂದು ಲಂಕಾ ಕ್ರಿಕೆಟ್ ಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಎಎಫ್‌ಪಿ ವರದಿ ಮಾಡಿದೆ. ಈ ಪ್ರಕರಣದಲ್ಲಿ ಈ ಮೂವರು ತಪ್ಪಿತಸ್ಥರು ಎಂದು ಸಾಬೀತಾದರೆ ಕನಿಷ್ಟ ಒಂದು ವರ್ಷ ನಿಷೇಧಕ್ಕೊಳಗಾಗುವ ಸಾಧ್ಯತೆಯಿದೆ ಎಂದು ಎಎಫ್‌ಪಿ ಅಧಿಕಾರಿಗಳ ಹೇಳಿಕೆಯನ್ನು ಉಲ್ಲೇಖಿಸಿ ವರದಿ ಮಾಡಿದೆ.
ಜುಲೈ ತಿಂಗಳಿನಲ್ಲಿ ಭಾರತ ತಂಡ ಹಾಗೂ ಶ್ರೀಲಂಕಾ ಮೂರು ಟಿ20 ಹಾಗೂ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಭಾಗಿಯಾಗಲಿದೆ. ಶಿಖರ್ ಧವನ್ ನೇತೃತ್ವದ ತಂಡ ಜುಲೈ 23ರಿಂದ 25ರ ವರೆಗೆ ಈ ಸರಣಿಯಲ್ಲಿ ಭಾಗಿಯಾಗಲಿದೆ. ಈ ಸರಣಿಯಿಂದ ಕುಸಲ್ ಮೆಂಡಿಸ್, ನಿರೋಶನ್ ಡಿಕ್ವೆಲ್ ಮತ್ತು ದನುಷ್ಕಾ ಗುಣತಿಲಕ ಅವರು ಹೊರಗುಳಿಯಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications