Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕಪಿಲ್ ದೇವ್ ಪಾತ್ರಕ್ಕೆ ರಣವೀರ್ ಸಿಂಗ್ ಆಯ್ಕೆ

ಮುಂಬೈ, ಸೆ. 25: ಕ್ರಿಕೆಟ್ ಲೋಕ ಕಂಡ ಶ್ರೇಷ್ಠ ಕ್ರಿಕೆಟರ್ ಕಪಿಲ್ ದೇವ್ ಜೀವನಾಧಾರಿತ ಚಲನಚಿತ್ರಕ್ಕೆ ಚಾಲನೆ ಸಿಕ್ಕಿರುವ ಸುದ್ದಿ ಗೊತ್ತಿರಬಹುದು.

ಈ ಚಿತ್ರಕ್ಕೆ ಸೂಕ್ತ ನಾಯಕನ ಹುಡುಕಾಟ ಅಂತ್ಯಗೊಂಡಿದೆ. ನಟ ರಣವೀರ್ ಸಿಂಗ್ ಅವರು ಕಪಿಲ್ ದೇವ್ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ನಿರ್ದೇಶಕ ಕಬೀರ್ ಖಾನ್ ಪ್ರಕಟಿಸಿದ್ದಾರೆ.

 Biopic on India's 1983 World Cup victory; Ranveer Singh to play Kapil Dev

ಚೆಕ್ ದೆ ಇಂಡಿಯಾ ನಂತರ ಹಿಂದಿ ಸೇರಿದಂತೆ ಕೆಲ ಭಾಷೆಗಳಲ್ಲಿ ಕ್ರೀಡೆ ಹಾಗೂ ಕ್ರೀಡಾಪಟುಗಳ ಕುರಿತ ಚಿತ್ರಗಳು ಹೆಚ್ಚಾಗಿವೆ. ಪಾನ್ ಸಿಂಗ್ ತೋಮಾರ್, ಭಾಗ್ ಮಿಲ್ಕಾ ಭಾಗ್, ಮೇರಿ ಕೋಮ್, ಅಜರ್, ಎಂಎಸ್ ಧೋನಿ, ಸಚಿನ್ ಬಗ್ಗೆ ಚಿತ್ರಗಳು ಬಂದಿವೆ. ಈ ಸಾಲಿಗೆ ಕಪಿಲ್ ಅವರ ಚಿತ್ರ ಹೊಸದಾಗಿ ಸೇರ್ಪಡೆಯಾಗಲಿದೆ.

ಕಪಿಲ್ ಪಾತ್ರ ನಿರ್ವಹಿಸುವಂತೆ ಹೃತಿಕ್ ರೋಷನ್, ಅರ್ಜುನ್ ಕಪೂರ್ ರನ್ನು ಸಂಪರ್ಕಿಸಿದ್ದ ಕಬೀರ್ ಈಗ ರಣವೀರ್ ಸಿಂಗ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಕಬೀರ್ ಖಾನ್ ನಿರ್ದೇಶನದ ಈ ಚಿತ್ರದಲ್ಲಿ 1983ರ ವಿಶ್ವಕಪ್ ಗೆಲುವು, ಕಪಿಲ್ ಅವರ ನಾಯಕತ್ವದ ಬಗ್ಗೆ ಹೆಚ್ಚಿನ ಒತ್ತು ನೀಡಲಾಗಿದೆಯಂತೆ. ಮುಂದಿನ ವರ್ಷದಿಂದ ಚಿತ್ರೀಕರಣ ನಡೆಯಲಿದೆ. ವಿಬ್ರಿ ಮೀಡಿಯಾ, ಸಿಸಿಎಲ್ ನ ಸ್ಥಾಪಕ ವಿಷ್ಣುವರ್ಧನ್ ಇಂದೂರಿ ಹಾಗೂ ಫ್ಯಾಂಟಮ್ ಫಿಲಮ್ಸ್ ಅವರು ಈ ಚಿತ್ರ ನಿರ್ಮಿಸುತ್ತಿದ್ದಾರೆ.

Story first published: Wednesday, January 3, 2018, 10:05 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+