ಏಪ್ರಿಲ್ 25 ಗುರವಾರದಂದು ಎಲ್ಲಾ ಮಾದರಿಯ ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿ ಬದುಕಿಗೆ ಪಾಕಿಸ್ತಾನ ಮಹಿಳಾ ತಂಡದ ಮಾಜಿ ನಾಯಕಿ ಬಿಸ್ಮಾ ಮರೂಫ್ ಅವರು ನಿವೃತ್ತಿ ಘೋಷಣೆ ಮಾಡಿದ್ದಾರೆ.
2006ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪಾರ್ದಪಣೆ ಮಾಡಿದ್ದ ಬಿಸ್ಮಾ ಮರೂಪ್, ಈವರೆಗೆ 276 ಪಂದ್ಯಗಳಲ್ಲಿ ಪಾಕಿಸ್ತಾನ ಪರ ಕಣಕ್ಕೀಳಿದಿದ್ದಾರೆ. 2020 ಮತ್ತು 2023ರಲ್ಲಿ ಐಸಿಸಿ ಮಹಿಳಾ ಟಿ 20 ವಿಶ್ವಕಪ್ ಹಾಗು 2022 ರಲ್ಲಿ ಐಸಿಸಿ ಮಹಿಳಾ ವಿಶ್ವಕಪ್ ಸೇರಿದಂತೆ ಸುಮಾರು 96 ಪಂದ್ಯಗಳಲ್ಲಿ ನಾಯಯಕಿಯಾಗಿ ಪಾಕಿಸ್ತಾನ ತಂಡವನ್ನು ಮುನ್ನಡೆಸಿದ್ದಾರೆ.

ಸುಮಾರು 18 ವರ್ಷಗಳ ಕಾಲ ಪಾಕಿಸ್ತಾನ ಮಹಿಳಾ ಕ್ರಿಕೆಟ್‌ನಲ್ಲಿ ಆಲ್ ರೌಂಡರ್ ಆಗಿ ಬಿಸ್ಮಾ ಮರೂಪ್ ಮಿಂಚಿದ್ದಾರೆ. 80 ವಿಕೆಟ್‌ಗಳು, 33 ಅರ್ಧಶತಕಗಳನ್ನು ಒಳಗೊಂಡಂತೆ 6262 ಅಂತರಾಷ್ಟ್ರೀಯ ರನ್‌ಗಳನ್ನು ಬಿಸ್ಮಾ ಮರೂಪ್ ಕಲೆ ಹಾಕಿದ್ದಾರೆ.
276 ಅಂತರಾಷ್ಟ್ರೀಯ ಪಂದ್ಯಗಳ ಪೈಕಿ 136 ಏಕದಿನ ಪಂದ್ಯಗಳಲ್ಲಿ ಬಿಸ್ಮಾ ಮರೂಪ್ ಅವರು, 29.55 ರ ಸರಾಸರಿಯಲ್ಲಿ 3369 ರನ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ 21 ಅರ್ಧಶತಕಗಳು ಮತ್ತು 44 ವಿಕೆಟ್‌ಗಳನ್ನು ಪಡೆದಿದ್ದಾರೆ. ಅಲ್ಲದೆ, 140 ಟಿ 20 ಪಂದ್ಯಗಳನ್ನು ಆಡಿರುವ ಬಿಸ್ಮಾ ಮರೂಪ್, 27.55ರ ಸರಾಸರಿಯಲ್ಲಿ 2893 ರನ್ ಗಳಿಸಿದ್ದು, 12 ಅರ್ಧಶತಕಗಳನ್ನು ಸಿಡಿಸಿ 36 ವಿಕೆಟ್‌ಗಳನ್ನು ತೆಗೆದಿದ್ದಾರೆ.
ನಾನು ಹೆಚ್ಚು ಇಷ್ಟಪಡುವ ಆಟದಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ. ಮೊದಲಿನಿಂದ ಇಲ್ಲಿಯವರೆಗೆ ನನ್ನ ಕ್ರಿಕೆಟ್ ವೃತ್ತಿ ಜೀವನದಲ್ಲಿ ಬೆಂಬಲ ನೀಡಿದ ನನ್ನ ಕುಟುಂಬಕ್ಕೆ ಹಾಗು ನನ್ನಲ್ಲಿ ನಂಬಿಕೆ ಇಟ್ಟು ನನ್ನ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆ ನೀಡಿದಿದ್ದಕ್ಕಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದಿದ್ದಾರೆ.
ಈ ವೇಳೆ ತನ್ನ ಸಹಾ ಆಟಗಾರರನ್ನು ಬಿಸ್ಮಾ ಮರೂಪ್ ನೆನೆದು ಭಾವುಕರಾಗಿದ್ದಾರೆ. ನಾನು ನನ್ನ ಸಹಾ ಆಟಗಾರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ನನ್ನೊಂದಿಗೆ ಅವರು ಕುಟುಂಬಸ್ಥರಂತೆ ಇದ್ದರು. ಹೀಗಾಗಿ ಮೈದಾನದ ಒಳಗೆ ಮತ್ತು ಹೊರಗೆ ಇಟ್ಟುಕೊಂಡಿದ್ದ ಒಡನಾಟವನ್ನು ಶಾಶ್ವತವಾಗಿ ಮುಂದುವರೆಸುತ್ತೇನೆ ಎಂದು ಹೇಳಿದ್ದಾರೆ.