For Quick Alerts
ALLOW NOTIFICATIONS  
For Daily Alerts
 

Super Over ಹೈಡ್ರಾಮಾ: ಔಟ್‌, ನಟೌಟ್‌ ಗೊಂದಲ; ಆಗಿದ್ದೇನು?

ಭಾರತ ಹಾಗೂ ಶ್ರೀಲಂಕಾ ನಡುವಣ ಏಷ್ಯಾ ಕಪ್‌ ಟಿ20 ಟೂರ್ನಿಯ ಸೂಪರ್ 4 ಹಂತದ ಪಂದ್ಯ ದುಬೈನಲ್ಲಿ ನಡೆಯಿತು. ಈ ಪಂದ್ಯದಲ್ಲಿ ಉಭಯ ತಂಡಗಳು ಭರ್ಜರಿ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆಯಿತು. ಸೂಪರ್‌ 4 ಹಂತದ ಕೊನೆಯ ಪಂದ್ಯದಲ್ಲಿ ಎರಡೂ ತಂಡಗಳು ನಿಗದಿತ ಓವರ್‌ಗಳಲ್ಲಿ ಸಮ ರನ್‌ಗಳಿಸಿದವು. ಹೀಗಾಗಿ ಫಲಿತಾಂಶವನ್ನು ಅರಿಯಲು ಸೂಪರ್‌ ಓವರ್‌ ಮೊರೆ ಹೋಗಲಾಯಿತು. ಸೂಪರ್‌ ಓವರ್‌ನಲ್ಲಿ ಹೈಡ್ರಾಮಾ ಒಂದು ನಡೆಯಿತು. ಹಾಗಿದ್ದರೆ ಮೈದಾನದಲ್ಲಿ ಆಗಿದ್ದೇನು ಎಂಬ ಬಗ್ಗೆ ಕಂಪ್ಲೀಟ್ ರಿಪೋರ್ಟ್‌ ಇಲ್ಲಿದೆ.

ಸೂಪರ್‌ 4 ಹಂತದ ಕೊನೆಯ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 202 ರನ್‌ ಕಲೆ ಹಾಕಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಶ್ರೀಲಂಕಾ 20 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 202 ರನ್‌ ಸೇರಿಸಿತು. ಶ್ರೀಲಂಕಾ ಪರ ಪತನು ನಿಸಂಕಾ ಭರ್ಜರಿ ಶತಕ ಬಾರಿಸಿ ಮಿಂಚಿದರು. ಆದರೂ ಈ ಪಂದ್ಯ ಟೈನಲ್ಲಿ ಅಂತ್ಯವಾಯಿತು. ಆಗ ಪಂದ್ಯದ ಫಲಿತಾಂಶವನ್ನು ಅರಿಯಲು ಸೂಪರ್ ಓವರ್‌ ಮೊರೆ ಹೋಗಲಾಯಿತು.

Bizarre Cricket Law Saves Shanaka Umpire s Dead Ball Call Nullifies Samson s Run-Out

ನಿರೀಕ್ಷೆಯಂತೆ ಸೂಪರ್ ಓವರ್‌ ಬೌಲಿಂಗ್ ಮಾಡಲು ಟೀಮ್ ಇಂಡಿಯಾದ ಭರವಸೆಯ ವೇಗಿ ಅರ್ಷದೀಪ್ ಸಿಂಗ್ ಸಜ್ಜಾದರು. ಇವರು ತಮ್ಮ ವೈಡ್‌ ಯಾರ್ಕರ್‌ ಮೂಲಕ ಲಂಕಾ ಬ್ಯಾಟರ್‌ಗಳನ್ನು ಕಾಡಿದರು. ಅಲ್ಲದೆ ಈ ಓವರ್‌ನಲ್ಲಿ 2 ವಿಕೆಟ್‌ ಪಡೆದು ಬೀಗಿದರು. ಲಂಕಾ ತಂಡದ ಕುಶಾಲ್ ಪೆರೆರಾ ಮೊದಲ ಎಸೆತದಲ್ಲೇ ಔಟಾದರು. 202 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಲಂಕಾ ಸೂಪರ್ ಓವರ್‌ನ್ಲಿ ಎಡವಿತು. 2 ರನ್‌ ಆಗುವಷ್ಟರಲ್ಲಿ ಲಂಕಾ 2 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ನಿಯಮ ಹೇಳುವುದೇನು?

ಸೂಪರ್‌ ಓವರ್‌ನಲ್ಲಿ ಒಂದು ನಾಟಕೀಯ ಘಟನೆಯೊಂದು ನಡೆಯಿತು. ಈ ಓವರ್‌ನ ನಾಲ್ಕನೇ ಎಸೆತದಲ್ಲಿ ಶನಕ ಅವರಿಗೆ ಅರ್ಷದೀಪ್‌ ಖೆಡ್ಡಾ ತೋಡಿದರು. ಅರ್ಷದೀಪ್‌ ವಿಕೆಟ್‌ಗೆ ಅಪೀಲ್ ಮಾಡಿದರು. ಅಷ್ಟೊತ್ತಿಗಾಗಲೇ ಶನಕ ಕ್ರೀಸ್‌ ಬಿಟ್ಟು ಆಗಿತ್ತು. ಇವರು ಕ್ರೀಸ್‌ ಬಿಟ್ಟಿದ್ದನ್ನು ಗಮನಿಸಿದ ಸಂಜು ಸ್ಯಾಮ್ಸನ್‌ ವಿಕೆಟ್‌ಗೆ ಬಡೆದರು. ಇದರರ್ಥದಲ್ಲಿ ಒಂದೇ ಚೆಂಡಿನಲ್ಲಿ 2 ಔಟ್‌ ಆದವು. ಆದರೆ ನಿಯಮ ಶ್ರೀಲಂಕಾದ ಪರವಾಯಿತು.

ಅರ್ಷದೀಪ್‌ ವಿಕೆಟ್‌ಗೆ ಅಪೀಲ್‌ ಮಾಡಿದ ಬಳಿಕ ಅಂಪೈರ್ ವಿಕೆಟ್‌ ನೀಡಿದರು. ಅಂಪೈರ್ ಕ್ಯಾಚ್ ಔಟ್ ನೀಡಿದ ತಕ್ಷಣ, ಚೆಂಡನ್ನು ಡೆಡ್ ಬಾಲ್ ಎಂದು ಪರಿಗಣಿಸಲಾಯಿತು. ಹೀಗಾಗಿ ಆ ಚೆಂಡು ಮಾನ್ಯವಾಗಿರಲಿಲ್ಲ. ಮೂರನೇ ಅಂಪೈರ್ ಮರು ಪರಿಶೀಲಿಸಿ ನಟೌಟ್‌ ಎಂದು ನೀಡಿದರು. ಇದರ ಲಾಭ ಪಡೆಯುವಲ್ಲಿ ಶನಕ ವಿಫಲರಾದರು. ಮುಂದಿನ ಎಸೆತದಲ್ಲೇ ಇವರು ಔಟ್ ಆದರು.

ಲಂಕಾ ನೀಡಿದ್ದ 3 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ ವನಿಂದು ಹಸರಂಗ ಎಸೆದ ಮೊದಲ ಎಸೆತದಲ್ಲೇ 3 ರನ್‌ ಪಡೆದು ಬೀಗಿತು. ಈ ಮೂಲಕ ಫೈನಲ್‌ಗೂ ಮುನ್ನ ಆತ್ಮವಿಶ್ವಾಸ ಹೆಚ್ಚಿಕೊಂಡಿತು.

Story first published: Saturday, September 27, 2025, 10:48 [IST]
Other articles published on Sep 27, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+