ಹೊಂಜು, ಮಂಜು, ಮಳೆ ಅಷ್ಟೇ ಅಲ್ಲಾ: ಈ ಕಾರಣಗಳಿಂದಲೂ ಕ್ರಿಕೆಟ್ ಪಂದ್ಯ ರದ್ದು
ಲಕ್ನೋದಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ನಾಲ್ಕನೇ ಟಿ20 ಪಂದ್ಯ ದಟ್ಟ ಮಂಜಿನ ಕಾರಣದಿಂದ ರದ್ದಾಗಿದೆ. ಈ ರೀತಿಯ ಸನ್ನಿವೇಶಗಳು ಕ್ರಿಕೆಟ್ ಅಂಗಳದಲ್ಲಿ ಅಪರೂಪ. ಸಾಮಾನ್ಯವಾಗಿ ಕೆಟ್ಟ ಹವಾಮಾನ, ಮಳೆ, ಮಂದ ಬೆಳಕಿನಿಂದ ಪಂದ್ಯಗಳನ್ನು ರದ್ದಾಗಿರುವುದನ್ನು ನಾವು ನೋಡಿರುತ್ತೇವೆ. ಆದರೆ ಈ ವರದಿಯಲ್ಲಿ ವಿಶ್ವದಲ್ಲಿ ಯಾವೆಲ್ಲಾ ಕಾರಣಗಳಿಗೆ ಪಂದ್ಯಗಳು ಸ್ಥಗಿತವಾಗಿವೆ? ಇಲ್ಲಿದೆ ವರದಿ.
ಶ್ರೀಲಂಕಾದಲ್ಲಿ ಆಗ ವಿಶ್ವಕಪ್ ಆಯೋಜಿಸಲಾಗಿತ್ತು. ಈ ವಿಶ್ವಕಪ್ ಆಯೋಜನೆಗೆ ಎರಡುವಾರಗಳ ಮೊದಲು ಲಂಕಾದಲ್ಲಿ ಸ್ಫೋಟವಾಯಿತು. ಕೊಲಂಬೊದ ಸೆಂಟ್ರಲ್ ಬ್ಯಾಂಕ್‌ನಲ್ಲಿ ನಡೆದ ಸ್ಫೋಟದಲ್ಲಿ ಸುಮಾರು 91 ಮಂದಿ ಸಾವನ್ನಪ್ಪಿದರು. ಈ ಸ್ಫೋಟದ ಬಳಿಕ ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ತಂಡಗಳು ಭದ್ರತಾ ಕಾರಣಗಳನ್ನು ನೀಡಿ ಶ್ರೀಲಂಕಾದಲ್ಲಿ ಆಡಲು ನಿರಾಕರಿಸಿದ್ದವು.

ವಿಶ್ವ ಕ್ರಿಕೆಟ್ ಎಂದು ನೆನಪು ಹಾರದ ದಿನಗಳಲ್ಲಿ ಸೆಪ್ಟೆಂಬರ್ 17, 2021 ಕೂಡಾ ಒಂದು. ಪಾಕಿಸ್ತಾನದ ಪ್ರವಾಸವನ್ನು ನ್ಯೂಜಿಲೆಂಡ್ ಬೆಳೆಸಿತ್ತು. ಈ ವೇಳೆ ಉಭಯ ದೇಶಗಳ ನಡುವೆ ಸೀಮಿತ ಓವರ್‌ಗಳ ಪಂದ್ಯ ನಡೆದಿತ್ತು. ಇನ್ನೇನು ಆಟಗಾರರು ರೆಡಿ ಆಗಿದ್ದರು. ಅಲ್ಲದೆ ಹೋಟೆಲ್ ಬಿಡಲು ಸಿದ್ಧತೆ ನಡೆಸಿದ್ದರು. ಪ್ರೇಕ್ಷಕರು ಮೈದಾನದಲ್ಲಿ ಜಮಾಯಿಸಿದ್ದರು. ಆದರೆ ಇದಕ್ಕಿದ್ದಂತೆ ನ್ಯೂಜಿಲೆಂಡ್ ತಂಡ ಭದ್ರತಾ ನೆಪವನ್ನು ಒಡ್ಡಿ ಪ್ರವಾಸವನ್ನು ಮೊಟಕುಗೊಳಿಸಿತು. ಅಲ್ಲದೆ ಇಸ್ಲಾಮಾಬಾದ್‌ನಿಂದ ದುಬೈಗೆ ಹಾರಿತು. ಈ ವೇಳೆ ಕಿವೀಸ್ ತಂಡಕ್ಕೆ ಭಯೋತ್ಪಾದಕ ದಾಳಿಯ ಭಯ ಹೆಚ್ಚಾಗಿ ಕಾಡಿತ್ತು.
ಕಪ್ಪು ಚುಕ್ಕೆ
ಭಾರತೀಯ ಕ್ರಿಕೆಟ್ ಇತಿಹಾಸದ ಕಪ್ಪು ಚುಕ್ಕೆಗಳಲ್ಲಿ ಡಿಸೆಂಬರ್ 27, 2009 ಒಂದು. ಈ ದಿನ ಭಾರತ ಹಾಗೂ ಶ್ರೀಲಂಕಾ ತಂಡಗಳು ನವದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಕಾದಾಟ ನಡೆಸಿದ್ದವು. ಈ ವೇಳೆ ಪಿಚ್ ತಯಾರಿಕೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಲಾಗಿತ್ತು. ಪಂದ್ಯ ಆರಂಭವಾದ ಕೆಲವೇ ಸಮಯದಲ್ಲಿ ಪಿಚ್ ವರ್ತನೆಯನ್ನು ಕಂಡು ಪ್ರವಾಸಿ ತಂಡದ ಬ್ಯಾಟರ್‌ಗಳು ಹೆದರಿದರು. ಶ್ರೀಲಂಕಾದ ನಾಯಕ ಕುಮಾರ್ ಸಂಗಕ್ಕಾರ ಈ ಪಿಚ್‌ನಲ್ಲಿ ಬ್ಯಾಟಿಂಗ್ ಮಾಡುವುದು "ಜೀವಕ್ಕೆ ಅಪಾಯಕಾರಿ" ಎಂದು ಅಂಪೈರ್‌ಗೆ ಮನವಿ ಮಾಡಿದರು. ಭಾರತದ ನಾಯಕ ಸಹ ಇದನ್ನು ಒಪ್ಪಿಕೊಂಡು ಪಂದ್ಯವನ್ನು ರದ್ದು ಮಾಡಿದರು.
ಮುಂಬೈನ ವಾಂಖೆಡೆ ಕ್ರೀಡಾಂಗಣ ಸಹ ಇಂತಹ ಒಂದು ಘಟನೆಗೆ ಸಾಕ್ಷಿಯಾಯಿತು. 1991ರಲ್ಲಿ ಭಾರತ ಹಾಗೂ ಪಾಕ್ ಪಂದ್ಯ ನಡೆದಿತ್ತು. ಈ ವೇಳೆ ಕೆಲವು ಕಿಡಿಗೇಡಿಗಳು, ಪಂದ್ಯ ಆರಂಭಕ್ಕೂ ಮೊದಲು ಪಿಚ್ ಅಗೆದು ಹಾನಿಗೊಳಿಸಿದರು. ಹದಗೆಟ್ಟ ಪಿಚ್ ಹಾಗೂ ಕೆಲವು ಸಂಘಟನೆಗಳ ಬೆದರಿಕೆಯಿಂದ ಪಾಕ್ ಭಾರತ ಪ್ರವಾಸವನ್ನು ರದ್ದುಗೊಳಿಸಿತ್ತು. ಈ ಸಾಲಿಗೆ ಈಗ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ನಾಲ್ಕನೇ ಪಂದ್ಯ ಸಹ ಸೇರಿದೆ.
ಈ ಸಾಲಿಗೆ ಈಗ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ನಾಲ್ಕನೇ ಪಂದ್ಯ ಸಹ ಸೇರಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications