IND A vs SL A: ವಿಚಿತ್ರ ರನ್-ಔಟ್; ಔಟಾಗಬೇಕಿದ್ದ ರುತುರಾಜ್ ಬಚಾವ್, ಪ್ರಿಯಾಂಶ್‌ಗೆ ನಿರಾಸೆ!
ಮಂಗಳವಾರ ಶ್ರೀಲಂಕಾ ಎ vs ಭಾರತ ಎ ತ್ರಿಕೋನ ಸರಣಿಯ ಮೊದಲ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಅತ್ಯಂತ ವಿಚಿತ್ರವಾದ ರನ್-ಔಟ್ ನಡೆದಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಎ ತಂಡದ ಪರ ವೈಭವ್ ಸೂರ್ಯವಂಶಿ, ಪ್ರಭ್‌ಸಿಮ್ರನ್ ಸಿಂಗ್ ರನ್ ಕಲೆ ಹಾಕುವಲ್ಲಿ ವಿಫಲರಾದರು. ರುತುರಾಜ್ ಗಾಯಕ್ವಾಡ್, ಪ್ರಿಯಾಂಶ್ ಆರ್ಯ ಜವಾಬ್ದಾರಿಯನ್ನು ಹೊತ್ತುಕೊಂಡರು.
ರುತುರಾಜ್ ಹಾಗೂ ಪ್ರಿಯಾಂಶ್ ಜೋಡಿ ಇನಿಂಗ್ಸ್ ಮುನ್ನಡೆಸುವ ಜವಾಬ್ದಾರಿಯನ್ನು ಹೊತ್ತುಕೊಂಡಿತು. ಈ ಅವಧಿಯಲ್ಲಿ ಈ ಜೋಡಿ ಆಟ ರನೌಟ್ ಮೂಲಕ ಕೊನೆಯಾಯಿತು. ಆದರೆ ಈ ರನೌಟ್ ಆಗಿದ್ದು ಯಾರು ಎಂಬ ಪ್ರಶ್ನೆಗೆ ಫೀಲ್ಡ್ ಅಂಪೈರ್‌ಗಳ ಬಳಿ ಉತ್ತರವಿರಲಿಲ್ಲ.

ಪಂದ್ಯದ 13ನೇ ಓವರ್‌ನಲ್ಲಿ ರುತುರಾಜ್ ಗಾಯಕ್ವಾಡ್ ಲಾಂಗ್ ಆಫ್ ಕಡೆ ಚೆಂಡನ್ನು ತಳ್ಳಿದರು. ಚೆಂಡನ್ನು ತಳ್ಳುತ್ತಿದ್ದಂತೆ ಎರಡು ರನ್‌ಗೆ ರುತುರಾಜ್ ಬೇಡಿಕೆ ಇಟ್ಟರು. ಆರಂಭದಲ್ಲಿ ಪ್ರಿಯಾಂಶ್ ಒಪ್ಪಿಕೊಂಡರು. ಆದರೆ ಕೊನೆಯಲ್ಲಿ ರುತುರಾಜ್ ಗಾಯಕ್ವಾಡ್ ಹಾಗೂ ಪ್ರಿಯಾಂಶ್ ಆರ್ಯ ಒಂದೇ ತುದಿಯಲ್ಲಿ ನಿಂತಿದ್ದರು. ಇಬ್ಬರೂ ಒಂದೇ ತುದಿಯಲ್ಲಿ ನಿಂತಿದ್ದರಿಂದ ಯಾರು ಔಟ್ ಎಂದು ಹೇಳುವುದು ಅಂಪೈರ್‌ಗೆ ಕಷ್ಟವಾಯಿತು.
ಶ್ರೀಲಂಕಾದ ಫೀಲ್ಡರ್ ಚೆಂಡನ್ನು ಎಸೆದಾಗ, ಪ್ರಿಯಾಂಶ್ ಮತ್ತು ರುತುರಾಜ್ ಇಬ್ಬರೂ ತಮ್ಮ ಬ್ಯಾಟ್‌ಗಳನ್ನು ಕ್ರೀಸ್‌ನೊಳಗೆ ತರಲು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದರು. ಪ್ರಿಯಾಂಶ್ ಈಗಾಗಲೇ ಅದೇ ತುದಿಯಲ್ಲಿ ನಿಂತಿದ್ದರಿಂದ ರುತುರಾಜ್ ಗೈಕ್‌ವಾಡ್ ಇಲ್ಲಿ ಔಟ್ ಆಗುವುದು 99% ಖಚಿತವಾಗಿತ್ತು.
ಕೊನೆಯ ಕ್ಷಣದಲ್ಲಿ, ಶ್ರೀಲಂಕಾದ ವಿಕೆಟ್ ಕೀಪರ್ ಡಿಕ್‌ವೆಲ್ಲಾ ಅವರ ಶೂ ಪಂದ್ಯದ ಎಲ್ಲರ ಲೆಕ್ಕಾಚಾರ ಉಲ್ಟಾಮಾಡಿತು. ಪರಿಣಾಮ ಪ್ರಿಯಾಂಶ್ ಆರ್ಯ ಔಟ್ ಆದರು. ರುತುರಾಜ್ ಗಾಯಕ್ವಾಡ್ ತಾವು ಔಟ್ ಎಂದು ತಿಳಿದು ಹೆಜ್ಜೆ ಹಾಕಲು ಆರಂಭಿಸಿದ್ದರು. ಆಗ ಮೂರನೇ ಅಂಪೈರ್ ಅವರನ್ನು ತಡೆದು ಪ್ರಿಯಾಂಶ್ ಆರ್ಯರನ್ನು ಔಟ್ ಎಂದು ತಿಳಿಸಿದರು.

ಪಂದ್ಯದ ಚಿತ್ರಣ
ಇದೇ ಪಂದ್ಯದಲ್ಲಿ ಭರವಸೆಯ ಬ್ಯಾಟರ್ ರುತುರಾಜ್ ಗಾಯಕ್ವಾಡ್ ಅಬ್ಬರ ನಡೆಸಿದರು. ಇವರು ತಮ್ಮ ವೃತ್ತಿಜೀವನದ 100ನೇ ಲಿಸ್ಟ್ ಎ ಪಂದ್ಯವನ್ನು ಆಡಿದರು. ಅಲ್ಲದೆ ಈ ಪಂದ್ಯವನ್ನು ರುತುರಾಜ್ ಸ್ಮರಣೀಯವಾಗಿಸಿ ಆಡಿದರು. ಈ ಪಂದ್ಯದಲ್ಲಿ ರುತುರಾಜ್ 104 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್‌ಗಳ ನೆರವಿನಿಂದ 101 ರನ್ ಬಾರಿಸಿ ಔಟ್ ಆದರು. ನಾಯಕ ತಿಲಕ್ ವರ್ಮಾ 60 ರನ್ ಬಾರಿಸಿ ಮಿಂಚಿದರು. ಟೀಮ್ ಇಂಡಿಯಾ 50 ಓವರ್‌ಗಳಲ್ಲಿ 6 ವಿಕೆಟ್‌ಗೆ 277 ರನ್ ಸೇರಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications