ಡೆಲ್ಲಿಗೆ ಆಘಾತ! ಐಪಿಎಲ್ 2017ನಿಂದ ಜೆ ಪಿ ಡುಮಿನಿ ಔಟ್!
ನವದೆಹಲಿ, ಮಾರ್ಚ್ 20 : ದಕ್ಷಿಣ ಆಫ್ರಿಕಾದ ಆಲ್ ರೌಂಡರ್ ಜೆ.ಪಿ ಡುಮಿನಿ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 10ನೇ ಆವೃತ್ತಿಯಿಂದ ಹೊರಗುಳಿಯಲಿದ್ದಾರೆ. ಈ ಬಗ್ಗೆ ಸೋಮವಾರ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಮುಖ್ಯ ಕಾರ್ಯನಿರ್ವಹಕ ಹೇಮಂತ್ ದುವಾ ಅವರು ಮಾಹಿತಿ ನೀಡಿದ್ದಾರೆ.
'ವೈಯಕ್ತಿಕ ಕಾರಣಗಳಿಂದ ಈ ಬಾರಿಯ ಐಪಿಎಲ್ ನಲ್ಲಿ ಆಡುತ್ತಿಲ್ಲ. ಇದು ನನ್ನ ಪಾಲಿನ ಕಠಿಣ ನಿರ್ಧಾರ' ಎಂದು ಡುಮಿನಿ ತಿಳಿಸಿದ್ದಾರೆ. ಇದರಿಂದ ಡೆಲ್ಲಿ ಡೇರ್ ಡೆವಿಲ್ಸ್ ತಂಡಕ್ಕೆ ಆಘಾತವಾಗಿದೆ. [ಐಪಿಎಲ್ 2017: ಡೆಲ್ಲಿ ಡೇರ್ ಡೆವಿಲ್ ಪಂದ್ಯಗಳ ಟೈಂ ಟೇಬಲ್]

'ಡುಮಿನಿ ಅವರ ಈ ನಿರ್ಧಾರ ಸಹಜವಾಗುಯೇ ನಿರಾಸೆ ಮೂಡಿಸಿದೆ. ಆದರೆ, ಅವರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲಾಗಿದೆ. ಕೆಲವೇ ದಿನಗಳಲ್ಲಿ ಡುಮಿನಿ ಸ್ಥಾನಕ್ಕೆ ಬೇರೊಬ್ಬ ಆಟಗಾರನನ್ನು ಆಯ್ಕೆ ಮಾಡಲಾಗುವುದು' ಎಂದು ಹೇಮಂತ್ ದುವಾ ಹೇಳಿದ್ದಾರೆ.
2014ರಲ್ಲಿ ಡೆಲ್ಲಿ ತಂಡವನ್ನು ಸೇರಿಕೊಂಡಿದ್ದ ಡುಮಿನಿ, 2015ರ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ತಂಡವನ್ನು ಮುನ್ನಡೆಸಿದ್ದರು.
Story first published: Wednesday, January 3, 2018, 10:04 [IST]
Other articles published on Jan 3, 2018
Read in English: Duminy withdraws from IPL 2017
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications