ದುಬೈನಲ್ಲಿ ನಡೆಯುತ್ತಿರುವ ಐಪಿಎಲ್ ಆವೃತ್ತಿಯ 33ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಿದೆ. ಈ ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಗಾಯದ ಅತಂಕ ಉಂಟಾಗಿದೆ. ತಂಡದ ಪ್ರಮುಖ ಬೌಲರ್ ಮಾರ್ಕಸ್ ಸ್ಟೋಯ್ನಿಸ್ ಬೌಲಿಂಗ್ ವೇಳೆ ಗಾಯಗೊಂಡಿದ್ದು ಮೈದಾನದಿಂದ ಹೊರ ನಡೆದಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬೌಲಿಂಗ್ ದಾಳಿಯ ಸಂದರ್ಭದಲ್ಲಿ ಸ್ಟೋಯ್ನಿಸ್ ಸ್ನಾಯು ನೋವಿಗೆ ಒಳಗಾಗಿದ್ದಾರೆ. ಹೀಗಾಗಿ ಮೈದಾನದಿಂದ ಅರ್ಧಕ್ಕೆ ಸ್ಟೋಯ್ನಿಸ್ ವಾಪಾಸಾದರು. ಸ್ಟೋಯ್ನಿಸ್ ಗಾಯಗೊಂಡಿರುವುದು ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮಾತ್ರವೇ ಹಿನ್ನಡೆಯಲ್ಲ ಇದು ಆಸ್ಟ್ರೇಲಿಯಾ ತಂಡಕ್ಕೂ ಕಹಿ ಸುದ್ದಿ. ಮುಂಬರುವ ಟಿ20 ವಿಶ್ವಕಪ್ ತಂಡದ ಸದಸ್ಯನಾಗಿದ್ದಾರೆ ಮಾರ್ಕಸ್ ಸ್ಟೋಯ್ನಿಸ್.
ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ 8 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಪಂತ್ ಹುಡುಗರ ಗೆಲುವಿನ ಓಟ ಮುಂದುವರಿದಿದೆ. ಮತ್ತೊಂದೆಡೆ ಸೋಲಿನ ಮೇಲೆ ಸೋಲು ಕಂಡಿರುವ ಸನ್ರೈಸರ್ಸ್ ಹೈದರಾಬಾದ್ ತಂಡ ಪ್ಲೇಆಫ್ ಹಂತಕ್ಕೇರುವ ಅವಕಾಶವನ್ನು ಬಹುತೇಕ ಮುಚ್ಚಿಕೊಂಡಿದೆ.
ಟಾಸ್ ಗೆದ್ದ ಸನ್ರೈಸರ್ಸ್ ಹೈದರಾಬಾದ್ ತಂಡ ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಆದರೆ ನೀರಸ ಆರಂಭ ಕಂಡ ಹೈದರಾಬಾದ್ಗೆ ಯಾವ ಬ್ಯಾಟ್ಸ್ಮನ್ನಿಂದ ಕೂಡ ಉತ್ತಮ ಕೊಡುಗೆ ಲಭ್ಯವಾಗಲಿಲ್ಲ. ಅಂತಿಮವಾಗಿ 9 ವಿಕೆಟ್ ಕಳೆದುಕೊಂಡು 134 ರನ್ಗಳಿಸಲು ಶಕ್ತವಾಯಿತು. ಅಬ್ದುಲ್ ಸಮದ್ ಹಾಗೂ ರಶೀದ್ ಖಾನ್ ಕೊನೆಯ ಹಂತದಲಲ್ಇ ನಿಡಿದ ಪ್ರದರ್ಶನದಿಂದಾಗಿ ಹೈದರಾಬಾದ್ ಈ ಮೊತ್ತವನ್ನು ಎದುರಾಳಿಗೆ ಗುರಿಯಾಗಿ ನೀಡಲು ಶಕ್ತವಾಯಿತು.
ಇನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರವಾಗಿ ಬೌಲಿಂಗ್ನಲ್ಲಿ ಕಗಿಸೋ ರಬಡಾ ಹಾಗೂ ಅನ್ರಿಕ್ ನಾರ್ಕಿಯಾ ಮಿಂಚಿದರು. ರಬಡಾ 3 ವಿಕೆಟ್ ಪಡೆದು ಮಿಂಚಿದರೆ ನಾರ್ಕಿಯಾ 4 ಓವರ್ಗಳಲ್ಲಿ ಕೇವಲ 12 ರನ್ ನೀಡಿ 2 ವಿಕೆಟ್ ಪಡೆದು ಮಿಂಚಿದರು. ಅಕ್ಷರ್ ಪಟೇಲ್ ಕೂಡ 2 ವಿಕೆಟ್ ಕಬಳಿಸಿದ್ದಾರೆ. ಇನ್ನು ಡೆಲ್ಲಿ ಬೌಲಿಂಗ್ ವೇಳೆ ವೇಗಿ ಮಾರ್ಕಸ್ ಸ್ಟೋಯ್ನಿಸ್ ಸ್ನಾಯುಸೆಳೆತಕ್ಕೆ ಒಳಗಾಗಿ ಮೈದಾನದಿಂದ ಹೊರನಡೆದಿರುವುದು ಡೆಲ್ಲಿ ತಂಡಕ್ಕೆ ಗಾಯದ ಆತಂಕ ಮೂಡಿಸಿದೆ.
ಇನ್ನು ಸನ್ರೈಸರ್ಸ್ ಹೈದರಾಬಾದ್ ತಂಡ ನೀಡಿದ 135 ರನ್ಗಳ ಗುರಿಯನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ ಸುಲಭವಾಗಿ ಬೆನ್ನಟ್ಟಿದೆ. ತಂಡದ ಮೊತ್ತ 20 ರನ್ಗಳಾಗುವಷ್ಟರಲ್ಲಿ ಆರಂಭೀಕ ಆಟಗಾರ ಪೃಥ್ವಿ ಶಾ ಔಟಾಗಿ ಫೆವಿಲಿಯನ್ ಸೇರಿದ್ದರು. ಆದರೆ ನಂತರ ಡೆಲ್ಲಿ ಬ್ಯಾಟ್ಸ್ಮನ್ಗಳ ವಿರುದ್ಧ ಮೇಲುಗೈ ಸಾಧಿಸಲು ಹೈದರಾಬಾದ್ ತಂಡ ಸಂಪೂರ್ಣ ವಿಫಲವಾಯಿತು. ಡೆಲ್ಲಿ ತಂಡದ ಸ್ಕೋರ್ 72 ರನ್ಗಳಾಗುವಷ್ಟರಲ್ಲಿ ಆರಂಭಿಕ ಆಟಗಾರ ಶಿಖರ್ ಧವನ್ ರಶೀದ್ ಖಾನ್ಗೆ ವಿಕೆಟ್ ಒಪ್ಪಿಸಿದ್ದರು. ಬಳಿಕ ಜೊತೆಯಾದ ಶ್ರೇಯಸ್ ಐಯ್ಯರ್ ಹಾಗೂ ರಿಷಭ್ ಪಂತ್ ಜೋಡಿ ತಂಡಕ್ಕೆ ಯಾವುದೇ ಹಿನ್ನಡೆಯಾಗದಂತೆ ನೋಡಿಕೊಂಡರು.