Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಡೆಕನ್ ಚಾರ್ಜರ್ಸ್ ಎದುರಿನ ಕದನ ಗೆದ್ದ ಭಾರತೀಯ ಕ್ರಿಕೆಟ್ ಬೋರ್ಡ್

Board of Control for Cricket in India wins legal battle against Deccan Chargers

ನವದೆಹಲಿ: ಡೆಕನ್ ಕ್ರಾನಿಕಲ್ ಹೋಲ್ಡಿಂಗ್ಸ್ (ಡಿಸಿಎಸ್‌ಎಲ್) ಎದುರಿನ ಕಾನೂನಾತ್ಮಕ ಕದನವನ್ನು ಬೋರ್ಡ್ ಆಫ್ ಕಂಡ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಗೆದ್ದಿದೆ. ಈ ಬೆಳವಣಿಗೆ ಭಾರತೀಯ ಕ್ರಿಕೆಟ್‌ ಬೋರ್ಡ್‌ಗೆ ದೊಡ್ಡ ನಿರಾಳತೆ ನೀಡಿದೆ.

ಬಾಂಬೆ ಕೋರ್ಟ್‌ನಲ್ಲಿ ಬಿಸಿಸಿಐ ವಿರುದ್ಧ ಐಪಿಎಲ್ ಹಿಂದಿನ ಫ್ರಾಂಚೈಸಿ ಡೆಕ್ಕನ್ ಚಾರ್ಜರ್ಸ್ ದಾವೆ ಹೂಡಿತ್ತು. ಆದರೆ ಬಾಂಬೆ ಕೋರ್ಟ್ ಬಿಸಿಸಿಐ ಪರವಾಗಿ ತೀರ್ಪು ನೀಡಲು ನಿರ್ಧರಿಸಿದೆ ಎನ್ನಲಾಗಿದೆ. ಹೀಗಾಗಿ ಬಿಸಿಸಿಐಗೆ ದೊಡ್ಡ ತಲೆನೋವು ತಪ್ಪಿದಂತಾಗಿದೆ.

2012ರಲ್ಲಿ ಐಪಿಎಲ್ ಫ್ರಾಂಚೈಸಿ ಡೆಕನ್ ಚಾರ್ಜರ್ಸ್ ಅನ್ನು ಐಪಿಎಲ್ ಗವರ್ನಿಂಗ್ ಕೌನ್ಸಿಲ್ ಅಂತ್ಯಗೊಳಿಸಿತ್ತು. ಹೀಗಾಗಿ ಫ್ರಾಂಚೈಸಿ ಕೋರ್ಟ್‌ನ ಮೊರೆ ಹೋಗಿತ್ತು. ಫ್ರಾಂಚೈಸಿ ಅಂತ್ಯಗೊಳಿಸಿದ್ದರಿಂದ ನಮಗಾದ ನಷ್ಟಕ್ಕೆ ಬಡ್ಡಿ ಸೇರಿಸಿ 6046 ಕೋಟಿ ರೂ. ನೀಡುವಂತೆ ಡಿಸಿಎಸ್‌ಎಲ್ ಬಿಸಿಸಿಐ ವಿರುದ್ಧ ಕಾನೂನಾತ್ಮಕ ಹೋರಾಟಕ್ಕಿಳಿದಿತ್ತು.

'ಬೆಳವಣಿಗೆಯ ಬಗ್ಗೆ ತಿಳಿದು ನಮಗೆ ತುಂಬಾ ಖುಷಿಯಾಗಿದೆ. ತೀರ್ಪು ನಮ್ಮ ಪರವಾಗಿ ಬರುವುದರಲ್ಲಿದೆ. ಯಾಕೆಂದರೆ ನಾವು ಒಪ್ಪಂದದಲ್ಲಿ ಹೇಳಿರುವಂತೆ ನಡೆದುಕೊಂಡಿದ್ದೇವೆ,' ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಎಎನ್‌ಐಗೆ ಮಾಹಿತಿ ನೀಡಿದ್ದಾರೆ.

Story first published: Wednesday, June 16, 2021, 13:07 [IST]
Other articles published on Jun 16, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+