ಆಸೀಸ್ ವಿರುದ್ಧದ ಅಭ್ಯಾಸ ಪಂದ್ಯ, ಐಪಿಎಲ್ ಸ್ಟಾರ್ ಗಳಿಗೆ ಚಾನ್ಸ್

Posted By:

ಬೆಂಗಳೂರು, ಸೆ. 8 : ಹಿರಿಯ ಆಟಗಾರ ಯುವರಾಜ್ ಸಿಂಗ್ ರನ್ನು ದುಲೀಪ್ ಟ್ರೋಫಿ, ಮಂಡಳಿ ಅಧ್ಯಕ್ಷರ ಎಲೆವನ್ ಗೆ ಆಯ್ಕೆ ಮಾಡದೆ ಕಡೆಗಣಿಸಿದ ಬಿಸಿಸಿಐ ಆಯ್ಕೆದಾರರು, ಐಪಿಎಲ್ ತಾರೆಗಳಿಗೆ ಮಣೆ ಹಾಕಿದ್ದಾರೆ.

ಭಾರಿ ಮೊತ್ತಕ್ಕೆ ಸ್ಟಾರ್ ಇಂಡಿಯಾ ಪಾಲಾದ ಐಪಿಎಲ್ ಪ್ರಸಾರ ಹಕ್ಕು!

ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಅಭ್ಯಾಸ ಪಂದ್ಯವಾಡಲಿರುವ ಮಂಡಳಿ ಅಧ್ಯಕ್ಷರ ಎಲೆವನ್ ತಂಡಕ್ಕೆ ಯುವ ಆಟಗಾರರಾದ ವಾಷಿಂಗ್ಟನ್ ಸುಂದರ್ ಹಾಗೂ ರಾಹುಲ್ ತ್ರಿಪಾಠಿ ಅವರನ್ನು ಆಯ್ಕೆ ಮಾಡಲಾಗಿದೆ. ಸ್ಟೀವ್ ಸ್ಮಿತ್ ಅವರ ನೇತೃತ್ವದ ಐಪಿಎಲ್ ತಂಡ ರೈಸಿಂಗ್ ಪುಣೆ ಸೂಪರ್ ಜೈಂಟ್ ತಂಡದಲ್ಲಿ ಇವರಿಬ್ಬರು ಆಟಗಾರರು ಆಡಿದ್ದರು ಎಂಬುದು ವಿಶೇಷ.

Board President's XI against Australia: Young talents rewarded for good show in IPL 10

ಎಂಎಸ್ ಕೆ ಪ್ರಸಾದ್ ನೇತೃತ್ವದ ಆಯ್ಕೆದಾರರ ಸಮಿತಿ 14 ಮಂದಿ ಸದಸ್ಯರ ತಂಡವನ್ನು ಆಯ್ಕೆ ಮಾಡಿದ್ದು, ವಾಷಿಂಗ್ಟನ್ ಸುಂದರ್, ರಾಹುಲ್ ತ್ರಿಪಾಠಿ ಅಲ್ಲದೆ, ಕುಲ್ವಂತ್ ಖೆಜ್ರೊಲಿಯಾ, ನಿತಿಶ್ ರಾಣಾಗೆ ಸ್ಥಾನ ಕಲ್ಪಿಸಲಾಗಿದೆ.

ಐಪಿಎಲ್ ಮಾತ್ರವಲ್ಲದೆ, ವಿಜಯ್ ಹಜಾರೆ ಹಾಗೂ ದೇವಧರ್ ಟ್ರೋಫಿಯಲ್ಲಿನ ಪ್ರದರ್ಶನವನ್ನು ಪರಿಗಣಿಸಿ ಅಯ್ಕೆ ಮಾಡಲಾಗಿದೆ ಎಂದು ಆಯ್ಕೆದಾರದು ಹೇಳಿದ್ದಾರೆ.

ಯುವರಾಜ್ ಸಿಂಗ್ ಕಡೆಗಣನೆ, ಯಾವ ತಂಡಕ್ಕೂ ಆಯ್ಕೆ ಇಲ್ಲ

ತಂಡ: ರಾಹುಲ್ ತ್ರಿಪಾಠಿ, ಮಯಾಂಕ್ ಅಗರವಾಲ್, ಶಿವಂ ಚೌಧರಿ, ನಿತಿಶ್ ರಾಣಾ, ಗೋವಿಂದ್ ಪೊದ್ದಾರ್, ಗುರ್ ಕೀರತ್ ಮಾನ್, ಶ್ರೀವತ್ಸ್ ಗೋಸ್ವಾಮಿ, ಅಕ್ಷಯ್ ಕರ್ನೇವಾರ್, ಕುಲ್ವಂತ್ ಖೆಜ್ರೊಲಿಯಾ, ಕುಶ್ವಂಗ್ ಪಟೇಲ್, ಆವೇಶ್ ಖಾನ್, ಸಂದೀಪ್ ಶರ್ಮ, ವಾಷಿಂಗ್ಟನ್ ಸುಂದರ್, ರಾಹುಲ್ ಶಾ

ಕೋಚ್: ಹೇಮಾಂಗ್ ಬದಾನಿ.

Story first published: Friday, September 8, 2017, 19:08 [IST]
Other articles published on Sep 8, 2017

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ