ಚಹಾಲ್, ಧನುಶ್ರೀಗೆ ವಿಚ್ಛೇದನ ಮಾ.20ಕ್ಕೆ ನಿರ್ಧಾರ? ಜೀವನಾಂಶ ಎಷ್ಟು?
ಕ್ರಿಕೆಟ್ ಆಟಗಾರ ಯಜುವೇಂದ್ರ ಚಹಾಲ್ ಹಾಗೂ ನೃತ್ಯ ಸಂಯೋಜಕಿ ಧನುಶ್ರೀ ವರ್ಮಾ ವಿಚ್ಛೇದನ ಸುದ್ದಿ ಮತ್ತೆ ಮುನ್ನೆಲೆಗೆ ಬಂದಿದೆ. ಪರಸ್ಪರ ಒಪ್ಪಿಗೆಯ ಮೂಲಕ ವಿಚ್ಛೇದನಕ್ಕೆ ಕಡ್ಡಾಯವಾದ ಆರು ತಿಂಗಳ ಕೂಲಿಂಗ್-ಆಫ್ ಅವಧಿಯನ್ನು ರದ್ದು ಮಾಡುವುವಂತೆ ಈ ಮೊದಲೇ ಚಹಾಲ್ ಹಾಗೂ ವರ್ಮಾ ಮನವಿಯನ್ನು ಮಾಡಿದ್ದರು. ಆದರೆ ನ್ಯಾಯಾಲಯ ಅವರ ಮನವಿಯನ್ನು ತಿರಸ್ಕರಿಸಿದೆ. ಈ ಮೂಲಕ ಕೌಟುಂಬಿಕ ನ್ಯಾಯಾಲಯ ನೀಡಿದ್ದ ತೀರ್ಪನ್ನು ಬಾಂಬೆ ಹೈಕೋರ್ಟ್ ತಿರಸ್ಕರಿಸಿದೆ.
ಯುಜ್ವೇಂದ್ರ ಚಹಾಲ್ ಮತ್ತು ಧನಶ್ರೀ ವರ್ಮಾ ಅವರ ವಿಚ್ಛೇದನ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡ ಅಪ್‌ಡೇಟ್ ಲಭ್ಯವಾಗಿದೆ. ಈಗ ಬರುತ್ತಿರುವ ಮಾಹಿತಿಯ ಪ್ರಕಾರ ಮಾರ್ಚ್ 20 ರೊಳಗೆ ತನ್ನ ನಿರ್ಧಾರವನ್ನು ನೀಡುವಂತೆ ಬಾಂಬೆ ಹೈಕೋರ್ಟ್, ಫ್ಯಾಮಿಲಿ ಕೋರ್ಟ್‌ಗೆ ನಿರ್ದೇಶನ ನೀಡಿದೆ. ಅಲ್ಲದೆ ಯುಜುವೇಂದ್ರ ಚಹಾಲ್ ಧನಶ್ರೀ ವರ್ಮಾ ಅವರಿಗೆ ಜೀವನಾಂಶವಾಗಿ 4.75 ಕೋಟಿ ರೂ. ಪಾವತಿಸಬೇಕಾಗುತ್ತದೆ ಎಂದು ತಿಳಿಸಿದೆ. ಅಲ್ಲದೆ ಹಿಂದು ವಿವಾಹ ಕಾಯ್ದೆಯಡಿ ವಿಚ್ಛೇದನಕ್ಕೆ ಸಂಬಂಧಿಸಿದಂತೆ ಕೂಲಿಂಗ್ ಆಫ್ ಅವಧಿಯನ್ನು ಮನ್ನಾ ಮಾಡುವಂತೆ ಕೋರಲಾಗಿದ್ದ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ.

ಟೀಮ್ ಇಂಡಿಯಾದ ಆಟಗಾರ ಯುಜುವೇಂದ್ರ ಚಹಾಲ್ ಅವರಿಗೆ ವಿಚ್ಛದನದ ಬಳಿಕ, ಪತ್ನಿ ಧನಶ್ರೀ ವರ್ಮಾ ಅವರಿಗೆ ಜೀವನಾಂಶಕ್ಕಾಗಿ 4.75 ಕೋಟಿ ರೂ.ಗಳನ್ನು ನೀಡುವಂತೆ ಕೇಳಿಕೊಂಡಿದ್ದಾರೆ. ಕ್ರಿಕೆಟಿಗ ಯುಜ್ವೇಂದ್ರ ಚಾಹಲ್ ಮತ್ತು ಅವರ ಪತ್ನಿ ಧನಶ್ರೀ ವರ್ಮಾ ಅವರ ವಿಚ್ಛೇದನ ಅರ್ಜಿಯನ್ನು ಮಾರ್ಚ್ 20 (ಗುರುವಾರ) ಒಳಗೆ ನಿರ್ಧರಿಸುವಂತೆ ಹೈಕೋರ್ಟ್ ಕೌಟುಂಬಿಕ ನ್ಯಾಯಾಲಕ್ಕೆ ತಿಳಿಸಿದೆ. ಇನ್ನೇನು ಕೆಲವೇ ದಿನಗಳಲ್ಲಿ ಐಪಿಎಲ್ ಟೂರ್ನಿಗಳು ಆರಂಭವಾಗಲಿದ್ದು, ಈ ನಿಟ್ಟಿನಲ್ಲಿ ಚಹಾಲ್ ಈ ಲೀಗ್‌ನಲ್ಲಿ ಭಾಗವಹಿಸುತ್ತಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರವನ್ನು ತಿಳಿಸುವಂತೆ ನ್ಯಾಯಮೂರ್ತಿ ಮಾಧವ್ ಜಾಮ್ದಾರ್ ಅವರ ಪೀಠವು ಕುಟುಂಬ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದೆ ಎಂದು ಬಾರ್ ಬೆಂಚ್ ವರದಿಯನ್ನು ಮಾಡಿದೆ.
ಚಹಾಲ್ ಹಾಗೂ ಧನುಶ್ರೀ ಇಬ್ಬರೂ 2020ರಲ್ಲಿ ವಿವಾಹವಾದ್ರು. ಆ ಬಳಿಕ 2022ರಿಂದ ಇಬ್ಬರೂ ಪ್ರತ್ಯೇಕವಾಗಿ ಇರುತ್ತಿದ್ದಾರೆ. ಫೆಬ್ರವರಿ 5, 2025 ರಂದು ಬಾಂದ್ರಾದ ಕುಟುಂಬ ನ್ಯಾಯಾಲಯದಲ್ಲಿ ವಿಚ್ಛೇದನ ಅರ್ಜಿಯನ್ನು ಸಲ್ಲಿಸಲಾಗಿದೆ. ಅಲ್ಲದೆ ಇಬ್ಬರೂ ಕೂಲಿಂಗ್ ಅವಧಿಯನ್ನು ಮನ್ನಾ ಮಾಡುವಂತೆ ಅರ್ಜಿಯನ್ನು ಸಲ್ಲಿಸಿದ್ದರು. ಅಲ್ಲದೆ ಇವರಿಬ್ಬರು ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 13 ಬಿ ಅಡಿಯಲ್ಲಿ ಪರಸ್ಪರ ಒಪ್ಪಿಗೆಯ ಮೇರೆಗೆ ಅರ್ಜಿ ಸಲ್ಲಿಸಿದ್ದರು. ಇವರಿಬ್ಬರೂ ಆರು ತಿಂಗಳ ಶಾಸನ ಬದ್ಧ ಕೂಲಿಂಗ್ ಅವಧಿಯನ್ನು ರದ್ದು ಗೊಳಿಸುವಂತೆ ಅರ್ಜಿಯನ್ನು ಹಾಕಿದ್ದರು.
ಚಾಹಲ್ ಹಾಗೂ ವರ್ಮಾ ಅವರಿಗೆ 4 ಕೋಟಿ 75 ಲಕ್ಷ ರೂಪಾಯಿ ಜೀವನಾಂಶ ನೀಡುವಂತೆ ಕೋರ್ಟ್ ಸೂಚನೆ ನೀಡಿದೆ. ಕ್ರಿಕೆಟಿಗ ಇದುವರೆಗೆ ಕೇವಲ 2 ಕೋಟಿ 37 ಲಕ್ಷದ 55 ಸಾವಿರ ರೂ.ಗಳನ್ನು ಪಾವತಿಸಿದ್ದಾರೆ. ಉಳಿದ ಮೊತ್ತವನ್ನು ಪಾವತಿಸ ಬೇಕಾಗುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications