For Quick Alerts
ALLOW NOTIFICATIONS  
For Daily Alerts
 

Jasprit Bumrah: ಪದಾರ್ಪಣೆ ಮಾಡಿದ್ದ ಮೈದಾನದಲ್ಲಿ ದಾಖಲೆ ಬರೆಯುವ ಹುಮ್ಮಸ್ಸಿನಲ್ಲಿ ಬೂಮ್-ಬೂಮ್ ಬುಮ್ರಾ

ಕೇಪ್‌ ಟೌನ್‌ ಅಂಗಳ ಯಾರಿಗೆ ಎಷ್ಟು ವಿಶೆಷವೋ ಏನೋ ತಿಳಿಯದು. ಆದರೆ ಟೀಮ್ ಇಂಡಿಯಾದ ಒಬ್ಬ ವೇಗದ ಬೌಲರ್‌ಗೆ ಈ ಅಂಗಳ ಅದೃಷ್ಟದ ಬಾಗಿಲನ್ನು ತೆರೆದಿತ್ತು. ಟೀಮ್ ಇಂಡಿಯಾದ ವೇಗಿ ಕಳೆದ ಐದು ವರ್ಷಗಳ ಹಿಂದೆ ಇದೇ ಅಂಗಳದಲ್ಲಿ ವೈಟ್‌ ಜೆರ್ಸಿ ತೊಟ್ಟು ಮಿಂಚಿದ್ದರು.

ಅಂದು ರೆಡ್‌ ಬೌಲ್‌ ಹಿಡಿದು ಟೀಮ್ ಇಂಡಿಯಾ ವೇಗಿ ಅಂಗಳಕ್ಕೆ ಎಂಟ್ರಿ ನೀಡಿದಾಗ, ಕ್ರಿಕೆಟ್ ಜಗತ್ತು ಅವರನ್ನು ಅಚ್ಚರಿಯಿಂದ ನೋಡಿತ್ತು. ಆದರೆ ಈಗ ಕಾಲ ಬದಲಾಗಿದೆ. ವಿಶ್ವ ಟೆಸ್ಟ್‌ ಕ್ರಿಕೆಟ್‌ನಲ್ಲಿ ತನ್ನ ಛಾಪು ಮೂಡಿಸಿರುವ ವೇಗಿ, ಹಲವು ದಾಖಲೆಗಳ ಒಡೆಯ. ಈಗ ಕೇಪ್‌ಟೌನ್‌ ಅಂಗಳದಲ್ಲಿ ಟೀಮ್ ಇಂಡಿಯಾದ ಪೇಸರ್‌ಗೆ ಮತ್ತೊಂದು ದಾಖಲೆಯನ್ನು ಬರೆಯುವ ಅವಕಾಶವಿದೆ.

Boom-boom Bumrah in the mood to write a record on the ground where he made his debut

ಟೀಮ್ ಇಂಡಿಯಾದ ಯಾರ್ಕರ್ ಸ್ಪೆಷಲಿಸ್ಟ್‌, ಜಸ್ಪ್ರೀತ್ ಬುಮ್ರಾ ಅವರು ತಮ್ಮ ಟೆಸ್ಟ್ ವೃತ್ತಿಜೀವನವನ್ನು 2018 ರಲ್ಲಿ ಕೇಪ್ ಟೌನ್‌ನ ನ್ಯೂಲ್ಯಾಂಡ್ಸ್ ಮೈದಾನದಲ್ಲಿ ಪ್ರಾರಂಭಿಸಿದರು. ಬುಮ್ರಾ ದಕ್ಷಿಣ ಆಫ್ರಿಕಾ ವಿರುದ್ಧದ ಚೊಚ್ಚಲ ಪಂದ್ಯದಲ್ಲೇ ನಾಲ್ಕು ವಿಕೆಟ್ ಕಬಳಿಸಿದ್ದರು. ಕೇಪ್‌ಟೌನ್‌ನಲ್ಲಿ ಇದುವರೆಗೆ ಆಡಿರುವ ಎರಡು ಟೆಸ್ಟ್ ಪಂದ್ಯಗಳಲ್ಲಿ ಬುಮ್ರಾ ಒಟ್ಟು 10 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದೇ ನೆಲದಲ್ಲಿ ಇತಿಹಾಸ ಸೃಷ್ಟಿಸಲು ಬುಮ್ರಾ ಅವರಿಗೆ ಸುವರ್ಣಾವಕಾಶ ಲಭಿಸಲಿದೆ.

ಸೆಂಚುರಿಯನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಹೀನಾಯವಾಗಿ ಸೋತಿತ್ತು. ರೋಹಿತ್ ಪಡೆ ಕೇವಲ ಮೂರೇ ದಿನಗಳಲ್ಲಿ ಆತಿಥೇಯ ತಂಡದ ಮುಂದೆ ಶರಣಾಯಿತು. ಮೊದಲ ಟೆಸ್ಟ್ ನಲ್ಲಿ ಇನ್ನಿಂಗ್ಸ್ ಹಾಗೂ 32 ರನ್ ಗಳಿಂದ ಸೋತಿರುವ ಟೀಂ ಇಂಡಿಯಾದ ಸಂಪೂರ್ಣ ಗಮನ ಇದೀಗ ಕೇಪ್ ಟೌನ್ ನಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ನತ್ತ ನೆಟ್ಟಿದೆ.

ಕೇಪ್ ಟೌನ್‌ನಲ್ಲಿ ಭಾರತ ತಂಡ ಪಂದ್ಯವನ್ನು ಗೆದ್ದು ಟೆಸ್ಟ್‌ ಸರಣಿಯನ್ನು ಸಮಬಲಗೊಳಿಸುವ ವಿಶ್ವಾಸವನ್ನು ಹೊಂದಿದೆ. ಟೀಮ್ ಇಂಡಿಯಾ ಈ ಪಂದ್ಯದಲ್ಲಿ ಗೆಲುವು ದಾಖಲಿಸಬೇಕಿದ್ದಲ್ಲಿ ಬುಮ್ರಾ ಭರ್ಜರಿ ಪ್ರದರ್ಶನ ನೀಡುವುದು ಅನಿವಾರ್ಯ.

Boom-boom Bumrah in the mood to write a record on the ground where he made his debut

ಬೂಮ್-ಬೂಮ್ ಬುಮ್ರಾ ತನ್ನ ಮ್ಯಾಜಿಕ್ ಬೌಲಿಂಗ್‌ನಿಂದ ಎದುರಾಳಿ ಬೌಲರ್‌ಗಳನ್ನು ಕಾಡಬೇಕಿದೆ. ಬುಮ್ರಾ ಐದು ವರ್ಷಗಳ ಹಿಂದೆ ಇದೇ ಮೈದಾನದಲ್ಲಿ ತಮ್ಮ ಟೆಸ್ಟ್ ವೃತ್ತಿಜೀವನವನ್ನು ಆರಂಭಿಸಿದ್ದರು. ವಿಶೇಷ ಸಂದರ್ಭದಲ್ಲಿ, ಭಾರತೀಯ ವೇಗದ ಬೌಲರ್‌ಗೆ ಏಕಕಾಲದಲ್ಲಿ ಅನೇಕ ದಿಗ್ಗಜ ಬೌಲರ್‌ಗಳ ದಾಖಲೆಯನ್ನು ಅಳಿಸಿ ಹಾಕುವ ಸುವರ್ಣ ಅವಕಾಶ ಹೊಂದಿದ್ದಾರೆ.

ಜಸ್ಪ್ರೀತ್ ಬುಮ್ರಾ ಅವರು ತಮ್ಮ ಟೆಸ್ಟ್ ವೃತ್ತಿಜೀವನವನ್ನು 2018 ರಲ್ಲಿ ಕೇಪ್ ಟೌನ್‌ನ ನ್ಯೂಲ್ಯಾಂಡ್ಸ್ ಮೈದಾನದಲ್ಲಿ ಪ್ರಾರಂಭಿಸಿದರು. ಬುಮ್ರಾ ದಕ್ಷಿಣ ಆಫ್ರಿಕಾ ವಿರುದ್ಧದ ಚೊಚ್ಚಲ ಪಂದ್ಯದಲ್ಲೇ ನಾಲ್ಕು ವಿಕೆಟ್ ಕಬಳಿಸಿದ್ದರು. ಕೇಪ್‌ಟೌನ್‌ನಲ್ಲಿ ಇದುವರೆಗೆ ಆಡಿರುವ ಎರಡು ಟೆಸ್ಟ್ ಪಂದ್ಯಗಳಲ್ಲಿ ಬುಮ್ರಾ ಒಟ್ಟು 10 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಸರಣಿಯ ಎರಡನೇ ಟೆಸ್ಟ್‌ನಲ್ಲಿ ಭಾರತದ ವೇಗದ ಬೌಲರ್ 7 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರೆ, ಅವರು ಜೇಮ್ಸ್ ಆಂಡರ್ಸನ್ ಅವರ ದಾಖಲೆಯನ್ನು ಅಳಿಸುತ್ತಾರೆ.

ಪ್ರಸ್ತುತ ಬೌಲರ್‌ಗಳಲ್ಲಿ, ಆಂಡರ್ಸನ್ ಕೇಪ್ ಟೌನ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆಯನ್ನು ಹೊಂದಿದ್ದಾರೆ. ಆಂಡರ್ಸನ್ ಕೇಪ್ ಟೌನ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ವಿದೇಶಿ ಬೌಲರ್. ಆಂಗ್ಲ ವೇಗಿ ಈ ಮೈದಾನದಲ್ಲಿ ಒಟ್ಟು 16 ವಿಕೆಟ್ ಪಡೆದಿದ್ದಾರೆ. ಜನವರಿ 3ರಿಂದ ಆರಂಭವಾಗಲಿರುವ ಎರಡನೇ ಟೆಸ್ಟ್‌ನಲ್ಲಿ ಬುಮ್ರಾ ಏಳು ವಿಕೆಟ್‌ಗಳನ್ನು ಕಬಳಿಸುವಲ್ಲಿ ಯಶಸ್ವಿಯಾದರೆ, ಆಂಡರ್ಸನ್ ಅವರನ್ನು ಬಿಟ್ಟು ಇತಿಹಾಸ ನಿರ್ಮಿಸಲಿದ್ದಾರೆ.

Story first published: Tuesday, January 2, 2024, 16:48 [IST]
Other articles published on Jan 2, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+