Border Gavaskar Trophy: ಮೊದಲ ದಿನವೇ ಬುಮ್ರಾ ಎಚ್ಚರಿಕೆ: ಸರಣಿ ಏಕಪಕ್ಷೀಯವಾಗಲು ಬಿಡುವುದಿಲ್ಲ
ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಬಾರ್ಡರ್ ಗವಾಸ್ಕರ್ ಸರಣಿ ಶುಕ್ರವಾರದಿಂದ ಪರ್ತ್‌ನಲ್ಲಿ ಆರಂಭವಾಗಿದೆ. ಈ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಅಮೋಘ ಪ್ರದರ್ಶನ ನೀಡಿ ಕಂ ಬ್ಯಾಕ್ ಮಾಡುವ ಸೂಚನೆ ನೀಡಿದೆ. ಟೀಮ್ ಇಂಡಿಯಾ ಎರಡು ಅವಧಿಗಳಲ್ಲಿ ಹಿನ್ನಡೆ ಅನುಭವಿಸಿತು. ಆದರೆ ಮೂರನೇ ಅವಧಿಯಲ್ಲಿ ಅಮೋಘ ಸಂಘಟಿತ ದಾಳಿಯನ್ನು ನಡೆಸಿದ ಜಸ್ಪ್ರಿತ್ ಬುಮ್ರಾ ಪಡೆ, ಆಸೀಸ್ ಬ್ಯಾಟರ್‌ಗಳನ್ನು ಕಟ್ಟಿ ಹಾಕಿದೆ.
ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಬಹು ನಿರೀಕ್ಷಿತ ಸರಣಿಗೂ ಮುನ್ನ ಈ ಸರಣಿಯ ಬಗ್ಗೆ ಹೈಪ್ ಕ್ರಿಯೇಟ್ ಆಗಿತ್ತು. ಈ ಸರಣಿಯನ್ನು ಯಾರು ಗೆಲ್ಲಬಹುದು ಎಂಬ ಬಗ್ಗೆ ಮಾಜಿ ಆಟಗಾರರು ತಮ್ಮ ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದರು. ಅಲ್ಲದೆ ಭಾರತ ಈ ಸರಣಿಯಲ್ಲಿ ಹಿನ್ನಡೆ ಅನುಭವಿಸಲಿದೆ ಎಂದು ಭವಿಷ್ಯ ನುಡಿದಿದ್ದರು. ಆದರೆ ಟೀಮ್ ಇಂಡಿಯಾ ಮೈದಾನದಲ್ಲಿ ನೀಡಿರುವ ಪ್ರದರ್ಶನ ಎಲ್ಲರ ಟೀಕೆಗಳಿಗೆ ಉತ್ತರ ನೀಡಿದಂತಿದೆ. ಮೊದಲ ಇನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ಬೌಲರ್‌ಗಳು ಮಾಡಿದ ಸಾಧನೆಯನ್ನೇ ಟೀಮ್ ಇಂಡಿಯಾ ಬೌಲರ್‌ಗಳು ಮೊದಲ ಇನಿಂಗ್ಸ್‌ನಲ್ಲಿ ಮಾಡಿ ಅಬ್ಬರಿಸಿದ್ದರು.

ಬ್ಯಾಟರ್‌ಗಳ ವೈಫಲ್ಯ
ಟೀಮ್ ಇಂಡಿಯಾ ಮೊದಲ ಇನಿಂಗ್ಸ್‌ನಲ್ಲಿ 150 ರನ್‌ಗಳಿಗೆ ಆಲೌಟ್ ಆದಾಗ, ಎಲ್ಲರೂ ಇನಿಂಗ್ಸ್ ಮುನ್ನಡೆಯನ್ನು ಹೆಚ್ಚಾಗಿ ಬಿಡಬರಾದು ಎಂದೇ ಹೇಳುತ್ತಿದ್ದರು. ಆದರೆ ಟೀಮ್ ಇಂಡಿಯಾ ಬೌಲರ್ಸ್‌ಗಳ ದಾಳಿಯನ್ನು ಕಂಡ ಬಳಿಕ ನಾವು ಸಹ ಇನಿಂಗ್ಸ್ ಮುನ್ನಡೆ ಸಾಧಿಸಬಹುದು ಎಂಬ ಆಸೆ ಚಿಗುರಿತು. ಪರ್ಫೆಕ್ಟ್ ಲೈನ್ ಹಾಗೂ ಲೆಂಥ್‌ನಲ್ಲಿ ದಾಳಿಯನ್ನು ಸಂಘಟಿಸಿದ ಟೀಮ್ ಇಂಡಿಯಾ ವೇಗಿಗಳು ಆಸ್ಟ್ರೇಲಿಯಾ ಬ್ಯಾಟರ್‌ಗಳನ್ನು ಕಾಡಿದರು. ಮೊದಲ ಇನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ ಬ್ಯಾಟರ್‌ಗಳು ಹೇಗೆ ಕಷ್ಟ ಪಟ್ಟರೋ, ಹಾಗೆ ಆಸೀಸ್ ಬ್ಯಾಟರ್‌ಗಳು ಸಹ ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದರು.
ಬುಮ್ರಾ ಅಬ್ಬರ
ಟೀಮ್ ಇಂಡಿಯಾದ ನಾಯಕ ಜಸ್ಪ್ರಿತ್ ಬುಮ್ರಾ ಬೌಲಿಂಗ್ ವಿಭಾಗವನ್ನು ಮುನ್ನಡೆಸಿದರು. ಇವರು ಹೇಗೆ ಬೌಲಿಂಗ್ ಮಾಡಬೇಕು ಎಂಬುದನ್ನು ತಮ್ಮ ಸಹ ಆಟಗಾರರಿಗೆ ತೋರಿಸಿಕೊಟ್ಟರು. ಸರಿಯಾದ ಲೈನ್ ಹಾಗೂ ಲೆಂಥ್‌ಗಳಲ್ಲಿ ದಾಳಿಯನ್ನು ನಡೆಸಿ ಎದುರಾಳಿಗಳನ್ನು ಸೆಟ್ ಅಪ್ ಮಾಡಿ ಔಟ್ ಮಾಡಿದರು. ಬುಮ್ರಾ ಅವರ ಮಾರಕ ಎಸೆತಗಳನ್ನು ಎದುರಿಸುವಲ್ಲಿ ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟರ್‌ಗಳು ಕಂಗಾಲಾದರು.
ಪದಾರ್ಪಣೆ ಪಂದ್ಯವನ್ನು ಆಡಿದ ಆಸೀಸ್‌ನ ನಾಥನ್ ಮೆಕ್‌ಸ್ವೀನಿ, ಸ್ಟೀವನ್ ಸ್ಮಿತ್, ಉಸ್ಮಾನ್ ಖವಾಜಾ, ಪ್ಯಾಟ್ ಕಮಿನ್ಸ್ ಅವರು ಬುಮ್ರಾ ಅವರ ಎಸೆತವನ್ನು ಎದುರಿಸುವಲ್ಲಿ ಹಿನ್ನಡೆ ಅನುಭವಿಸಿದರು. ಇವರಿಗೆ ಮೊಹಮ್ಮದ್ ಸಿರಾಜ್ ಹಾಗೂ ಹರ್ಷಿತ್ ರಾಣಾ ಉತ್ತಮ ಸಾಥ್ ನೀಡಿ ಅಬ್ಬರಿಸಿದರು. ಈ ಮೂಲಕ ಜಸ್ಪ್ರಿತ್ ಬುಮ್ರಾ ಈ ಸರಣಿಯನ್ನು ಏಕಪಕ್ಷೀಯವಾಗಲು ನಾವು ಬಿಡುವುದಿಲ್ಲ ಎಂದು ಸಾರಿ ಹೇಳುವಂತಹ ಪ್ರದರ್ಶನ ನೀಡಿದರು. ಎರಡನೇ ದಿನದ ಮೊದಲಾವಧಿಯಲ್ಲಿ ಟೀಮ್ ಇಂಡಿಯಾ ಬೇಗನೆ ಮೂರು ವಿಕೆಟ್ ಕಬಳಿಸಿ, ಎರಡನೇ ಇನಿಂಗ್ಸ್‌ನಲ್ಲಿ ಸಮಯೋಚಿತ ಬ್ಯಾಟಿಂಗ್ ನಡೆಸುವ ಇರಾದೆಯನ್ನು ಹೊಂದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications