Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Melbourne Test: ಹೇಗಿದೆ ಮೆಲ್ಬೋರ್ನ್‌ನಲ್ಲಿ ಟೀಮ್ ಇಂಡಿಯಾದ ಸಾಧನೆ?

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಬಾರ್ಡರ್‌ ಗವಾಸ್ಕರ್‌ ಸರಣಿಯ ನಾಲ್ಕನೇ ಟೆಸ್ಟ್‌ ಮೆಲ್ಬೋರ್ನ್‌ನಲ್ಲಿ ನಡೆಯಲಿದೆ. ಈಗಾಗಲೇ ಮೂರು ಟೆಸ್ಟ್‌ ಪಂದ್ಯಗಳು ಮುಗಿದಿದ್ದು, ಉಭಯ ತಂಡಗಳು ತಲಾ ಒಂದು ಪಂದ್ಯ ಗೆದ್ದಿವೆ. ಇನ್ನು ಒಂದು ಪಂದ್ಯ ಡ್ರಾ ಆಗಿದೆ. ಟೀಮ್ ಇಂಡಿಯಾಕ್ಕೆ ಸರಣಿಯಲ್ಲಿ ಮುನ್ನಡೆ ಸಾಧಿಸಲು ನಾಲ್ಕನೇ ಟೆಸ್ಟ್‌ನಲ್ಲಿ ಗೆಲುವು ಅನಿವಾರ್ಯ. ಇನ್ನು ಟೀಮ್ ಇಂಡಿಯಾದ ಆಟಗಾರರ ಮನೋಬಲವನ್ನು ಅಂಕಿ ಅಂಶಗಳು ಹೆಚ್ಚಿಸಲಿವೆ.

ಈ ಪಂದ್ಯದಲ್ಲಿ ಜಯ ಸಾಧಿಸಲು ಟೀಮ್ ಇಂಡಿಯಾ ಭರ್ಜರಿ ಪ್ಲ್ಯಾನ್ ಮಾಡಿಕೊಳ್ಳುತ್ತಿದೆ. ತಂಡದಲ್ಲಿ ಬದಲಾವಣೆಗಳು ಕಂಡು ಬರುವ ಸಾಧ್ಯತೆ ದಟ್ಟವಾಗಿದೆ. ಮೆಲ್ಬೋರ್ನ್‌ ಪಿಚ್‌ ಸ್ಪಿನ್ ಬೌಲರ್‌ಗಳಿಗೆ ಕೊಂಚ ನೆರವು ನೀಡುವುದರಿಂದ, ಟೀಮ್ ಇಂಡಿಯಾ ಇಬ್ಬರು ಸ್ಪಿನ್ ಬೌಲರ್‌ಗಳೊಂದಿಗೆ ಕಣಕ್ಕೆ ಇಳಿಯುವ ಸಾಧ್ಯತೆ ಇದೆ. ಕಳೆದ ಪ್ರವಾಸದಲ್ಲಿ ಟೀಮ್ ಇಂಡಿಯಾ ಈ ಅಂಗಳದಲ್ಲಿ ಆಡಿದಾಗಲೂ ಇಬ್ಬರು ಸ್ಪಿನ್ ಬೌಲರ್‌ಗಳೊಂದಿಗೆ ಕಣಕ್ಕೆ ಇಳಿದು ಯಶ ಕಂಡಿತ್ತು. ಅದೇ ಮಂತ್ರವನ್ನು ಮುಂದುವರೆಸಲು ಟೀಮ್ ಇಂಡಿಯಾ ಪ್ಲ್ಯಾನ್ ಮಾಡಿಕೊಳ್ಳಲಾಗುತ್ತಿದೆ.

Border-Gavaskar Series Can Team India Extend Unbeaten Streak in Melbourne

ಮೆಲ್ಬೋರ್ನ್‌ ಇತಿಹಾಸ

ಆಸ್ಟ್ರೇಲಿಯಾದಲ್ಲಿ ಹಲವು ಐತಿಹಾಸಿಕ ಮೈದಾನಗಳು ಇವೆ. ಇದರಲ್ಲಿ ಮೆಲ್ಬೋರ್ನ್‌ ಸಹ ಒಂದು. ಈ ಮೈದಾನದಲ್ಲಿ ಭಾರತ, ಆಸೀಸ್‌ 1948 ರಲ್ಲಿ ಮೊದಲ ಬಾರಿಗೆ ಮುಖಾಮುಖಿ ಆಗಿದ್ದವು. ಈ ಪಂದ್ಯದಲ್ಲಿ ಆತಿಥೇಯ ತಂಡ 233 ರನ್‌ಗಳ ಗೆಲುವು ದಾಖಲಿಸಿತ್ತು. 1977ರಲ್ಲಿ ಈ ಅಂಗಳದಲ್ಲಿ ಎರಡೂ ಪಂದ್ಯ ನಡೆಯಿತು. ಭಾರತ ಆ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿತು. ಈ ಮೈದಾನದಲ್ಲಿ ಉಭಯ ದೇಶಗಳು ಈ ವರೆಗೆ ಒಟ್ಟು 14 ಪಂದ್ಯಗಳನ್ನು ಆಡಿವೆ. ಅಂಕಿ ಅಂಶಗಳು ನಿಶ್ಚಿತವಾಗಿ ಆಸೀಸ್ ಮುಖದಲ್ಲಿ ಮಂದಹಾಸ ಮೂಡಿಸುತ್ತವೆ. ಆಸ್ಟ್ರೇಲಿಯಾ ಈ ಮೈದಾನದಲ್ಲಿ 8 ಜಯ ಕಂಡರೆ, ಟೀಮ್ ಇಂಡಿಯ 4 ಪಂದ್ಯ ಗೆದ್ದಿದ್ದು, 2 ಪಂದ್ಯ ಡ್ರಾ ಆಗಿವೆ.

ಭಾರತಕ್ಕೆ ಆಸ್ಟ್ರೇಲಿಯಾದಲ್ಲಿ ಒನ್‌ ಆಫ್‌ ದಿ ಫೆವರೀಟ್‌ ಮೈದಾನಗಳಲ್ಲಿ ಇದು ಒಂದಾಗಿದೆ. ಈ ಅಂಗಳದಲ್ಲಿ ಭಾರತ ಕಳೆದ ಒಂದು ದಶಕದಿಂದ ಸೋಲು ಕಂಡಿಲ್ಲ. ಕಳೆದ ಪ್ರವಾಸದಲ್ಲಿ ಭಾರತ ಈ ಮೈದಾನದಲ್ಲಿ ಸ್ಮರಣೀಯ ಇನಿಂಗ್ಸ್‌ ಆಡಿತ್ತು. ಅಲ್ಲದೆ 8 ವಿಕೆಟ್‌ಗಳ ಜಯ ಸಾಧಿಸಿತ್ತು. 2018ರ ಪ್ರವಾಸದಲ್ಲಿ ಟೀಮ್ ಇಂಡಿಯಾ 137 ರನ್‌ಗಳಿಂದ ಆತಿಥೇಯ ಆಸ್ಟ್ರೇಲಿಯಾ ತಂಡವನ್ನು ಮಣಿಸಿತ್ತು. 2014ರಲ್ಲಿ ಇಲ್ಲಿ ನಡೆದ ಪಂದ್ಯ ಡ್ರಾದಲ್ಲಿ ಅಂತ್ಯವಾಗಿತ್ತು. ಹೀಗಾಗಿ ಕಳೆದ 10 ವರ್ಷಗಳಲ್ಲಿ ಟೀಮ್ ಇಂಡಿಯಾ ಈ ಮೈದಾನದಲ್ಲಿ ಸೋಲನ್ನೇ ಕಾಣದೇ ಅಜೇಯವಾಗಿದೆ.

Border-Gavaskar Series Can Team India Extend Unbeaten Streak in Melbourne

ಈಗ ಭಾರತ ಹಾಗೂ ಆಸ್ಟ್ರೇಲಿಯಾ ಆಡಿರುವ ಮೂರು ಪಂದ್ಯಗಳಿಗೆ ಹೋಲಿಸಿದರೆ, ಮೆಲ್ಬೋರ್ನ್‌ನ ಎಂಸಿಜೆ ಅಂಗಳ ಕೊಂಚ ಡಿಫ್ರೆಂಟ್ ಆಗಿರಲಿದೆ. ಈ ಮೈದಾನದಲ್ಲಿ ಸಮಯ ಕಳೆದರೆ ಬ್ಯಾಟರ್‌ ಬಿಗ್‌ ಇನಿಂಗ್ಸ್‌ ಸುಲಭವಾಗಿ ಕಟ್ಟಬಹುದು. ಅಲ್ಲದೆ ಸ್ಪಿನ್ ಬೌಲರ್‌ಗಳಿಗೆ ನೆರವು ನೀಡುತ್ತದೆ ಎಂಬ ಅಂಶ ನಿಜಕ್ಕೂ ಪ್ರವಾಸಿ ತಂಡಕ್ಕೆ ಬೂಸ್ಟ್ ನೀಡಲಿದೆ.

Story first published: Monday, December 23, 2024, 8:45 [IST]
Other articles published on Dec 23, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+