Border-Gavaskar Trophy 2024: ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್‌ನಿಂದ ಟೀಮ್ ಇಂಡಿಯಾ ಅಭಿಮಾನಿಗಳಿಗೆ ಸಿಹಿ ಸುದ್ದಿ
ಮೇ 14 ಮಂಗಳವಾರ, ಪ್ರಸ್ತುತ ಭಾರತ ತಂಡದ ಆಟಗಾರರು ಸೇರಿದಂತೆ ಸಾಗರೋತ್ತರದ ಆಟಗಾರರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 17ನೇ ಆವೃತ್ತಿಯಲ್ಲಿ ಬ್ಯುಸಿಯಾಗಿದ್ದಾರೆ. ಈ ಟೂರ್ನಿ ಬಳಿಕ ಐಸಿಸಿ ಟಿ20 ವಿಶ್ವಕಪ್ ಆಡಲಿರುವ ಭಾರತ ತಂಡ ನವೆಂಬರ್ ತಿಂಗಳಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ.
ಈ ಸಂದರ್ಭದಲ್ಲಿ ಬಹುನಿರೀಕ್ಷಿತ ಐದು ಪಂದ್ಯಗಳ ಬಾರ್ಡರ್- ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ನಡೆಯಲಿದೆ. ಪಂದ್ಯವನ್ನು ನೋಡಲು ಸಾಕಷ್ಟು ಭಾರತೀಯರು ಮೈದಾನಕ್ಕೆ ಆಗಮಿಸುತ್ತಾರೆ. ಹೀಗಾಗಿ ಮೈದಾನಕ್ಕೆ ಬರುವ ಟೀಮ್ ಇಂಡಿಯಾ ಅಭಿಮಾನಿಗಳಿಗೆ ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್ ಸಿಹಿ ಸುದ್ದಿ ನೀಡಿದೆ.

ಐಕಾನಿಕ್ ಮೆಲ್ಬೋರ್ನ್ (ಎಂಸಿಜಿ) ಮತ್ತು ಸಿಡ್ನಿ ಕ್ರಿಕೆಟ್ ಗ್ರೌಂಡ್ (ಎಸ್‌ಸಿಜಿ) ಸೇರಿದಂತೆ ಎಲ್ಲಾ ಮೈದಾನಗಳಲ್ಲಿ ಟೀಮ್ ಇಂಡಿಯಾ ಅಭಿಮಾನಿಗಳಿಗೆ ಮೀಸಲಾದ ಆಸನಗಳ ವ್ಯವಸ್ಥೆಯನ್ನು ಮಾಡಲು ಕ್ರಮ ಕೈಗೊಳ್ಳಲಾಗಿದ್ದು, ಮುಂಬರುವ ದಿನಗಳಲ್ಲಿ ಭಾರತೀಯರಿಗೆ ಮೀಸಲಾದ ಆಸನಗಳ ಬಗ್ಗೆ ಹೆಚ್ಚಿನ ವಿವರಗಳನ್ನು ಶೀಘ್ರದಲ್ಲೇ ಹಂಚಿಕೊಳ್ಳಲಾಗುವುದು ಎಂದು ಎಂದು ಆಸ್ಟ್ರೇಲಿಯಾ ತಿಳಿಸಿದೆ.
ಆಸ್ಟ್ರೇಲಿಯಾದ ಕ್ರಿಕೆಟ್ ಬಹುಸಂಸ್ಕೃತಿಯ ಯೋಜನೆಯೊಂದಿಗೆ ಹೊಂದುಕೊಂಡಿರುವಂತೆ, ಈ ರೀತಿಯ ಮೀಸಲು ಆಸನಗಳ ವ್ಯವಸ್ಥೆ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಪೂರಕವಾದ ವಾತಾವರಣವನ್ನು ಬೆಳೆಸುತ್ತವೆ ಮತ್ತು ಪ್ರಸ್ತುತ ವಾತಾವರಣವನ್ನು ಭರವಸೆ ನೀಡುತ್ತವೆ.

ಕುಟುಂಬ-ಸ್ನೇಹಿ ಅನುಭವಕ್ಕಾಗಿ ನೀಲಿ ಬಣ್ಣ ಜೆರ್ಸಿ ಧರಿಸಿ ಧೋಲ್‌ನಂತಹ ಸಾಂಪ್ರದಾಯಿಕ ವಾದ್ಯಗಳನ್ನು ತರುವ ಮೂಲಕ ರೋಮಾಂಚಕ ವಾತಾವರಣವನ್ನು ಅಳವಡಿಸಿಕೊಳ್ಳುವ ಮೂಲಕ ಭಾರತೀಯ ಅಭಿಮಾನಿಗಳಿಗೆ ಮೀಸಲು ಆಸನಗಳನ್ನು ಪಡೆದುಕೊಳ್ಳಲು ಪ್ರೋತ್ಸಾಹಿಸಲಾಗುತ್ತದೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ಹೇಳಿದೆ.
ಭಾರತ vs ಆಸ್ಟ್ರೇಲಿಯಾ ಟೆಸ್ಟ್ ಸರಣಿ ವೇಳಾಪಟ್ಟಿ
ಮೊದಲನೇ ಟೆಸ್ಟ್: ನವೆಂಬರ್ 22-26 (ಪರ್ತ್ ಸ್ಟೇಡಿಯಂ, ಪರ್ತ್)
ಎರಡನೇ ಟೆಸ್ಟ್: ಡಿಸೆಂಬರ್ 6-10 (ಅಡಿಲೇಡ್ ಓವಲ್, ಅಡಿಲೇಡ್)- ಡೇ ನೈಟ್ ಟೆಸ್ಟ್
ಮೂರನೇ ಟೆಸ್ಟ್: ಡಿಸೆಂಬರ್ 14-18 (ದಿ ಗಬ್ಬಾ, ಬ್ರಿಸ್ಬೇನ್)
ನಾಲ್ಕನೇ ಟೆಸ್ಟ್: ಡಿಸೆಂಬರ್ 26-30 (ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್, ಮೆಲ್ಬೋರ್ನ್)- ಬಾಕ್ಸಿಂಗ್ ಡೇ ಟೆಸ್ಟ್
ಐದನೇ ಟೆಸ್ಟ್: ಜನವರಿ 3-7 (ಸಿಡ್ನಿ ಕ್ರಿಕೆಟ್ ಮೈದಾನ, ಸಿಡ್ನಿ)- ಪಿಂಕ್ ಬಾಲ್ ಟೆಸ್ಟ್

ಕಾಂಗೂರು ಪಡೆ ಎದುರು ಟೀಮ್ ಇಂಡಿಯಾ ಮೇಲುಗೈ
1991-92ರ ನಂತರ ಮೊದಲ ಬಾರಿಗೆ ಆಸ್ಟ್ರೇಲಿಯಾ ಮತ್ತು ಭಾರತ ಐದು ಟೆಸ್ಟ್ ಪಂದ್ಯಗಳ ಸರಣಿಯನ್ನು 2024-25ರ ಸಾಲಿನಲ್ಲಿ ಆಡಲಿವೆ.
ಉಭಯ ತಂಡಗಳ ನಡುವಿನ ಕಳೆದ ನಾಲ್ಕು ಟೆಸ್ಟ್ ಸರಣಿಗಳಲ್ಲಿ ಭಾರತ ತನ್ನ ಪ್ರಾಬಲ್ಯವನ್ನು ಸಾಧಿಸಿದೆ. 2018-19 ಮತ್ತು 2020-21ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಟೆಸ್ಟ್ ಸರಣಿಗಳನ್ನು ಟೀಮ್ ಇಂಡಿಯಾ ಗೆದ್ದು ಬೀಗಿದೆ. 2018-19ರಲ್ಲಿ ಸರಣಿ ವಶ ಪಡಿಸಿಕೊಳ್ಳುವ ಮೂಲಕ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ ಗೆದ್ದ ಮೊದಲ ಏಷ್ಯಾದ ತಂಡ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications