For Quick Alerts
ALLOW NOTIFICATIONS  
For Daily Alerts
 

Border-Gavaskar Trophy: ವಿರಾಟ್ ಕೊಹ್ಲಿ ವಿಕೆಟ್ ಕಬಳಿಸುವುದಾಗಿ ಆಸ್ಟ್ರೇಲಿಯಾ ವೇಗಿ ಶಪಥ!

ಆಗಸ್ಟ್ 20 ಮಂಗಳವಾರ, ಬಹು ನಿರೀಕ್ಷಿತ ಬಾರ್ಡರ್ ಗವಾಸ್ಕರ್ ಟ್ರೋಫಿಗೂ ಮುನ್ನ ಭಾರತದ ಆತ್ಮವಿಶ್ವಾಸವನ್ನು ಕುಗ್ಗಿಸಲು ಆಸ್ಟ್ರೇಲಿಯಾ ತನ್ನ ಮೈಂಡ್ ಗೇಮ್ ಆರಂಭಿಸಿದೆ. ಈ ವರ್ಷ ಕೊನೆಯಲ್ಲಿ
ಭಾರತ ಮತ್ತು ಆಸ್ಟ್ರೇಲಿಯಾ ನಡುವೆ 5 ಟೆಸ್ಟ್ ಪಂದ್ಯಗಳ ಬಾರ್ಡರ್ ಗವಾಸ್ಕರ್ ಟ್ರೋಫಿ ನಡೆಯಲಿದೆ.

ಈ ಸರಣಿಯು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2023-2025 ಅಡಿಯಲ್ಲಿ ಆಡಲಾಗುತ್ತಿದೆ. ಉಭಯ ತಂಡಗಳ ನಡುವಿನ ಈ ಸರಣಿಯು ನವೆಂಬರ್ 26 ರಿಂದ ಜನವರಿ 7 ರವರೆಗೆ ಆಯೋಜನೆಗೊಂಡಿದೆ. ಈ ಸರಣಿಯನ್ನು ಆಡಲು ಭಾರತ ತಂಡವು ಆಸ್ಟ್ರೇಲಿಯಾಕ್ಕೆ ತೆರಳಲಿದೆ.

Border Gavaskar Trophy 2024 Scott Boland says he will take Virat Kohli wicket

ಇದಕ್ಕೂ ಮುನ್ನ ಭಾರತ ತವರಿನಲ್ಲಿ ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್‌ ತಂಡಗಳೊಂದಿಗೆ ಟೆಸ್ಟ್ ಸರಣಿಯನ್ನು ಆಡಲಿದೆ. ಇಂತಹ ಪರಿಸ್ಥಿತಿಯಲ್ಲಿ ಟೀಮ್ ಇಂಡಿಯಾ ಆಟಗಾರರನ್ನು ಕೆಣಕಲು ಮಾಡುವುದಕ್ಕೆ ಆಸ್ಟ್ರೇಲಿಯಾ ಆರಂಭಿಸಿದೆ. ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಬಗ್ಗೆ ಕೂಡ ಆಸ್ಟ್ರೇಲಿಯಾ ವೇಗಿ ದೊಡ್ಡ ಹೇಳಿಕೆ ನೀಡಿದ್ದಾರೆ.

ಆಸ್ಟ್ರೇಲಿಯಾದ ಮಾಧ್ಯಮವೊಂದರ ಜೊತೆಗೆ ಮಾತನಾಡಿರುವ ವೇಗದ ಬೌಲರ್ ಸ್ಕಾಟ್ ಬೋಲ್ಯಾಂಡ್, 'ಮುಂಬರುವ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ವಿರಾಟ್ ಕೊಹ್ಲಿ ವಿಕೆಟ್ ಪಡೆಯುವುದು ಒಳ್ಳೆಯದು. ಮತ್ತೊಮ್ಮೆ ಅವರ ವಿಕೆಟ್ ಪಡೆಯುವ ಅವಕಾಶ ನನಗೆ ಸಿಗುತ್ತದೆ. ಬಾರ್ಡರ್ ಗವಾಸ್ಕರ್ ಟ್ರೋಫಿಗಿಂತ ಮೊದಲು ನಾನು ಸಾಕಷ್ಟು ಪಂದ್ಯಗಳನ್ನು ಆಡುತ್ತೇನೆ. ಇದು ನನಗೆ ವಿರಾಟ್ ಕೊಹ್ಲಿ ವಿಕೆಟ್ ಪಡೆಯಲು ತುಂಬಾ ಸಹಾಯ ಮಾಡುತ್ತದೆ' ಎಂದು ಹೇಳಿದ್ದಾರೆ.

WTC ಫೈನಲ್‌ನಲ್ಲಿ ಕೊಹ್ಲಿ ಔಟ್

ಕಳೆದ ವರ್ಷ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ ಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರ ವಿಕೆಟ್‌ಯನ್ನು ಪಡೆಯುವಲ್ಲಿ ಬೋಲ್ಯಾಂಡ್ ಯಶಸ್ವಿಯಾಗಿದ್ದರು. ಈಗ ಮತ್ತೊಮ್ಮೆ ಅವರು ಕೊಹ್ಲಿಯನ್ನು ಔಟ್ ಮಾಡುವ ನಿರೀಕ್ಷೆಯಲ್ಲಿದ್ದಾರೆ.

ವಿರಾಟ್ ಕೊಹ್ಲಿ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ಆಗಿದ್ದು, ವಿದೇಶಿ ಪಿಚ್‌ಗಳಲ್ಲಿ ಅಬ್ಬರಿಸಿ ಆನೇಕ ದಾಖಲೆಗಳನ್ನು ಬರೆದಿದ್ದಾರೆ. ಈಗ ಬಾರ್ಡರ್- ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಅವರು ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ಉಳಿದರೆ ಆಸ್ಟ್ರೇಲಿಯಾಕ್ಕೆ ಸೋಲು ಪಕ್ಕ.

ವಿರಾಟ್ 131 ಟೆಸ್ಟ್ ಪಂದ್ಯಗಳ 191 ಇನ್ನಿಂಗ್ಸ್‌ಗಳಲ್ಲಿ 8848 ರನ್ ಗಳಿಸಿದ್ದಾರೆ. ಕೊಹ್ಲಿ ಹೆಸರಿನಲ್ಲಿ 29 ಶತಕ ಹಾಗೂ 30 ಅರ್ಧ ಶತಕಗಳಿವೆ.

Story first published: Tuesday, August 20, 2024, 18:01 [IST]
Other articles published on Aug 20, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+