Border-Gavaskar Trophy 2024: ಆಸ್ಟ್ರೇಲಿಯಾಕ್ಕೆ ಆರಂಭಿಕನ ಸಮಸ್ಯೆ; ಇನ್ನಿಂಗ್ಸ್ ತೆರೆಯುವವರು ಯಾರು?
ಈ ವರ್ಷದ ನವೆಂಬರ್ 22 ರಿಂದ ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಐದು ಪಂದ್ಯಗಳ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಸರಣಿಗೂ ಮುನ್ನ ಆಸ್ಟ್ರೇಲಿಯಾ ತಂಡಕ್ಕೆ ಆರಂಭಿಕ ಬ್ಯಾಟರ್ ಅಭಾವ ಕಾಡುತ್ತಿದೆ.
ಸ್ಪೋಟಕ ಬ್ಯಾಟರ್ ಡೇವಿಡ್ ವಾರ್ನರ್ ಅವರು ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ನಂತರ ಕಾಂಗೂರು ಪಡೆಯ ಆರಂಭಿಕ ಯಾರು ಎಂಬ ಪ್ರಶ್ನೆ ಉದ್ಭವಿಸಿದೆ. ಮತ್ತೊಂದೆಡ ಸ್ಟಾರ್ ಬ್ಯಾಟರ್ ಸ್ಟೀವ್ ಸ್ಮಿತ್ ಅವರ ಟೆಸ್ಟ್ ಬ್ಯಾಟಿಂಗ್ ಸ್ಥಾನದ ಬಗ್ಗೆ ಕೂಡ ಚರ್ಚೆ ನಡೆಯುತ್ತಿದೆ. ಈ ವಿಚಾರವನ್ನು ಸ್ವತಃ ಆಸ್ಟ್ರೇಲಿಯಾ ತಂಡದ ಮುಖ್ಯ ಕೋಚ್ ಆಂಡ್ರ್ಯೂ ಮೆಕ್‌ಡೊನಾಲ್ಡ್ ಬಹಿರಂಗಪಡಿಸಿದ್ದಾರೆ.

ಸ್ಮಿತ್ ಫ್ಲಾಪ್
ಡೇವಿಡ್ ವಾರ್ನರ್ ನಿವೃತ್ತಿಯ ನಂತರ ಉಸ್ಮಾನ್ ಖವಾಜಾ ಅವರೊಂದಿಗೆ ಸ್ಟೀವ್ ಸ್ಮಿತ್ ಇನ್ನಿಂಗ್ಸ್ ತೆರೆಯುವ ಅವಕಾಶ ಪಡೆದಿದ್ದರು. ಆದರೆ, ಈ ಸ್ಥಾನದಲ್ಲಿ ಅವರ ಫ್ಲಾಪ್ ಆಗಿದ್ದರು. ಕಳೆದೊಂದು ದಶಕದಿಂದ ಆಸ್ಟ್ರೇಲಿಯದ ಬ್ಯಾಟಿಂಗ್‌ನ ಪ್ರಬಲ ಆಧಾರ ಸ್ತಂಭವಾಗಿದ್ದ ಸ್ಮಿತ್ ಆರಂಭಿಕರಾಗಿ ಕಳಪೆ ಪ್ರದರ್ಶನ ನೀಡಿರುವುದು ತಂಡದ ಚಿಂತೆಗೆ ಕಾರಣವಾಗಿದೆ. ಆರಂಭಿಕರಾಗಿ ಅವರು 4 ಟೆಸ್ಟ್ ಪಂದ್ಯಗಳಲ್ಲಿ 28.50 ರ ಸರಾಸರಿಯಲ್ಲಿ ರನ್ ಗಳಿಸಿದರೆ, ಅವರ ವೃತ್ತಿಜೀವನದ ಸರಾಸರಿ 56.97 ಆಗಿದೆ.
ಕೋಚ್ ಹೇಳಿದ್ದೇನು?
"ಸ್ಟೀವ್ ಸ್ಮಿತ್ ಶೀಲ್ಡ್ ಕ್ರಿಕೆಟ್ ಆಡಿದರೆ, ನ್ಯೂ ಸೌತ್ ವೇಲ್ಸ್ ತಂಡ ಕೋಚ್ ಗ್ರೆಗ್ ಶಿಪ್ಪರ್ಡ್ ಯಾವ ಕ್ರಮಾಂಕದಲ್ಲಿ ಅವರನ್ನು ಆಡಿಸುತ್ತಾರೆ ಎಂಬುದನ್ನು ಕಾದು ನೋಡಬೇಕು. ನಮ್ಮ ಯೋಜನೆಯನ್ನು ಕೋಚ್‌ಗೂ ಹೇಳುತ್ತೇವೆ. ಸ್ಮಿತ್ ಅವರ ಬ್ಯಾಟಿಂಗ್ ಕ್ರಮಾಂಕವನ್ನು ನಿರ್ಧರಿಸುವಲ್ಲಿ ಟೆಸ್ಟ್ ನಾಯಕ ಪ್ಯಾಟ್ ಕಮಿನ್ಸ್ ಕೂಡ ಪಾತ್ರ ವಹಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ನಾನು ಹೆಚ್ಚಿನದನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ. ಆದರೆ ಸ್ಮಿತ್ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಚರ್ಚೆಗಳು ನಡೆಯುತ್ತಿವೆ" ಎಂದು ಕೋಚ್ ಮೆಕ್‌ಡೊನಾಲ್ಡ್ ಹೇಳಿದ್ದಾರೆ.
ಸ್ಟೀವ್ ಸ್ಮಿತ್ ಬದಲಿಗೆ ಯಾರು?
ನಾವು ಸ್ಟೀವ್ ಸ್ಮಿತ್ ಅವರನ್ನು ಆರಂಭಿಕ ಸ್ಥಾನದಿಂದ ತೆಗೆದುಹಾಕಿದರೆ, ಬೇರೆಯವರು ಆ ಕ್ರಮಾಂಕಕ್ಕೆ ಹೋಗಬೇಕಾಗುತ್ತದೆ. ನಾಲ್ಕನೇ ಕ್ರಮಾಂಕದಲ್ಲಿ ಕ್ಯಾಮರೂನ್ ಗ್ರೀನ್ ಯಶಸ್ವಿಯಾಗಿದ್ದಾರೆ. ಆದರೆ ಈ ಬಗ್ಗೆ ಇನ್ನೂ ಯಾವುದನ್ನೂ ನಿರ್ಧರಿಸಿಲ್ಲ ಎಂದು ಮೆಕ್‌ಡೊನಾಲ್ಡ್ ತಿಳಿಸಿದ್ದಾರೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ನವೆಂಬರ್ 22 ರಿಂದ ಪರ್ತ್‌ನಲ್ಲಿ ನಡೆಯಲಿದೆ. ಇದು ಐದು ಪಂದ್ಯಗಳ ಟೆಸ್ಟ್ ಸರಣಿಯಾಗಿದೆ. ಸರಣಿ ಆರಂಭಕ್ಕೂ ಮುನ್ನ ಭಾರೀ ಕುತೂಹಲ ಮೂಡಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications