For Quick Alerts
ALLOW NOTIFICATIONS  
For Daily Alerts
 

ಆ ಇಬ್ಬರನ್ನು ಆಸ್ಟ್ರೇಲಿಯಾ ಅತಿಯಾಗಿ ನೆಚ್ಚಿಕೊಂಡಿದೆ: ಮಾಜಿ ಆಸಿಸ್ ದಿಗ್ಗಜನ ವಿಶ್ಲೇಷಣೆ

Border-Gavaskar Trophy: Glenn McGrath explain the reason for why Australia failed in India

ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ ಆಸ್ಟ್ರೇಲಿಯಾ ತಂಡ ಈಗ ಮೂರನೇ ಪಂದ್ಯಕ್ಕೆ ಸಜ್ಜಾಗುತ್ತಿದೆ. ಮಾರ್ಚ್ 1ರಿಂದ ಸರಣಿಯ ಮೂರನೇ ಪಂದ್ಯ ಆರಂಬವಾಗಲಿದ್ದು ಈ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ವೈಟ್‌ವಾಶ್ ಮುಖಭಂಗದಿಂದ ಹೊರಬರುವ ಪ್ರಯತ್ನ ನಡೆಸಲಿದೆ ಆಸಿಸ್ ಪಡೆ. ಈ ಸಂದರ್ಭದಲ್ಲಿ ಆಸ್ಟ್ರೇಲಿಯಾ ತಂಡದ ಈ ಹಿನ್ನೆಡೆಗೆ ಕಾರಣಗಳು ಏನು ಎಂಬುದರ ವಿಚಾರವಾಗಿಯೂ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು ಮಾಜಿ ಕ್ರಿಕೆಟಿಗ ದಿಗ್ಗಜ ಬೌಲರ್ ಗ್ಲೆನ್ ಮೆಗ್ರಾಥ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಮೆಗ್ರಾಥ್, ಆಸ್ಟ್ರೇಲಿಯಾ ತಂಡ ಭಾರತದಲ್ಲಿ ವೈಫಲ್ಯ ಕಾಣಲು ಪ್ರಮುಖ ಕಾರಣವನ್ನು ಉಲ್ಲೇಖಿಸಿದ್ದಾರೆ. ಆಸ್ಟ್ರೇಲಿಯಾ ತಂಡ ತನ್ನ ಇಬ್ಬರು ಪ್ರಮುಖ ಆಟಗಾರರಾದ ಸ್ಟೀವ್ ಸ್ಮಿತ್ ಹಾಗೂ ಮಾರ್ನಸ್ ಲ್ಯಾಬುಶೈನ್ ಅವರನ್ನು ಅತಿಯಾಗಿ ನೆಚ್ಚಿ ಕೊಂಡಿದೆ ಎಂದಿದ್ದಾರೆ ಗ್ಲೆನ್ ಮೆಗ್ರಾಥ್. ಈ ಕಾರಣದಿಂದಾಗಿಯೇ ಆಸಿಸ್ ಪಡೆಗೆ ಭಾರತದಲ್ಲಿ ಯಶಸ್ಸು ದೊರೆತಿಲ್ಲ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸೋಮವಾರ ಮೆಗ್ರಾಥ್ ನ್ಯೂಸ್ ಏಜೆನ್ಸಿ ಪಿಟಿಐಗೆ ಪ್ರತಿಕ್ರಿಯೆ ನೀಡಿದ್ದರು. ಈ ಸಂದರ್ಭದಲ್ಲಿ ಅವರು ಭಾರತದಲ್ಲಿ ಮೇಲುಗೈ ಸಾಧಿಸಬೇಕಾದರೆ ತಂಡವಾಗಿ ಸ್ಪಿನ್ ಸವಾಲನ್ನು ಎದುರಿಸಲು ಯೋಜನೆ ರೂಪಿಸಬೇಕು ಎಂದಿದ್ದಾರೆ.

"ನನ್ನ ಪ್ರಕಾರ ಆಸ್ಟ್ರೇಲಿಯಾ ತಂಡ, ಸ್ಟೀವ್ ಸ್ಮಿತ್ ಹಾಗೂ ಮಾರ್ನಸ್ ಲ್ಯಾಬುಶೈನ್ ಅವರನ್ನು ಅತೊಯಾಗಿ ನೆಚ್ಚಿಕೊಂಡಿದೆ. ಟ್ರೆವಿಸ್ ಹೆಡ್ ಕೂಡ ಉತ್ತಮ ಪ್ರದರ್ಶನ ನೀಡಿದ್ದರು. ಈಗ ಒಟ್ಟಾರೆ ಬ್ಯಾಟಿಂಗ್ ವಿಭಾಗವೇ ಎದ್ದುನಿಲ್ಲಬೇಕಿದೆ" ಎಂದಿದ್ದಾರೆ ಆಸ್ಟ್ರೇಲಿಯಾದ ದಿಗ್ಗಜ ವೇಗದ ಬೌಲರ್ ಗ್ಲೆನ್ ಮೆಗ್ರಾಥ್.

ಭಾರತ ಪ್ರವಾಸದಲ್ಲಿ ಹಿನ್ನಡೆ ಅನುಭವಿಸಿದ ಬಳಿಕ ಆಸ್ಟ್ರೇಲಿಯಾ ತಂಡದ ವಿರುದ್ಧ ಸಾಕಷ್ಟು ಟೀಕೆಗಳು ಕೇಳಿ ಬಂದಿದೆ. ಅನೇಜ ಮಾಜಿ ಕ್ರಿಕೆಟಿಗರು ಆಸಿಸ್ ಪ್ರದರ್ಶನದ ಬಗ್ಗೆ ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ. ಇದರಲ್ಲಿ ತಂಡದ ಬ್ಯಾಟಿಂಗ್ ವಿಧಾನದ ಬಗ್ಗೆ ಹಾಗೂ ಆಯ್ಕೆಯ ವಿಚಾರವಾಗಿಯೂ ಟೀಕೆಗಳು ಕೇಳಿ ಬಂದಿದೆ. ಈ ವಿಚಾರವಾಗಿಯೂ ಮೆಗ್ರಾಥ್ ಅನಿಸಿಕೆ ಹಂಚಿಕೊಂಡಿದ್ದಾರೆ.

"ಮೊದಲ ಟೆಸ್ಟ್ ಪಂದ್ಯದಲ್ಲಿ ಅವರು(ಆಸ್ಟ್ರೇಲಿಯಾ ತಂಡ) ಬಹಳ ರಕ್ಷಣಾತ್ಮಕವಾಗಿ ಆಡಿದ್ದರು. ಎರಡನೇ ಪಂದ್ಯದಲ್ಲಿ ಅವರ ಬಹಳ ಆಕ್ರಮಣಕಾರಿಯಾಗಿದ್ದರು. ಹಾಗಾಗಿ ಆ ಎರಡು ಟೆಸ್ಟ್ ಪಂದ್ಯಗಳಿಂದ ಅವರು ಏನಾದರೂ ಪಾಠ ಕಲಿತಿದ್ದಾರಾ ಎಂಬುದನ್ನು ಕಾದು ನೋಡೋಣ. ಅವರು ಅದರ ಮಧ್ಯದ ವಿಧಾನವನ್ನು ಕಂಡುಕೊಳ್ಳಬೇಕು. ಭಾರತದಲ್ಲಿ ಹಾಗಾದಾಗ ಮಾತ್ರವೇ ಬೌಲರ್‌ಗಳ ಮೇಲೆ ಒತ್ತಡ ಹೇರಲು ಸಾಧ್ಯ" ಎಂದಿದ್ದಾರೆ ಮೆಗ್ರಾಥ್.

ಭಾರತ ಹಾಗೂ ಆಸ್ಟ್ರೇಲಿಯಾ ತಂಎಗಳ ನಡುವಿ ನಾಳ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊದಲ ಎರಡು ಪಂದ್ಯಗಳಲ್ಲಿ ಟೀಮ್ ಇಂಡಿಯಾ ಗೆಲುವು ಸಾಧಿಸಿದೆ. ಮೂರನೇ ಪಂದ್ಯ ಇಂದೋರ್‌ನಲ್ಲಿ ಬುಧವಾರದಿಂದ ಆರಂಬವಾಗಲಿದ್ದು ಎರಡು ತಮಡಗಳು ಕೂಡ ಈ ಪಂದ್ಯಕ್ಕಾಗಿ ಅಂತಿಮ ಹಂತದ ಸಿದ್ಧತೆ ನಡೆಸುತ್ತಿದೆ.

Story first published: Tuesday, February 28, 2023, 11:53 [IST]
Other articles published on Feb 28, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+