For Quick Alerts
ALLOW NOTIFICATIONS  
For Daily Alerts
 

India vs Aus Test: 3ನೇ ಟೆಸ್ಟ್ ಪಂದ್ಯಕ್ಕೆ ಪ್ಯಾಟ್ ಕಮ್ಮಿನ್ಸ್ ಅಲಭ್ಯ

Border-Gavaskar Trophy: Pat Cummins unavailable for 3rd test Steve Smith will lead Australia

ಆಸ್ಟ್ರೇಲಿಯಾ ತಂಡದ ಖಾಯಂ ನಾಯಕ ಪ್ಯಾಟ್ ಕಮ್ಮಿನ್ಸ್ 3ನೇ ಟೆಸ್ಟ್ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಎರಡನೇ ಟೆಸ್ಟ್ ಪಂದ್ಯದ ಮುಕ್ಯಾಯದ ಬಳಿಕ ಕೌಟುಂಬಿಕ ಕಾರಣದಿಂದಾಗಿ ಹಠಾತ್ ಆಗಿ ತವರಿಗೆ ವಾಪಾಸಾಗಿರುವ ಪ್ಯಾಟ್ ಕಮ್ಮಿನ್ಸ್ ಮೂರನೇ ಪಂದ್ಯಕ್ಕೂ ಮುನ್ನ ಭಾರತಕ್ಕೆ ವಾಪಾಸಾಗಲಿದ್ದಾರೆ ಎನ್ನಲಾಗಿತ್ತು. ಆದರೆ ಆಸಿಸ್ ನಾಯಕ ಈಗ ಮೂರನೇ ಟೆಸ್ಟ್ ಪಂದ್ಯದಿಂದ ಹೊರಗುಳಿಯುವುದು ದೃಢಪಟ್ಟಿದೆ.

ಕ್ರಿಕೆಟ್.ಕಾಮ್.ಎಯು ಪ್ಯಾಟ್ ಕಮ್ಮಿನ್ಸ್ ಹೇಳಿಕೆಯನ್ನು ಉಲ್ಲೇಖಿಸಿ ವರದಿ ಪ್ರಕಟಿಸಿದ್ದು ಇದರಲ್ಲಿ ಕುಟುಂಬದೊಂದಿಗೆ ಮತ್ತಷ್ಟು ಕಾಲ ಕಳೆಯುವುದು ಉತ್ತಮ ಎಂದು ಅನಿಸಿಕೆ ಹಂಚಿಕೊಂಡಿದ್ದಾರೆ. ತಮ್ಮ ಪರಿಸ್ಥಿತಿಯನ್ನು ಆಸ್ಟ್ರೇಲಿಯಾ ತಂಡದ ಸಹ ಆಟಗಾರರು ಅರ್ಥ ಮಾಡಿಕೊಳ್ಳುತ್ತಾರೆ ಎಂದಿದ್ದಾರೆ ಪ್ಯಾಟ್ ಕಮ್ಮಿನ್ಸ್. ಕುಟುಂಬದ ಸದಸ್ಯರೊಬ್ಬರ ಅನಾರೋಗ್ಯದ ಕಾರಣದಿಂದಾಗಿ ಕಮ್ಮಿನ್ಸ್ ಆಸ್ಟ್ರೇಲಿಯಾಗೆ ಮರಳಿದ್ದರು.

"ಸದ್ಯ ನಾನು ಭಾರತಕ್ಕೆ ಮರಳದಿರಲು ನಿರ್ಧರಿಸಿದ್ದೇನೆ. ಇಲ್ಲಿ ಕುಟುಂಬದೊಂದಿಗೆ ಇರುವುದು ಸೂಕ್ತ ಎಂದು ನಾನು ಭಾವಿಸಿದ್ದೇನೆ. ಕ್ರಿಕೆಟ್ ಆಸ್ಟ್ರೇಲಿಯಾ ಹಾಗೂ ನನ್ನ ತಂಡದ ಸಹ ಆಟಗಾರರಿಂದ ದೊರೆತ ಬೆಂಬಲಕ್ಕೆ ನಾನು ಆಭಾರಿ. ನನ್ನ ಸ್ಥಿತಿ ಅರ್ಥ ಮಾಡಿಕೊಂಡಿರುವುದಕ್ಕೆ ಧನ್ಯವಾದ" ಎಂದಿದ್ದಾರೆ ಆಸಿಸ್ ನಾಯಕ ಪ್ಯಾಟ್ ಕಮ್ಮಿನ್ಸ್.

ಪ್ಯಾಟ್ ಕಮ್ಮಿನ್ಸ್ ಅಲಭ್ಯತೆಯಲ್ಲಿ ತಂಡದ ಉಪನಾಯಕ ಸ್ಟೀವ್ ಸ್ಮಿತ್ ಇಂದೋರ್ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಲು ಸಜ್ಜಾಗಿದ್ದಾರೆ. ಪ್ಯಾಟ್ ಕಮ್ಮಿನ್ಸ್‌ವೆ ಯಾವುದೇ ಕ್ಷಣದಲ್ಲಾದರೂ ತಂಡವನ್ನು ಸೇರಿಕೊಳ್ಳಲು ಅವಕಾಶವಿದ್ದರೂ ಅಹ್ಮದಾಬಾದ್‌ನಲ್ಲಿ ನಡೆಯಲಿರುವ ನಾಲ್ಕನೇ ಪಂದ್ಯಕ್ಕೂ ಕಮ್ಮಿನ್ಸ್ ಸೇರಿಕೊಳ್ಳುವುದು ಅನುಮಾನವಾಗಿದೆ. ಹೀಗಾಗಿ ಸರಣಿಯ ಉಳಿದ ಎರಡು ಪಂದ್ಯಗಳಲ್ಲಿಯೂ ಸ್ಟೀವ್ ಸ್ಮಿತ್ ನಾಯಕನಾಗಿ ಮುನ್ನಡೆಸುವುದು ಬಹುತೇಕ ಖಚಿತ.

ಇನ್ನು ಸ್ಟೀವ್ ಸ್ಮಿತ್ 2014ರಿಂದ 2018ರವರೆಗೆ ಆಸ್ಟ್ರೇಲಿಯಾ ತಂಡದ ಖಾಯಂ ನಾಯಕನಾಗಿದ್ದು ಈ ಅವಧಿಯಲ್ಲಿ 34 ಟೆಸ್ಟ್ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. 2021ರಲ್ಲಿ ಆಸ್ಟ್ರೇಲಿಯಾ ತಂಡದ ಉಪನಾಯಕನಾಗಿ ನೇಮಕವಾದ ಸ್ಟೀವ್ ಸ್ಮಿತ್ ಪ್ಯಾಟ್ ಕಮ್ಮಿನ್ಸ್ ಅಲಭ್ಯತೆಯಲ್ಲಿ ಕೆಲ ಸಂದರ್ಭಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ.

ಇನ್ನು ಆಸ್ಟ್ರೇಲಿಯಾ ತಂಡ ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ಸಾಕಷ್ಟು ಗಾಯದ ಸಮಸ್ಯೆಗೆ ಒಳಗಾಗಿದೆ. ಈಗ ಸ್ವತಃ ನಾಯಕ ಪ್ಯಾಟ್ ಕಮ್ಮಿನ್ಸ್ ಕೂಡ ಮೂರನೇ ಟೆಸ್ಟ್‌ಗೆ ಅಲಭ್ಯವಾಗುತ್ತಿರುದು ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ಇದಕ್ಕೂ ಮುನ್ನ ಜೋಶ್ ಹೇಜಲ್‌ವುಡ್ ಹಾಗೂ ಡೇವಿಡ್ ವಾರ್ನರ್ ಗಾಯದ ಕಾರಣದಿಂದಾಗಿ ತವರಿಗೆ ವಾಪಸಾಗಿದ್ದರು.

Story first published: Friday, February 24, 2023, 13:28 [IST]
Other articles published on Feb 24, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+