Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs AUS: ಆಸ್ಟ್ರೇಲಿಯಾದಲ್ಲಿ ವಿರಾಟ್ ಕೊಹ್ಲಿ ಘರ್ಜಿಸಲಿದ್ದಾರೆ; ಕಾಂಗೂರು ಪಡೆಗೆ ರವಿಶಾಸ್ತ್ರಿ ಎಚ್ಚರಿಕೆ!

ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಫಾರ್ಮ್ ಸಮಸ್ಯೆ ಎದುರಿಸುತ್ತಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ತಮ್ದಮ ಹಳೆಯ ಖದರ್ ಕಳೆದುಕೊಂಡಿದ್ದಾರೆ. ಸ್ಪಿನ್ ಬೌಲಿಂಗ್‌ನಲ್ಲಿ ರನ್ ಗಳಿಸಲು ವಿರಾಟ್ ಪರದಾಡುತ್ತಿದ್ದು, ಹಲವು ಬಾರಿ ವಿಕೆಟ್ ಕಳೆದುಕೊಂಡಿದ್ದಾರೆ. ಇದೀಗ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್- ಗವಸ್ಕಾರ್ ಟ್ರೋಫಿಯ ಟೆಸ್ಟ್ ಸರಣಿಯಲ್ಲಿ ವಿರಾಟ್‌ ಕೊಹ್ಲಿ ಬ್ಯಾಟಿಂಗ್ ಪ್ರದರ್ಶನದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ಟೆಸ್ಟ್ ಸರಣಿಗೂ ಮುನ್ನ ವಿರಾಟ್ ಕೊಹ್ಲಿ ತಮ್ಮ ಕಳಪೆ ಫಾರ್ಮ್ ಅನ್ನು ಸುಧಾರಿಸುವ ಮತ್ತು ಯಶಸ್ಸನ್ನು ಸಾಧಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಮಾಜಿ ಟೀಮ್ ಇಂಡಿಯಾ ಹೆಡ್‌ಕೋಚ್ ರವಿಶಾಸ್ತ್ರಿ ಭರವಸೆ ವ್ಯಕ್ತಪಡಿಸಿದ್ದಾರೆ.

ವಿರಾಟ್ ಕೊಹ್ಲಿ ತವರಿನಲ್ಲಿ ನಡೆದ ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ವಿರುದ್ಧದ ಐದು ಟೆಸ್ಟ್ ಪಂದ್ಯಗಳಲ್ಲಿ ಕೇವಲ ಒಂದು ಅರ್ಧಶತಕವನ್ನು ಗಳಿಸಿದ್ದಾರೆ. ಇದು ವಿರಾಟ್ ಕೊಹ್ಲಿ ಕಳಪೆ ಫಾರ್ಮ್ ಎದುರಿಸುತ್ತಿರುವುದನ್ನು ತೋರಿಸುತ್ತಿದೆ. ಆದರೆ, ಅವರು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಫಾರ್ಮ್‌ಗೆ ಮರಳುವ ನಿರೀಕ್ಷೆಯಿದೆ. ಹೀಗಾಗಿ ವಿರಾಟ್ವ ಕೊಹ್ಲಿ ಬಗ್ಗೆ ಆಸ್ಟ್ರೇಲಿಯಾಕ್ಕೆ ರವಿಶಾಸ್ತ್ರಿ ಅವರು ಎಚ್ಚರಿಕೆ ಕೊಟ್ಟಿದ್ದಾರೆ.

Border-Gavaskar Trophy Ravi Shastri warned Australia about Virat Kohli

ರವಿಶಾಸ್ತ್ರಿ ಎಚ್ಚರಿಕೆ

ಸಂದರ್ಶನವೊಂದರಲ್ಲಿ ಮಾತನಾಡಿರುವ ರವಿಶಾಸ್ತ್ರಿ ಅವರು ಆಸ್ಟ್ರೇಲಿಯಾಕ್ಕೆ ಎಚ್ಚರಿಕೆ ನೀಡಿದ್ದು, ಕೊಹ್ಲಿ ಅವರು ಬ್ಯಾಟಿಂಗ್ ಮಾಡಲು ಮತ್ತು ರನ್ ಗಳಿಸಲು ಇಷ್ಟಪಡುವ ದೇಶಕ್ಕೆ ಮರಳಿದ್ದಾರೆ ಎಂದು ಹೇಳಿದ್ದಾರೆ. 2011-12ರಲ್ಲಿ ಆಸ್ಟ್ರೇಲಿಯಾಕ್ಕೆ ತಮ್ಮ ಮೊದಲ ಟೆಸ್ಟ್ ಪ್ರವಾಸ ಕೈಗೊಂಡಿದ್ದ ಕೊಹ್ಲಿ ಅವರ ಅದ್ಭುತ ಬ್ಯಾಟಿಂಗ್ ಪ್ರದರ್ಶನವನ್ನು ನೆನಪಿಸಿದ್ದಾರೆ. ಅಡಿಲೇಡ್‌ನಲ್ಲಿ ನಡೆದ ಪಂದ್ಯದಲ್ಲಿ ಕೊಹ್ಲಿ ಸಿಡಿಸಿ ಶತಕವನ್ನು ಮೆಲುಕು ಹಾಕಿದ್ದಾರೆ. ಇದಾದ ನಂತರ ಕೊಹ್ಲಿ ಅವರು 2014ರ ಪ್ರವಾಸದ ಸಮಯದಲ್ಲಿ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ 692 ರನ್ ಗಳು ಮತ್ತು 2018-19 ರ ಸರಣಿ ವೇಳೆ ಪರ್ತ್‌ನಲ್ಲಿ 123 ರನ್‌ಗಳ ಅದ್ಭುತ ಇನ್ನಿಂಗ್‌ ಆಡಿದ ಬಗ್ಗೆಯೂ ರವಿಶಾಸ್ತ್ರಿ ಉಲ್ಲೇಖಿಸಿ ಆಸ್ಟ್ರೇಲಿಯಾಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ.

ಕೊಹ್ಲಿಗೆ ಸಲಹೆ

ವಿರಾಟ್ ಕೊಹ್ಲಿ ತಾಳ್ಮೆ ಆಟದ ಬಗ್ಗೆ ಪ್ರತಿಕ್ರಿಯಿಸಿರುವ ರವಿಶಾಸ್ತ್ರಿ, ನೀವು ಉತ್ಸಾಹದಲ್ಲಿರುವಾಗ ಶಾಂತವಾಗಿರುವುದು ಪ್ರಮುಖವಾಗಿದೆ. ಬ್ಯಾಟಿಂಗ್‌ಗೆ ಬಂದಾಗ ಅಥವಾ ಸರಣಿ ಮೊದಲ ಮೂರು ಇನ್ನಿಂಗ್ಸ್‌ಗಳವರೆಗೆ ಶಾಂತವಾಗಿರಬೇಕು. ಆತುರಪಡುವ ಬದಲು ಶಾಂತವಾಗಿ ಮತ್ತು ತಮ್ಮದೇ ಆದ ವೇಗದಲ್ಲಿ ಆಡುವುದಾದರೆ, ಅವರು ಉತ್ತಮವಾಗಿ ಬ್ಯಾಟಿಂಗ್ ಮಾಡಿ ರನ್ ಗಳಿಸುತ್ತಾರೆ ಎಂದು ವಿರಾಟ್ ಕೊಹ್ಲಿಗೆ ರವಿಶಾಸ್ತ್ರಿ ಸಲಹೆ ನೀಡಿದ್ದಾರೆ.

Story first published: Friday, November 15, 2024, 13:15 [IST]
Other articles published on Nov 15, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+