ಬಾರ್ಡರ್ ಗವಾಸ್ಕರ್ ಟ್ರೋಫಿ: ಭವಿಷ್ಯ ನುಡಿದ ರಿಕಿ ಪಾಂಟಿಂಗ್
ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಬಾರ್ಡರ್ ಗವಾಸ್ಕರ್ ಕ್ರಿಕೆಟ್ ಟೂರ್ನಿಗೂ ಹೆಚ್ಚಿನ ಮಹತ್ವ ಸಿಗುತ್ತಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿತ್ತು. ಈ ಬೆನ್ನಲೆ ಈ ಕ್ರಿಕೆಟ್ ಟೂರ್ನಿಗೆ ಸಂಬಂಧಿಸಿದಂತೆ ಮತ್ತೊಂದು ಸುದ್ದಿ ಹೊರ ಬಂದಿದ್ದು, ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಈ ಸರಣಿಯ ಬಗ್ಗೆ ಭವಿಷ್ಯವಾಣಿ ನುಡಿದಿದ್ದಾರೆ.
ಹಲವು ವಿಶಿಷ್ಠಗಳಿಂದ ಕೂಡಿರಲಿರುವ ಈ ಬಾರಿಯ ಬಾರ್ಡರ್ ಗವಾಸ್ಕರ್ ಟ್ರೋಫಿಯ ಆಯೋಜನೆಯನ್ನು ಆಸ್ಟ್ರೇಲಿಯಾ ಮಾಡಲಿದೆ. ಈ ಬಾರಿ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಿಸಲು ನಿರ್ಧರಿಸಲಾಗಿದೆ. ಅಲ್ಲದೆ ಈ ಸರಣಿಯ ಎರಡನೇ ಟೆಸ್ಟ್ ಡೇ ಆಂಡ್ ನೈಟ್ ಆಗಿರುತ್ತದೆ. ಈ ಸರಣಿ ಆರಂಭವಾಗುವ ಮುನ್ನ ಆಸೀಸ್ ಮೈಂಡ್ ಗೇಮ್ ಸ್ಟಾರ್ಟ್ ಮಾಡಿದೆ. ಈ ಮಹಾನ್ ಟೂರ್ನಿಗೆ ಇನ್ನೂ ಸಾಕಷ್ಟು ಸಮಯವಿದ್ದು, ಆಸ್ಟ್ರೇಲಿಯಾ ದಿಗ್ಗಜ ಆಟಗಾರ ರಿಕಿ ಪಾಂಟಿಂಗ್ ಈಗಲೇ ಭವಿಷ್ಯ ನುಡಿದಿದ್ದಾರೆ.

ಯಾರ ಮುಡಿಗೆ ಸರಣಿ
ಈ ಬಾರಿಯ ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ಆಸ್ಟ್ರೇಲಿಯಾ ಟ್ರೋಫಿಗೆ ಮುತ್ತಿಡಲಿದೆ ಎಂದು ಪಾಂಟಿಂಗ್ ತಿಳಿಸಿದ್ದಾರೆ. ಹಾಗೇ ಭಾರತವನ್ನು ಅವರು ಹಗುರವಾಗಿ ಪರಿಗಣಿಸಿಲ್ಲ.
ಮುಂದಿನ ವರ್ಷ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ನಡೆಯಲಿದ್ದು, ಹೀಗಾಗಿ ಈ ಸರಣಿ ಬಹಳ ಮಹತ್ವ ಪಡೆದಿದೆ. ಸದ್ಯ WTC ಅಂಕ ಪಟ್ಟಿಯಲ್ಲಿ ಭಾರತ ಅಗ್ರ ಸ್ಥಾನದಲ್ಲಿದ್ದು, ಆಸ್ಟ್ರೇಲಿಯಾ ಎರಡನೇ ಸ್ಥಾನದಲ್ಲಿದೆ. ಇನ್ನು ಹಲವು ಸರಣಿಗಳು ಆಡುವುದು ಬಾಕಿ ಇದ್ದು, ಅಂಕ ಪಟ್ಟಿಯಲ್ಲಿ ಏರಿಳಿತ ಆಗಬಹುದು. ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ನಿಜಕ್ಕೂ ಈ ಬಾರಿ ಭಾರತೀಯ ಆಟಗಾರರಿಗೆ ನ್ಯೂ ಚಾಲೆಂಜ್.
ಆತಿಥೇಯರಿಗೆ ಪುಟಿದೇಳುವ ವಿಶ್ವಾಸ
ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಸದ್ಯ ಭರ್ಜರಿ ಫಾರ್ಮ್‌ನಲ್ಲಿವೆ. ಈ ಬಾರಿಯ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ಪುಟಿದೇಳುವ ವಿಶ್ವಾಸವಿದೆ ಎಂದು ಪಾಂಟಿಂಗ್ ತಿಳಿಸಿದ್ದಾರೆ. ಹಲವು ದಿನಗಳಿಂದ ನಾಲ್ಕು ಟೆಸ್ಟ್ ನೋಡಿದ್ದೇವೆ. ಈಗ ಐದು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಇಬ್ಬರಿಗೂ ಈ ವೇಳೆ ರಿಯಲ್ ಚಾಲೆಂಜ್ ಸಿಗಲಿವೆ ಎಂದು ತಿಳಿಸಿದ್ದಾರೆ.

ಆಸ್ಟ್ರೇಲಿಯಾದ ಮಾಜಿ ನಾಯಕ ಭವಿಷ್ಯವಾಣಿಯಂತೆ ಐದು ಪಂದ್ಯಗಳ ಸರಣಿಯಲ್ಲಿ ಡ್ರಾ ಸಹ ಸೇರಿದೆ. ಇನ್ನು ಭಾರತ ಸಹ ಒಂದು ಪಂದ್ಯವನ್ನು ಗೆಲ್ಲಲಿದ್ದು, ಆಸೀಸ್ ಮೂರು ಪಂದ್ಯಗಳಲ್ಲಿ ಜಯ ಸಾಧಿಸಲಿದೆ. ಆಸ್ಟ್ರೇಲಿಯಾ ಸರಣಿಯನ್ನು 3-1 ಅಂತರದಲ್ಲಿ ಗೆಲ್ಲಬಹುದು ಎಂದು ರಿಕಿ ಪಾಂಟಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಕಾಂಗರೂ ನಾಡಿನಲ್ಲಿ ಭಾರತದ ಅಬ್ಬರ
ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಮ್ ಇಂಡಿಯಾ ಸೊಗಸಾದ ಪ್ರದರ್ಶನ ನೀಡಿದೆ. ಹಿಂದಿನ ಬಾರಿ ಪ್ರವಾಸದಲ್ಲಿ ವಿರಾಟ್ ಕೊಹ್ಲಿ ಒಂದು ಪಂದ್ಯ ಆಡಿದ್ದರು. ಆದಾಗ್ಯೂ ಟೀಮ್ ಇಂಡಿಯಾದ ಯುವ ಆಟಗಾರರು ಅಮೋಘ ಪ್ರದರ್ಶನ ನೀಡಿದ್ದರು. ಪರಿಣಾಮ ಸರಣಿಯನ್ನು ಗೆದ್ದು ಕೊಂಡಿತ್ತು. ಅಲ್ಲದೆ 2017ರಲ್ಲೂ ಭಾರತ ಆಸೀಸ್ ತಂಡವನ್ನು ತವರಿನಲ್ಲಿ ಬಗ್ಗು ಬಡಿದಿತ್ತು.
ಬಾರ್ಡರ್ ಗವಾಸ್ಕರ್ ಟ್ರೋಫಿಗೆ ಇನ್ನೂ ಸಮಯವಿದೆ. ಮುಂದಿನ ತಿಂಗಳು ಭಾರತ ಬಾಂಗ್ಲಾದೇಶ ಹಾಗೂ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿ ಆಡಬೇಕಿದೆ. ನಂತರ ಆಸ್ಟ್ರೇಲಿಯ ಪ್ರವಾಸ ಬೆಳೆಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications