Rohit Sharma: ಮ್ಯಾನೇಜ್ಮೆಂಟ್ ಚಿಂತೆ ಹೆಚ್ಚಿಸಿರುವ ರೋಹಿತ್ ಶರ್ಮಾ ಫಾರ್ಮ್
ಟೀಮ್ ಇಂಡಿಯಾದ ಸ್ಟಾರ್ ಆಟಗಾರ ರೋಹಿತ್ ಶರ್ಮಾ ಮೊದಲ ಟೆಸ್ಟ್‌ನಲ್ಲಿ ತಂಡದ ಭಾಗವಾಗಿರಲಿಲ್ಲ. ಅವರು ಕೌಂಟುಬಿಕ ಕಾರಣಗಳಿಂದ ಮೊದಲ ಟೆಸ್ಟ್‌ನಿಂದ ಹಿಂದೆ ಸರಿದಿದ್ದರು. ಇವರು ಆಡಿಲೇಡ್ ಟೆಸ್ಟ್‌ಗೆ ತಂಡವನ್ನು ಸೇರಿಕೊಂಡಿದ್ದಾರೆ. ಪ್ರಸಕ್ತ ವರ್ಷ ಇವರ ಬ್ಯಾಟ್ ಟೆಸ್ಟ್ ಫಾರ್ಮೆಟ್‌ನಲ್ಲಿ ಅಬ್ಬರಿಸದೇ ಇದ್ದರೂ ಸಹ ತಂಡದ ಮ್ಯೇನೆಜ್ಮೆಂಟ್ ಇವರ ಮೇಲೆ ವಿಶ್ವಾಸವನ್ನು ಇಟ್ಟಿದೆ. ರೋಹಿತ್ ಎರಡನೇ ಟೆಸ್ಟ್‌ನಲ್ಲಿ ತಂಡವನ್ನು ಮುನ್ನಡೆಸಿದರು. ಡೇ ಆಂಡ್ ನೈಟ್ ಟೆಸ್ಟ್‌ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಲು ಮುಂದಾದರು.
ಕೆಎಲ್ ರಾಹುಲ್ ಯಾವ ಕ್ರಮಾಂಕದಲ್ಲಿ ಆಡುತ್ತಾರೆ ಎಂಬುದು ಬಹಳ ನಿರೀಕ್ಷೆಯನ್ನು ಹುಟ್ಟಿಸಿತ್ತು. ಆದರೆ ರೋಹಿತ್ ಪಂದ್ಯಕ್ಕೂ ಮುನ್ನವೇ ಈ ಬಗ್ಗೆ ಸ್ಪಷ್ಟನೇ ನೀಡಿದ್ದರು. ಅಲ್ಲದೆ ತಂಡದ ಹಿತಕ್ಕಾಗಿ ನಾನು ಮಧ್ಯಮ ಕ್ರಮಾಂಕದಲ್ಲಿ ಆಡಲು ಸಿದ್ಧ ಎಂಬುವುದಾಗಿ ತಿಳಿಸಿದ್ದರು. ಪರಿಣಾಮ ಎರಡನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ರಾಹುಲ್ ಯಶಸ್ವಿ ಜೈಸ್ವಾಲ್ ಇನಿಂಗ್ಸ್ ಆರಂಭಿಸಿದರು. ರೋಹಿತ್ ಆರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದರು. ರೋಹಿತ್ ನಿಜಕ್ಕೂ ಈ ಕ್ರಮಾಂಕದಲ್ಲಿ ದೊಡ್ಡ ಇನಿಂಗ್ಸ್ ಆಡಬಹುದು ಎಂದು ಎಲ್ಲರೂ ಊಹಿಸಿದ್ದರು. ಆದರೆ ಎಲ್ಲರ ಲೆಕ್ಕಾಚಾರ ಉಲ್ಟಾ ಆಗಿದೆ.

ಕಳಪೆ ಫಾರ್ಮ್
ರೋಹಿತ್ ಶರ್ಮಾ ಆರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ 23 ಎಸೆತಗಳಲ್ಲಿ ಕೇವಲ ಮೂರು ರನ್ ಗಳಿಸಿ, ಪೆವಿಲಿಯನ್‌ಗೆ ಮರಳಿದರು. ಜೋಶ್ ಹ್ಯಾಜಲ್‌ವುಡ್ ಸ್ಥಾನದಲ್ಲಿ ತಂಡದ ಸೇರಿರುವ ಸ್ಕಾಟ್ ಬೋಲ್ಯಾಂಡ್ ರೋಹಿತ್ ಶರ್ಮಾಗೆ ಖೆಡ್ಡಾ ತೋಡಿದರು. ಈ ಮೂಲಕ ಟೆಸ್ಟ್ ನಲ್ಲಿ ರೋಹಿತ್ ಅವರ ಕೆಟ್ಟ ಫಾರ್ಮ್ ಮುಂದುವರಿದಿದೆ. ಕಳೆದ 11 ಇನ್ನಿಂಗ್ಸ್‌ಗಳಲ್ಲಿ ಅವರು ಕೇವಲ ಒಂದು ಅರ್ಧಶತಕ ಗಳಿಸಿದ್ದಾರೆ. ಈ ವೇಳೆ ಇವರ ಸರಾಸರಿ 12.36 ಆಗಿದೆ. ಈ ಅಂಕಿ ಅಂಶಗಳೇ ಇವರ ಫಾರ್ಮೆಗೆ ಹಿಡಿದ ಕೈ ಗನ್ನಡಿ.
ರೋಹಿತ್ ಶರ್ಮಾ ಒಬ್ಬ ಬೆಸ್ಟ್ ಪ್ಲೇಯರ್ ಪ್ಲಸ್ ಕ್ಯಾಪ್ಟನ್ ಅನ್ನೋದರಲ್ಲಿ ಎರಡು ಮಾತಿಲ್ಲ. ಇವರ ಮುಂದಾಳತ್ವದಲ್ಲಿ ಟೀಮ್ ಇಂಡಿಯಾ ಟಿ20 ವಿಶ್ವಕಪ್ ಗೆದ್ದಿದೆ. ಆದರೆ ಇವರು ಬ್ಯಾಟ್ ಮೌನಕ್ಕೆ ಶರಣಾಗಿರುವುದು ನಿಜಕ್ಕೂ ಎಲ್ಲರ ಚಿಂತೆಯನ್ನು ಹೆಚ್ಚು ಮಾಡಿದೆ. ರೋಹಿತ್ ಶರ್ಮಾ ಅವರಿಗೆ ಮುಂದೆ ಇನ್ನು ಒಂದು ಇನಿಂಗ್ಸ್ ಹಾಗೂ ಮೂರು ಟೆಸ್ಟ್‌ಗಳು ಬಾಕಿ ಇವೆ. ಈ ವೇಳೆ ಅವರು ತಾವು ಕಳೆದುಕೊಂಡಿದ್ದ ಫಾರ್ಮ್ ಮರಳಿತರಲು ಶ್ರಮಿಸಬೇಕಿದೆ.
ಪಂದ್ಯದ ಸಾರಾಂಶ
ಆಡಿಲೇಡ್‌ನಲ್ಲಿ ನಡೆಯುತ್ತಿರುವ ಡೇ ಆಂಡ್ ನೈಟ್ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬ್ಯಾಟ್ ಮಾಡಿ 180 ರನ್‌ಗಳಿಗೆ ಆಲೌಟ್ ಆಯಿತು. ಮೊದಲ ಇನಿಂಗ್ಸ್ ಆರಂಭಿಸಿರುವ ಆಸೀಸ್ 1 ವಿಕೆಟ್ ನಷ್ಟಕ್ಕೆ 86 ರನ್ ಕಲೆ ಹಾಕಿದೆ. ಭರವಸೆಯ ಬ್ಯಾಟರ್ ಮರ್ನಾಸ್ ಲಂಬುಶೇನ್ ಹಾಗೂ ನಾಥನ್ ಮೆಕ್‌ಸ್ವೀನಿ ಶನಿವಾರಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications