For Quick Alerts
ALLOW NOTIFICATIONS  
For Daily Alerts
 

ಭಾರತದಲ್ಲಿ ಮಿಂಚಲು ನಾನು ಸಿದ್ಧ ಎಂದ ಆಸಿಸ್ ಆಟಗಾರ ಟ್ರೆವಿಸ್ ಹೆಡ್

Border Gavaskar trophy: Travis Head said he is ready to prove himself on sub-continent pitches

ಆಸ್ಟ್ರೇಲಿಯಾ ತಂಡ ಇತ್ತೀಚಿನ ದಿನಗಳಲ್ಲಿ ಟೆಸ್ಟ್ ಮಾದರಿಯಲ್ಲಿ ಸತತವಾಗಿ ಅದ್ಭುತ ಪ್ರದರ್ಶನ ನೀಡಿಕೊಂಡು ಬರುತ್ತಿದ್ದು ಸದ್ಯ ಟೆಸ್ಟ್ ಮಾದರಿಯ ನಂಬರ್1 ತಂಡ ಎನಿಸಿಕೊಂಡಿದೆ. ಆಸ್ಟ್ರೇಲಿಯಾದ ಈ ಯಶಸ್ಸಿನಲ್ಲಿ ಟ್ರೆವಿಸ್ ಹೆಡ್ ಪಾತ್ರ ಕೂಡ ಗಮನಾರ್ಹವಾಗಿದೆ. ಟೆಸ್ಟ್ ಮಾದರಿಯಲ್ಲಿ 45ಕ್ಕೂ ಅಧಿಕ ಸರಾಸರಿಯಲ್ಲಿ ಬ್ಯಾಟಿಂಗ್ ನಡೆಸಿರುವುದು ಇದಕ್ಕೆ ಸಾಕ್ಷಿಯಾಗಿದೆ. ಹಾಗಿದ್ದರು ಕೂಡ ಉಪಖಂಡದ ಪಿಚ್‌ಗಳಲ್ಲಿ ಆಸ್ಟ್ರೇಲಿಯಾದ ಆಟಗಾರನ ಸಾಧನೆ ಅತ್ಯಂತ ಕಳಪೆಯಾಗಿದೆ.

2022ರಲ್ಲಿ ಶ್ರೀಲಂಕಾ ಹಾಗೂ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದ ವೇಳೆ ಟ್ರೆವೀಡ್ ಹೆಡ್ ಕಳಪೆ ಪ್ರದರ್ಶನ ನೀಡಿದ್ದರು. ಈ ಎರಡು ತಂಡಗಳ ವಿರುದ್ಧ ಒಟ್ಟು 7 ಇನ್ನಿಂಗ್ಸ್‌ಗಳಲ್ಲಿ ಆಡಿದ ಹೆಡ್ ಅವರ ಗರಿಷ್ಠ ಸ್ಕೋರ್ ಕೇವಲ 26 ಆಗಿತ್ತು. ಹೀಗಾಗಿ ಮುಂಬರುವ ಭಾರತ ಪ್ರವಾಸದಲ್ಲಿ ಉತ್ತಮ ಪ್ರದರ್ಶನ ನೀಡುವ ಒತ್ತಡದಲ್ಲಿರುವ ಹೆಡ್ ಆತ್ಮವಿಶ್ವಾಸದ ಮಾತುಗಳನ್ನಾಡಿದ್ದಾರೆ.

ಭಾರತದ ವಿರುದ್ಧ ಟೆ್ಟ್ ಸರಣಿಗೆ ಆಸ್ಟ್ರೇಲಿಯಾ ಪ್ರಕಟಿಸಿರುವ 18 ಆಟಗಾರರ ಪಟ್ಟಿಯಲ್ಲಿ ಪೀಟರ್ ಹ್ಯಾಂಡ್ಸ್‌ಕೋಂಬ್ ಹಾಗೂ ಮ್ಯಾಟ್ ರಾನ್‌ಶಾ ಕೂಡ ಸ್ಥಾನವನ್ನು ಪಟೆದುಕೊಂಡಿದ್ದಾರೆ. ಹೀಗಾಗಿ ಸಾಕಷ್ಟು ಒತ್ತಡ ಟ್ರೆವಿಡ್ ಹೆಡ್ ಮೇಲಿದೆ. ಇಲ್ಲಿ ಸಿಕ್ಕ ಅವಕಾಶವನ್ನು ಉತ್ತಮವಾಗಿ ಬಳಸಿಕೊಂಡರೆ ಮಾತ್ರವೇ ಟ್ರೆವಿಸ್ ಹೆಡ್‌ಗೆ ಮತ್ತಷ್ಟು ಅವಕಾಶ ದೊರೆಯಲಿದೆ ಎಂಬುದರಲ್ಲಿ ಅನುಮಾನವಿಲ್ಲ.

ಆಸ್ಟ್ರೇಲಿಯಾದ ಮಾಧ್ಯಮಕ್ಕೆ ನೀಡಿರುವ ಪ್ರತಿಕ್ರಿಯೆಯಲ್ಲಿ ಟ್ರೆವಿಸ್ ಹೆಡ್ "ನಾನು ತಾಂತ್ರಿಕವಾಗಿ ಹೆಚ್ಚಿನ ಬದಲಾವಣೆ ಮಾಡಿಕೊಳ್ಳಬೇಕಿದೆ ಎಂದು ನನಗೆ ಅನಿಸುತ್ತಿಲ್ಲ. ನಾನು ಅಂಗಳಕ್ಕಿಳಿದಾಗ ಹೆಚ್ಚು ಧನಾತ್ಮಕವಾಗಿರುವುದು ಅಗತ್ಯವಿದೆ ಎನಿಸುತ್ತಿದೆ. ನಾನು ಹೆಚ್ಚು ಧನಾತ್ಮಕವಾಗಿದ್ದಾಗ ಖಂಡಿತವಾಗಿಯೂ ಉತ್ತಮವಾಗಿ ಆಡಬಲ್ಲೆ" ಎಂದಿದ್ದಾರೆ ಟ್ರೆವಿಡ್ ಹೆಡ್.

ಭಾರತದಲ್ಲಿ ಈ ಸರಣಿ ನಡೆಯುತ್ತಿರುವ ಕಾರಣ ನಾಲ್ವರು ಸ್ಪಿನ್ನರ್‌ಗಳನ್ನು ಈ ಆಸ್ಟ್ರೇಲಿಯಾ ತಂಡ ತನ್ನ ಬಳಗದಲ್ಲಿ ಹೊಂದಿದೆ. ಟಾಡ್ ಮಾರ್ಫಿ, ಮಿಚೆಲ್ ಸ್ವೆಪ್ಸನ್, ಆಶ್ಟನ್ ಅಗರ್ ಹಾಗೂ ಅನುಭವಿ ನಥನ್ ಲಿಯೋನ್ ಈ ತಂಡದಲ್ಲಿದ್ದು ಭಾರತ ಪ್ರವಾಸವನ್ನು ಕೈಗೊಳ್ಳಲಿದ್ದಾರೆ. ಇನ್ನು ಮಾರ್ಕ್ ಹ್ಯಾರಿಸ್ ಈ ತಂಡದಿಂದ ಹೊರಬಿದ್ದಿದ್ದರೆ ಪೀಟರ್ ಹ್ಯಾಂಡ್ಸ್‌ಕಾಂಬ್ ನಾಲ್ಕು ವರ್ಷಗಳ ಬಳಿಕ ಟೆಸ್ಟ್ ತಂಡದ ಕರೆ ಸ್ವೀಕರಿಸಿದ್ದಾರೆ.

ಆಸಿಸ್ ತಂಡ ಹೀಗಿದೆ
ಭಾರತ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾದ ಆಸ್ಟ್ರೇಲಿಯಾ ತಂಡ ಹೀಗಿದೆ: ಪ್ಯಾಟ್ ಕಮ್ಮಿನ್ಸ್ (ನಾಯಕ), ಆಷ್ಟನ್ ಅಗರ್, ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಕ್ಯಾಮೆರಾನ್ ಗ್ರೀನ್, ಪೀಟರ್ ಹ್ಯಾಂಡ್ಸ್‌ಕಾಂಬ್, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಶೈನ್, ನಾಥನ್ ಲಿಯಾನ್, ಲ್ಯಾನ್ಸ್ ಮೋರಿಸ್, ಟಾಡ್ ಮರ್ಫಿ, ಮ್ಯಾಥ್ಯೂ ರೆನ್ಶಾ, ಸ್ಟೀವ್ ಸ್ಮಿತ್ (ಉಪನಾಯಕ), ಮಿಚೆಲ್ ಸ್ಟಾರ್ಕ್, ಮಿಚೆಲ್ ಸ್ವೆಪ್ಸನ್, ಡೇವಿಡ್ ವಾರ್ನರ್

Story first published: Thursday, January 12, 2023, 5:35 [IST]
Other articles published on Jan 12, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+