ನಾಯಕನಾಗಿ ಕೊಹ್ಲಿ, ರೋಹಿತ್ ನಡುವಿನ ವ್ಯತ್ಯಾಸ ತಿಳಿಸಿದ ಕಿವೀಸ್ ಕ್ರಿಕೆಟಿಗ

ಬೆಂಗಳೂರು, ಏಪ್ರಿಲ್ 17: ನ್ಯೂಜಿಲೆಂಡ್‌ನ ಆಲ್ ರೌಂಡರ್ ಕೋರಿ ಆ್ಯಂಡರ್ಸನ್ ಅವರಿಗೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರ ನಾಯಕತ್ವದ ಅಡಿಯಲ್ಲೂ ಆಡಿದ ಅನುಭವವಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದಾಗ ಕೊಹ್ಲಿ ನಾಯಕತ್ವದಲ್ಲಿ ಮತ್ತು ಮುಂಬೈ ಇಂಡಿಯನ್ಸ್‌ನಲ್ಲಿ ಆಡುತ್ತಿದ್ದಾಗ ರೋಹಿತ್ ಕ್ಯಾಪ್ಟನ್ಸಿಯಡಿಯಲ್ಲಿ ಆ್ಯಂಡರ್ಸನ್ ಆಡಿದ್ದಾರೆ.
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಕೋರಿ ಆ್ಯಂಡರ್ಸನ್ ಇಬ್ಬರೂ 'ಉತ್ತಮ ತಂತ್ರಜ್ಞರು' ಎಂದಿದ್ದಾರೆ.
ನಾಯಕತ್ವದ ವಿಚಾರದಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯ ಮಧ್ಯೆ ಇರುವ ವ್ಯತ್ಯಾಸದ ಬಗ್ಗೆಯೂ ಆ್ಯಂಡರ್ಸನ್ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ರೋಹಿತ್ ಕೊಂಚ ಹಿಂದಿದ್ದಾರೆ
'ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಇಬ್ಬರೂ ಉತ್ತಮ ನಾಯಕರು. ಆದರೆ ಬಹುಶಃ ರೋಹಿತ್ ಶರ್ಮಾ ಭಾವೋದ್ವೇಗದ ವಿಚಾರದಲ್ಲಿ ಕೊಂಚ ಹಿಂದಿದ್ದಾರೆ. ರೋಹಿತ್ ಕೂಡ ಭಾವೋದ್ರಿಕನಾಗಿರುತ್ತಾರೆ, ಪಂದ್ಯವನ್ನು ಗೆಲ್ಲಲು ಬಯಸುತ್ತಾರೆ. ಆದರೆ ನಾಯಕನಾಗಿ ತನ್ನ ಭಾವನೆಗಳನ್ನು ರೋಹಿತ್ ಕೊಂಚ ನಿಯಂತ್ರಿಸಿಕೊಳ್ಳುತ್ತಾರೆ,' ಎಂದು ಆ್ಯಂಡರ್ಸನ್ ಹೇಳಿದ್ದಾರೆ.

ವಿರಾಟ್ ಕೊಹ್ಲಿ ಸ್ವಲ್ಪ ಭಿನ್ನ
'ವಿರಾಟ್ ಕೊಹ್ಲಿ ಶರ್ಮಾನಂತಲ್ಲ. ಕೊಹ್ಲಿ ತನ್ನ ಹೃದಯವನ್ನು ಕೈಯಲ್ಲೇ ಹಿಡಿದಿರುತ್ತಾರೆ. ಅಂದರೆ ತನ್ನ ಭಾವನೆಗಳನ್ನು ಹೆಚ್ಚಿಗೆ ತೋರಿಕೊಳ್ಳುತ್ತಾರೆ. ಆದರೆ ಕೊಹ್ಲಿ-ರೋಹಿತ್ ಇಬ್ಬರೂ ತಂಡದ ಜವಾಬ್ದಾರಿ ಹೊರುತ್ತಾರೆ. ಅವರು ಸ್ವಾಭಾವಿಕ ಮೂಲದ ನಾಯಕರು,' ಎಂದು ಕೋರಿ ವಿವರಿಸಿದ್ದಾರೆ.

ಭಾರತ ಗೆಲ್ಲಲು ಪ್ರಮುಖ ಕಾರಣ
'ಕೊಹ್ಲಿ-ರೋಹಿತ್ ಇಬ್ಬರೂ ಒಳ್ಳೆಯ ತಂತ್ರಜ್ಞರು. ಪಂದ್ಯ ಹೇಗೆ ಗೆಲ್ಲಬೇಕು ಅನ್ನೋದನ್ನು ಅವರು ಅರ್ಥ ಮಾಡಿಕೊಳ್ಳುತ್ತಾರೆ. ಇದೇ ಕಾರಣಕ್ಕೆ ಭಾರತ ಬಹಳ ಯಶಸ್ವಿ ತಂಡವಾಗಿದೆ,' ಎಂದ ನ್ಯೂಜಿಲೆಂಡ್ ಆಟಗಾರ ರೋಹಿತ್ ಅವರನ್ನು ಬೆಸ್ಟ್ ಬ್ಯಾಟ್ಸ್‌ಮನ್ ಎಂದಿದ್ದಲ್ಲದೆ ತನ್ನ ಒಬ್ಬ ನೆಚ್ಚಿನ ಆಟಗಾರ ಎಂದೂ ಹೇಳಿದರು.

ರೋಹಿತ್ ಬೆಸ್ಟ್ ಬ್ಯಾಟ್ಸ್‌ಮನ್
'ಉತ್ತಮ ಲಯದಲ್ಲಿ ಆಡುವ ರೋಹಿತ್ ಶರ್ಮಾ ನನ್ನ ನೆಚ್ಚಿನ ಆಟಗಾರ. ಆತ ಕ್ರಿಕೆಟನ್ನು ವಿಶ್ವದಲ್ಲಿ ಅತೀ ಸುಲಭದ ಗೇಮ್‌ನಂತೆ ಬಿಂಬಿಸುತ್ತಾರೆ. ವಿಶ್ವದ ಟಾಪ್ ಬ್ಯಾಟ್ಸ್‌ಮನ್‌ಗಳು ಹೀಗೆ ಮಾಡುತ್ತಾರೆ,' ಎಂದ ಕೋರಿ, ಯುವಕರಿಗೆ ವೇದಿಕೆ ಒದಗಿಸುತ್ತಿರುವ ಐಪಿಎಲ್ ಅನ್ನು ಶ್ಲಾಘಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications