Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವದ ಗಮನ ಸೆಳೆದ ಬೌಲರ್ ಗೆ 10 ವರ್ಷ ನಿಷೇಧ!

ಢಾಕಾ, ಮೇ 02: ಅಂಪೈರ್ ವಿರುದ್ಧ ಇದ್ದ ದ್ವೇಷವನ್ನು ತೀರಿಸಿಕೊಳ್ಳಲು ಬಾಂಗ್ಲಾದೇಶ ಕ್ರಿಕೆಟರ್ ರೊಬ್ಬರು, ಕೇವಲ 4 ಎಸೆತಗಳಲ್ಲಿ 92ರನ್ ಹೊಡೆಸಿಕೊಂಡು ಬೇಕಂತಲೇ ಪಂದ್ಯವನ್ನು ಸೋಲುವಂತೆ ಮಾಡಿ, ವಿಶ್ವದ ಗಮನ ಸೆಳೆದಿದ್ದ ಬೌಲರ್ ಗೆ ನಿಷೇಧದ ಶಿಕ್ಷೆ ಸಿಕ್ಕಿದೆ.

ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಮೇ 2ರಂದು ಬೌಲರ್ ಸುಜಾನ್ ಮಹಮ್ಮದ್ ಗೆ 10 ವರ್ಷಗಳ ನಿಷೇಧದ ಶಿಕ್ಷೆಯನ್ನು ಪ್ರಕಟಿಸಲಾಗಿದೆ.

ಏಪ್ರಿಲ್ 11ರದು ನಡೆದ ಢಾಕಾದ ಸೆಕೆಂಡ್ ಡಿವಿಷನ್ ಲೀಗ್ ಪಂದ್ಯ50 ಓವರ್ ಗಳ ಪಂದ್ಯದಲ್ಲಿ ಇಂಥದ್ದೊಂದು ವಿಚಿತ್ರ ಘಟನೆ ನಡೆದಿತ್ತು. ಲಾಲ್ಮಾತಿಯಾ ಕ್ಲಬ್ ತಂಡ 14 ಓವರ್ ಗಳಲ್ಲಿ ಕೇವಲ 88ರನ್ ಗಳಿಗೆ ಆಲೌಟ್ ಆಗಿತ್ತು. ಎದುರಾಳಿ ತಂಡ ಆಕ್ಸಿಯಾಮ್ ಕ್ರಿಕೆಟರ್ಸ್ ವಿಕೆಟ್ ನಷ್ಟವಿಲ್ಲದೆ ಕೇವಲ 4 ಎಸೆತಗಳಲ್ಲಿ 92ರನ್ ಗಳಿಸಿ ವಿಜಯೋತ್ಸವ ಆಚರಿಸಿತು.

Bowler gets 10-year ban for conceding 92 runs in 1 over

ಲಾಲ್ಮಾತಿಯಾ ಕ್ಲಬಿನ ಓಪನಿಂಗ್ ಬೌಲರ್ ಸುಜೋನ್ ಮಹಮ್ಮದ್ ಅವರು ತಮ್ಮ ಓವರ್ ನಲ್ಲಿ 13 ವೈಡ್ ಗಳು ಹಾಗೂ ಮೂರು ನೋಬಾಲ್ ಎಸೆದರು. ಎಲ್ಲವೂ ಬೌಂಡೈ ಸೇರಿದ್ದರಿಂದ ಸ್ಕೋರ್ 80ಕ್ಕೇರಿತ್ತು. ಆಕ್ಸಿಯಾಮ್ ಓಪನರ್ ಮುಷ್ತಫಿಜುರ್ ರಹ್ಮಾನ್ ಅವರು 3 ಬೌಂಡರಿ ಸಹಿತ ತಂಡಕ್ಕೆ 10 ವಿಕೆಟ್ ಗಳ ಜಯ ತಂದಿತ್ತಿದ್ದರು.

ಬೌಲರ್ ಸುಜಾನ್ ಅಲ್ಲದೆ ಲಾಲ್ಮತಿಯಾ ಕ್ಲಬ್ಬಿನ ಕೋಚ್, ನಾಯಕ, ಮ್ಯಾನೇಜರ್ ಗೂ ನಿಷೇಧದ ಶಿಕ್ಷೆ ಸಿಕ್ಕಿದೆ. ಎಲ್ಲರಿಗೂ 5 ವರ್ಷ ನಿಷೇಧ. ಢಾಕಾ ಸೆಕೆಂಡ್ ಡಿವಿಷನ್ ಲೀಗ್ ನಲಿ ಆಡದಂತೆ ನಿರ್ಬಂಧ ಹೇರಲಾಗಿದೆ. ಕೆಟ್ಟ ಅಂಪೈರಿಂಗ್ ವಿರುದ್ಧ ತಿರುಗಿ ಬೀಳಲು ಈ ಮಾರ್ಗ ಬಳಸಲಾಯಿತು ಎಂದು ಲಾಲ್ಮತಿಯಾ ಕ್ಲಬ್ ಮ್ಯಾನೇಜರ್ ತಪ್ಪೊಪ್ಪಿಕೊಂಡಿದ್ದಾರೆ.

Story first published: Wednesday, January 3, 2018, 10:04 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+