ಅಂಡರ್ 19 ವಿಶ್ವಕಪ್: ಮೊದಲಾರ್ಧ ಭಾರತದ ಬೌಲರ್‌ಗಳ ಪಾರಮ್ಯ

Posted By:
Bowlers dominant in under19 world cup cricket finals

ಟೌರಂಗಾ(ನ್ಯೂಜಿಲೆಂಡ್), ಫೆಬ್ರವರಿ 3: ನ್ಯೂಜಿಲೆಂಡಿನ ಟೌರಂಗಾ ದಲ್ಲಿ ಇಂದು(ಫೆ.3) ನಡೆಯುತ್ತಿರುವ ಐಸಿಸಿ ಅಂಡರ್ 19 ಪುರುಷರ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಈ ವರೆಗೆ ಭಾರತ ಬೌಲರ್‌ಗಳು ಪಾರಮ್ಯ ಮೆರೆದಿದ್ದಾರೆ.

ಆಸ್ಟ್ರೇಲಿಯಾವನ್ನು ಕೇವಲ 216 ರನ್‌ಗಳಿಗೆ ಕಟ್ಟಿಹಾಕಿದ ಭಾರತದ ಬೌಲರ್‌ಗಳು ಭಾರತಕ್ಕೆ ಅರ್ಧ ಜಯ ತಂದು ಕೊಟ್ಟಿದ್ದಾರೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಮೊದಲಿಗೆ ಉತ್ತಮ ಆರಂಭವನ್ನು ಕಂಡಿತು ಆರಂಭಿಕ ಜೊತೆಯಾಟ 32 ಆಗುತ್ತಿದ್ದಂತೆ ವೇಗದ ಬೌಲರ್ ಇಶಾಂತ್ ಪೊರ್ಲೆ, ಮ್ಯಾಕ್ಸ್ ಬ್ರಿಯಾಟ್ನ್ ಅವರ ವಿಕೆಟ್ ಕಬಳಿಸಿದರು.

ಅಂಡರ್‌19 ವಿಶ್ವಕಪ್‌ ಫೈನಲ್: ಗೆಲ್ಲುವ ವಿಶ್ವಾಸದಲ್ಲಿ ಭಾರತ

ಮತ್ತೊಬ್ಬ ಆರಂಭಿಕ ಬ್ಯಾಟ್ಸ್‌ಮನ್‌ ಜಾಕ್ ಎಡ್‌ವರ್ಡ್‌ಸನ್ ಕೂಡಾ 28 ರನ್‌ಗಳಿಗೆ ಗಂಟು ಮೂಟೆ ಕಟ್ಟಿದರು ಅವರ ವಿಕೆಟ್ ಅನ್ನೂ ಇಶಾಂತ್ ಪೊರ್ಲೆ ಅವರೇ ಉರುಳಿಸಿದರು. ಇದಾದ ಎರಡು ಓವರ್‌ ಅಂತರದಲ್ಲಿಯೇ ನಾಯಕ ಜಾನ್‌ಸನ್ ಸಂಗಾ ಕೂಡ ಹೆಚ್ಚು ಹೊತ್ತು ನಿಲ್ಲದೆ ಕೆ.ನಾಗರಕೋಟಿ ಬೌಲಿಂಗ್ ನಲ್ಲಿ ಹಾರ್ವಿಕ್ ದೇಸಾಯಿಗೆ ಕ್ಯಾಚಿತ್ತು ಮರಳಿದರು. ಆಗ ತಂಡದ ಮೊತ್ತ 59 ಕ್ಕೆ 3 ವಿಕೆಟ್.

ಆ ನಂತರ ಜೊತೆಯಾದ ಜೊನಥಾನ್ ಮೆರ್ಲೊ ಮತ್ತು ಪರಂ ಉಪುಲ್ ಮುಳುಗುತ್ತಿದ್ದ ಆಸ್ಟ್ರೇಲಿಯಾ ಇನ್ನಿಂಗ್ಸ್ ಅನ್ನು ಸಂಭಾಳಿಸಿದರು. ಆದರೆ ಅಪಾಯಕಾರಿಯಾಗಿ ಬೆಳೆಯುತ್ತಿದ್ದ ಇವರಿಬ್ಬರ ಜೊತೆಯಾಟವನ್ನು ಮುರಿದಿದ್ದು ಅಂಕುಲ್ ರಾಯ್. ಪರಂ ಉಪುಲ್ 34 ರನ್ ಗಳಿಸಿ ರಾಯ್‌ಗೆ ವಿಕೆಟ್ ಒಪ್ಪಿಸಿದರು.

ಆ ನಂತರ ಬಂದ ನ್ಯಾಥನ್ ಮ್ಯಾಕ್ಸ್‌ವಿನಿ ಕೂಡ ಅಪಾಯಕಾರಿಯಾಗಿ ಬೆಳೆಯುವ ಸೂಚನೆ ನೀಡಿದರು. ಆದರೆ ಭಾರತದ ನಾಯಕ ಪೃಥ್ವಿ ಶಾ ಬೌಲಿಂಗ್ ನಲ್ಲಿ ಸತತ ಬದಲಾವಣೆ ಮಾಡುತ್ತಲೇ ಇದ್ದು, ಯಾವ ಜೊತೆಯಾಟವನ್ನೂ ಹೆಚ್ಚು ಬೆಳೆಯಲು ಬಿಡಲಿಲ್ಲ. ನ್ಯಾಥನ್ 23 ರನ್ ಗಳಿಸಿ ವೇಗಿ ಶಿವ ಸಿಂಗ್‌ಗೆ ಬಲಿಯಾದರು.

ಅರ್ಧ ಶತಕ ಗಳಿಸಿ ಆಡುತ್ತಿದ್ದ ಜೊನಾಥನ್ ಅವರನ್ನು ಜೊತೆಯಾದ ವಿಲ್ ಸೌತರ್‌ಲ್ಯಾಂಡ್ ಕೇವಲ 5 ರನ್ ಗಳಿಸಿ ಔಟಾದರು. ಆ ನಂತರ ಅಲ್ಲಿಯವರೆಗೆ ಉತ್ತಮವಾಗಿ ಆಡಿ 76 ರನ್ ಗಳಿಸಿದ್ದ ಜೊನಥಾನ್ ಅಂಕುಲ್ ರಾಯ್‌ಗೆ ವಿಕೆಟ್ ಒಪ್ಪಿಸಿದರು. ಅಲ್ಲಿಗೆ ಆಸ್ಟ್ರೇಲಿಯದ ಎಲ್ಲಾ ಪ್ರಮುಖ ಬ್ಯಾಟ್ಸ್‌ಮನ್‌ಗಳನ್ನೂ ಭಾರತದ ಬೌಲರ್‌ಗಳು ಪೆವಿಲಿಯನ್ ಹಾದಿ ತೋರಿಸಿದ್ದರು.

ಆ ನಂತರ ಬಂದ ಬೆಕ್ಸ್ಟರ್ ಕಾಲ್ಟ್ (13), ಇವಾನ್ (1), ಹ್ಯಾಡ್ಲಿ (1) ಮತ್ತು ಪೋಪ್ (0) ಭಾರತದ ಬಿಗಿ ಬೌಲಿಂಗ್‌ ಎದುರಿಸಿ ನಿಲ್ಲಲಾಗದೆ ಶರಣಾಗಿ ಪೆವಿಲಿಯನ್ ಸೇರಿದರು.

ಭಾರತದ ಪರ 6 ಬೌಲರ್‌ಗಳು ಬೌಲಿಂಗ್ ಮಾಡಿದರು ಅವರಲ್ಲಿ ಅಭಿಶೇಕ್ ಶರ್ಮಾ ಹೊರತು ಪಡಿಸಿ ಮಿಕ್ಕೆಲ್ಲರೂ ವಿಕೆಟ್ ಗಳಿಸಿದರು. ಇಶಾನ್ ಪೊರೆಲ್, ಶಿವ ಸಿಂಗ್, ಕಮಲೇಶ್ ನಾಗರಕೋಟಿ ಮತ್ತು ಅಂಕುಲ್‌ ರಾಯ್ ತಲಾ 2 ವಿಕೆಟ್ ಗಳಿಸಿದರು. ಶಿವಮ್ ಮಣಿ ಒಂದು ವಿಕೆಟ್ ಪಡೆದರೆ 6 ಓವರ್ ಬೌಲಿಂಗ್ ಮಾಡಿದ ಅಭಿಶೇಕ್ ಶರ್ಮಾಗೆ ಯಾವುದೇ ವಿಕೆಟ್ ಲಭಿಸಲಿಲ್ಲ. ಅತ್ಯುತ್ತಮ ಬೌಲಿಂಗ್ ನಡೆಸಿದ ಶಿವ ಸಿಂಗ್ 10 ಓವರ್ ಎಸೆದು 36 ರನ್ ನೀಡಿ ಎರಡು ಪ್ರಮುಖ ವಿಕೆಟ್ ಕಬಳಿಸಿದರು.

ಭಾರತದ ಬ್ಯಾಟ್ಸ್‌ಮನ್‌ಗಳು 217 ರನ್‌ಗಳ ಗುರಿಯನ್ನು ಬೆನ್ನು ಹತ್ತಿದ್ದು, 9 ಓವರ್ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 52 ರನ್ ಗಳಿಸಿದ್ದಾರೆ.

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Saturday, February 3, 2018, 11:35 [IST]
Other articles published on Feb 3, 2018
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ