For Quick Alerts
ALLOW NOTIFICATIONS  
For Daily Alerts
 

ಟೆಸ್ಟ್ ಕ್ರಿಕೆಟ್ ಆಡಲು ಬೌಲರ್‌ಗಳಿಗೆ ಕನಿಷ್ಠ 2 ತಿಂಗಳ ತಯಾರಿ ಬೇಕು: ಐಸಿಸಿ

Bowlers require minimum 2 months preparation to play Test says ICC

ಮುಂಬೈ, ಮೇ 23: ಕೊರೊನಾವೈರಸ್ ಲಾಕ್‌ಡೌನ್ ಬಳಿಕ ಮತ್ತೆ ಟೆಸ್ಟ್ ಕ್ರಿಕೆಟ್ ಆಡಲಾರಂಭಿಸಲು ಎದುರು ನೋಡುತ್ತಿರುವ ಬೌಲರ್‌ಗಳಿಗೆ ಏನಿಲ್ಲವೆಂದರೂ 2 ತಿಂಗಳ ತಯಾರಿ ಬೇಕಾಗುತ್ತದೆ. ಹಾಗಿದ್ದರೆ ಮಾತ್ರ ಅವರು ಗಾಯಕ್ಕೀಡಾಗುವುದರಿಂದ ಪಾರಾಗಬಲ್ಲರು ಎಂದು ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಹೇಳಿದೆ.

ಕ್ರಿಕೆಟ್ ಸೇರಿದಂತೆ ವಿಶ್ವದ ಬಹುತೇಕ ಕ್ರೀಡಾಸ್ಪರ್ಧೆಗಳು ಕೋವಿಡ್-19 ಸೋಂಕಿನ ಕಾರಣ ರದ್ದಾಗಿದ್ದವು. ಇದೀಗ ವಿಶ್ವದ ಅನೇಕ ರಾಷ್ಟ್ರಗಳು, ಮಾರ್ಗ ಸೂಚಿಗಳನ್ನು ನೀಡಿ ನಿಷೇಧಕ್ಕೆ ಸಂಬಂಧಿಸಿದ ನಿರ್ಬಂಧಗಳನ್ನು ಸಡಿಲಿಸುತ್ತಿವೆ. ಹೀಗಾಗಿ ಕ್ರೀಡಾ ಚಟುವಟಿಕೆಗಳು ಮೆಲ್ಲಗೆ ಪುನರಾಂಭಗೊಳ್ಳುತ್ತಿವೆ.

ಈ ವಾರ ಇಂಗ್ಲೆಂಡ್‌ನ ಆಟಗಾರರು ವೈಯಕ್ತಿಯ ಕೌಶಲದ ಅಭ್ಯಾಸಗಳನ್ನು ಆರಂಭಿಸಿದ್ದಾರೆ. ಭಾರತವೂ ಕೊಂಚ ನಿಧಾನವಾಗಿ ಆಟಗಾರರಿಗೆ ತರಬೇತಿಯನ್ನು ಶುರು ಮಾಡಲಿದೆ. ಜುಲೈನಲ್ಲಿ ವೆಸ್ಟ್ ಇಂಡೀಸ್ ಸರಣಿಗಾಗಿ ಟೀಮ್ ಇಂಡಿಯಾ ಮತ್ತೆ ಮೈದಾನಕ್ಕಿಳಿಯುವ ನಿರೀಕ್ಷೆಯಿದೆ.

ಪಾಕಿಸ್ತಾನ ಕ್ರಿಕೆಟ್ ತಂಡವು ಆಗಸ್ಟ್‌ನಲ್ಲಿ 3 ಪಂದ್ಯಗಳ ಟೆಸ್ಟ್‌ ಸರಣಿಗಾಗಿ ಇಂಗ್ಲೆಂಡ್‌ಗೆ ಪ್ರವಾಸ ಕೈಗೊಳ್ಳಲಿದೆ. ಅದಾಗಿ ಇತ್ತಂಡಗಳು ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಪಾಲ್ಗೊಳ್ಳಲಿವೆ. ಇಂಗ್ಲೆಂಡ್-ಪಾಕಿಸ್ತಾನ ಪಂದ್ಯಗಳು ಪ್ರೇಕ್ಷಕರಿಲ್ಲದ ಮೈದಾನದಲ್ಲಿ ನಡೆಯುವುದರಲ್ಲಿವೆ.

Story first published: Saturday, May 23, 2020, 15:57 [IST]
Other articles published on May 23, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+