For Quick Alerts
ALLOW NOTIFICATIONS  
For Daily Alerts
 

IPL 2025: ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಿಟ್ಟುಕೊಟ್ಟ ಬೌಲರ್ಸ್

ಐಪಿಎಲ್ 2025 ರಲ್ಲಿ ಇದುವರೆಗೆ 38 ಪಂದ್ಯಗಳು ಯಶಸ್ವಿಯಾಗಿ ಮುಗಿದಿವೆ. ಬ್ಯಾಟರ್ಸ್ ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಬೌಲರ್ಸ್ ಕೂಡ ತಮ್ಮ ಮಾರಕ ಬೌಲಿಂಗ್‌ನಿಂದ ವಿಕೆಟ್‌ಗಳನ್ನು ಉರುಳಿಸುತ್ತಿದ್ದಾರೆ. ಗುಜರಾತ್ ಟೈಟಾನ್ಸ್ ಪರ ಪ್ರಸಿದ್ಧ್ ಕೃಷ್ಣ ಗರಿಷ್ಠ 14 ವಿಕೆಟ್ ಕಬಳಿಸಿದ್ದಾರೆ. ಅವರಲ್ಲದೆ, ಕುಲದೀಪ್ ಯಾದವ್, ನೂರ್ ಅಹ್ಮದ್ ಮತ್ತು ಜೋಶ್ ಹೇಜಲ್‌ವುಡ್‌ ಅವರಂತಹ ಬೌಲರ್ಸ್ ಸಹ ಅದ್ಭುತವಾಗಿ ಬೌಲಿಂಗ್ ಮಾಡುತ್ತಿದ್ದಾರೆ. ಆದರೆ ಕೆಲವು ಬೌಲರ್ಸ್ ತುಂಬಾ ದುಬಾರಿಯಾಗಿದ್ದಾರೆ. ಈ ಬೌಲರ್ಸ್ ತಮ್ಮ ಲಯವನ್ನು ಕಳೆದುಕೊಂಡಿದ್ದು, ಹೆಚ್ಚು ಸಿಕ್ಸರ್‍‌ಗಳನ್ನು ಹೊಡೆಸಿಕೊಂಡಿದ್ದಾರೆ.

ಐಪಿಎಲ್ 2025 ರಲ್ಲಿ ಎದುರಾಳಿ ತಂಡದ ಬ್ಯಾಟರ್ಸ್ ನಿಂದ ಹೆಚ್ಚು ಸಿಕ್ಸರ್ ಹೊಡೆಸಿಕೊಂಡ ಕೆಲವು ಬೌಲರ್ಸ್ ಇದ್ದಾರೆ. ಅಂತಹ ಐದು ಬೌಲರ್ಸ್ ಬಗ್ಗೆ ಇಲ್ಲಿದೆ ಮಾಹಿತಿ.

Bowlers who conceded the most sixes in IPL 2025

ರಶೀದ್ ಖಾನ್

ಐಪಿಎಲ್ 2025 ರಲ್ಲಿ ಅತಿಹೆಚ್ಚು ಸಿಕ್ಸರ್ ಬಿಟ್ಟುಕೊಟ್ಟ ಬೌಲರ್ಸ್ ಪಟ್ಟಿಯಲ್ಲಿ ಅಫ್ಘಾನಿಸ್ತಾನದ ಸೂಪರ್‌ಸ್ಟಾರ್ ರಶೀದ್ ಖಾನ್ ಅಗ್ರಸ್ಥಾನದಲ್ಲಿದ್ದಾರೆ. ರಶೀದ್ ಎಸೆತದಲ್ಲಿ ಬೌಂಡರಿ ಬಾರಿಸುವುದು ಕಷ್ಟಕರವಾಗಿದ್ದ ಕಾಲವೊಂದಿತ್ತು. ಆದರೆ, ಐಪಿಎಲ್ 2025 ರಲ್ಲಿ ರಶೀದ್ ಖಾನ್ ಅವರಿಗೆ ಬ್ಯಾಟರ್ಸ್ ದಂಡಿಸುತ್ತಿದ್ದಾರೆ. ರಶೀದ್ ಏಳು ಪಂದ್ಯಗಳಲ್ಲಿ ಕೇವಲ 4 ವಿಕೆಟ್‌ಗಳನ್ನು ಮಾತ್ರ ಪಡೆದಿದ್ದಾರೆ. ಅವರ ಆರ್ಥಿಕ ದರ 9.73 ಆಗಿದೆ. ರಶೀದ್ ಎಸೆತದಲ್ಲಿ 17 ಸಿಕ್ಸರ್‌ಗಳು ದಾಖಲಾಗಿವೆ. ಐಪಿಎಲ್ 2025 ರಲ್ಲಿ ಇದುವರೆಗೆ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಿಟ್ಟುಕೊಟ್ಟ ಬೌಲರ್ ಎನಿಸಿಕೊಂಡಿದ್ದಾರೆ.

ಖಲೀಲ್ ಅಹ್ಮದ್

ಐಪಿಎಲ್ 2025 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಬೌಲಿಂಗ್ ಆರಂಭಿಸಿದ್ದ ಖಲೀಲ್ ಅಹ್ಮದ್ ಕೂಡ 17 ಸಿಕ್ಸರ್‌ಗಳನ್ನು ಬಿಟ್ಟುಕೊಟ್ಟಿದ್ದಾರೆ. ಆದಾಗ್ಯೂ, ಅವರು ರಶೀದ್ ಗಿಂತ ಒಂದು ಪಂದ್ಯ ಹೆಚ್ಚು ಆಡಿದ್ದಾರೆ. ಖಲೀಲ್ 8 ಪಂದ್ಯಗಳಲ್ಲಿ 9.20 ಎಕಾನಮಿ ದರದಲ್ಲಿ 11 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರು ನೂರ್ ಅಹ್ಮದ್ ನಂತರ ಚೆನ್ನೈ ಸೂಪರ್ ಕಿಂಗ್ಸ್ ಪರ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್. ಆದರೆ 17 ಸಿಕ್ಸರ್‌ಗಳನ್ನು ನೀಡಿದ್ದಾರೆ.

ಮೊಹಮ್ಮದ್ ಶಮಿ

ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಸೇರಿಕೊಂಡಿರುವ ಮೊಹಮ್ಮದ್ ಶಮಿ ಸಾಕಷ್ಟು ದುಬಾರಿ ಬೌಲರ್ ಎನಿಸಿಕೊಂಡಿದ್ದಾರೆ. ಅವರು 15 ಸಿಕ್ಸರ್‌ಗಳನ್ನು ಬಿಟ್ಟು ಕೊಟ್ಟಿದ್ದಾರೆ. ಶಮಿ ಅವರನ್ನು ಸನ್‌ರೈಸರ್ಸ್ 10 ಕೋಟಿ ರೂ.ಗೆ ಖರೀದಿಸಿದೆ. ಅವರು ಏಳು ಪಂದ್ಯಗಳಲ್ಲಿ 5 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರ ಆರ್ಥಿಕ ದರ 10.87 ಆಗಿದೆ.

ಪ್ಯಾಟ್ ಕಮ್ಮಿನ್ಸ್

ಸನ್‌ರೈಸರ್ಸ್ ಹೈದರಾಬಾದ್ ನಾಯಕ ಪ್ಯಾಟ್ ಕಮ್ಮಿನ್ಸ್ ಕೂಡ ಉತ್ತಮ ಬೌಲಿಂಗ್‌ ಪ್ರದರ್ಶಮ ನೀಡುತ್ತಿಲ್ಲ. ಶಮಿಯಂತೆಯೇ, ಅವರು ತುಂಬಾ ದುಬಾರಿ ಬೌಲರ್ ಆಗಿದ್ದಾರೆ. ಅವರು 10.21 ರ ಎಕಾನಮಿಯಲ್ಲಿ ರನ್ ನೀಡಿದ್ದಾರೆ. ಅವರು ಏಳು ಪಂದ್ಯಗಳಲ್ಲಿ 7 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅವರ ಎಸೆತಗಳಲ್ಲಿ 14 ಸಿಕ್ಸರ್‌ಗಳು ಸಿಡಿದಿವೆ.

ಶಾರ್ದೂಲ್ ಠಾಕೂರ್

ಲಕ್ನೋ ಸೂಪರ್ ಜೈಂಟ್ಸ್ ತಂಡದ ಪ್ರಮುಖ ವೇಗದ ಬೌಲರ್ ಶಾರ್ದೂಲ್ ಠಾಕೂರ್ ಇದುವರೆಗೆ 13 ಸಿಕ್ಸರ್‌ಗಳನ್ನು ಬಿಟ್ಟುಕೊಟ್ಟಿದ್ದಾರೆ. ಅವರು 8 ಪಂದ್ಯಗಳಲ್ಲಿ 12 ವಿಕೆಟ್‌ಗಳನ್ನು ಪಡೆದಿದ್ದಾರೆ. ಐಪಿಎಲ್ 2025 ರಲ್ಲಿ ಅವರು ಲಕ್ನೋ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ.

Story first published: Tuesday, April 22, 2025, 8:58 [IST]
Other articles published on Apr 22, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+