ರೈತನ ಮಗ ಬರಿಂದರ್, ಬಾಕ್ಸಿಂಗ್ ನಿಂದ ಕ್ರಿಕೆಟ್ ಗೆ ಎಂಟ್ರಿ
ಪರ್ತ್, ಜ.12: ಭಾರತದ ಯುವ ಎಡಗೈ ವೇಗಿ ಬರಿಂದರ್ ಸರಣ್ ಅವರಿಗೆ ಜನವರಿ 12 ಅವಿಸ್ಮರಣೀಯ ದಿನ. ಇಲ್ಲಿನ ವಾಕಾ ಮೈದಾನದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಕಾಲಿರಿಸಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಆಡುವ ಅವಕಾಶ ಪಡೆದ 23 ವರ್ಷದ ವೇಗಿ ಬರಿಂದರ್ ಸರಣ್ ಅವರನ್ನು ತಂಡದ ಇತರೆ ಸದಸ್ಯರು ಸಂತಸದಿಂದ ಬರಮಾಡಿಕೊಂಡಿದ್ದಾರೆ. ನಾಯಕ ಧೋನಿ ಅವರು ಹೊಸ ಸದಸ್ಯನಿಗೆ ಕ್ಯಾಪ್ ನೀಡಿ ಕೈಕುಲುಕಿ ತಂಡಕ್ಕೆ ಸೇರಿಸಿಕೊಂಡರು. [ಭಾರತ vs ಆಸ್ಟ್ರೇಲಿಯಾ ಮೊದಲ ಏಕದಿನ ಪಂದ್ಯ ವರದಿ]
ಸುಮಾರು 6 ವರ್ಷಗಳ ಕಠಿಣ ಪರಿಶ್ರಮದಿಂದ ಕೇವಲ ಪ್ರತಿಭೆ ಮೂಲಕ ಸರಣ್ ಅವರು ಇಂದು ತಂಡ ಸೇರಿದ್ದಾರೆ. ಬಾಕ್ಸರ್ ಆಗಲು ಹೊರಟ್ಟಿದ್ದ ರೈತನ ಮಗ ಸರಣ್ ಇಂದು ಪರ್ತ್ ನಲ್ಲಿ ವೇಗಿಯಾಗಿ ಕಣಕ್ಕಿಳಿದಿದ್ದಾರೆ. []
ಪೂರ್ತಿ ಹೆಸರು: ಬರಿಂದರ್ ಬಲ್ಬೀರ್ ಸಿಂಗ್ ಸರಣ್. [ಕೂಲಿಯಾಳೊಬ್ಬರ ಮಗ ನಾಥು ಸಿಂಗ್ ಈಗ ಕ್ರಿಕೆಟ್ ಸ್ಟಾರ್]
ವಯಸ್ಸು: 23
ಹುಟ್ಟಿದ ದಿನಾಂಕ: 10 ಡಿಸೆಂಬರ್ 1992
ಪ್ರಥಮ ದರ್ಜೆ ಕ್ರಿಕೆಟ್
ಪದಾರ್ಪಣೆ: ನವೆಂಬರ್ 2011, ಪಂಜಾಬ್ ಪರ ಒರಿಸ್ಸಾ ವಿರುದ್ಧ
ಪಂದ್ಯಗಳು: 11, ವಿಕೆಟ್ : 32
ಲಿಸ್ಟ್ ಎ (50 ಓವರ್ಸ್)
ಪದಾರ್ಪಣೆ: ಫೆಬ್ರವರಿ 2012, ದೆಹಲಿ ವಿರುದ್ಧ
ಪಂದ್ಯಗಳು: 8, ವಿಕೆಟ್ : 16
ಟಿ 20
ಪದಾರ್ಪಣೆ: ಅಕ್ಟೋಬರ್ 2011, ದೆಹಲಿ ವಿರುದ್ಧ
ಪಂದ್ಯಗಳು: 10, ವಿಕೆಟ್ : 8
ಐಪಿಎಲ್
ಪದಾರ್ಪಣೆ: ಮೇ 2015, ರಾಜಸ್ಥಾನ್ ರಾಯಲ್ಸ್ ಪರ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ
ಪಂದ್ಯಗಳು: 1, ವಿಕೆಟ್ : 0
(ಒನ್ ಇಂಡಿಯಾ ಸುದ್ದಿ)

ವಿಜೇಂದರ್ ಸಿಂಗ್ ರಂತೆ ಆಗಲು ಬಯಸಿದ್ದ ಸರಣ್
ನಾನು ವಿಜೇಂದರ್ ಸಿಂಗ್ ಹಾಗೂ ಇತರೆ ಹರ್ಯಾಣದ ಬಾಕ್ಸರ್ ಗಳ ರೀತಿ ಆಗಲು ಬಯಸಿದ್ದೆ. ಇದಕ್ಕಾಗಿ ತಯಾರಿ ನಡೆದ್ದಿದೆ. ಎರಡು ವರ್ಷ ಭಿವಾನಿಯಲ್ಲಿದ್ದೆ. ಆದರೆ, ಕ್ರಿಕೆಟ್ ನನಗೆ ಎಲ್ಲವನ್ನು ನೀಡಿದೆ. ಬೌಲಿಂಗ್ ಬಗ್ಗೆ ಅರಿವಿರಲಿಲ್ಲ. ಎಂಎಸ್ ಧೋನಿ, ವಿರಾಟ್ ಕೊಹ್ಲಿ ಬಗ್ಗೆ ಕೇಳಿ ತಿಳಿದಿದ್ದೆ. ಆದರೆ, ಇಂದು ಅವರ ಜೊತೆ ಆಡುವ ವೃತ್ತಿ ಬದುಕು ಆರಂಭಿಸುವ ಅವಕಾಶ ಸಿಕ್ಕಿದ್ದು ನಿಜಕ್ಕೂ ನನ್ನ ಅದೃಷ್ಟ ಎಂದು ದಿ ಇಂಡಿಯನ್ ಎಕ್ಸ್ ಪ್ರೆಸ್ ಗೆ ಸರಣ್ ಹೇಳಿದ್ದಾರೆ.

ಎಡಗೈ ವೇಗಿ ಆಗಿರುವುದು ಉತ್ತಮ ಅವಕಾಶ
ಎಡಗೈ ವೇಗಿಯಾಗಿರುವುದು ಅನುಕೂಲಕರ ಹಾಗೂ ಭಾರತ ತಂಡದಲ್ಲಿ ವೇಗಿಯಾಗಿ ಸೇರಿಕೊಳ್ಳಲು ನೆರವಾದ ಎಲ್ಲರಿಗೂ ನನ್ನ ಧನ್ಯವಾದ ಸಲ್ಲಿಸುತ್ತೇನೆ. ವೈವಿಧ್ಯಮಯ ಬೌಲಿಂಗ್ ಬಗ್ಗೆ ಗಮನ ಹರಿಸುತ್ತೇನೆ ಡಿಸೆಂಬರ್ 20, 2015ರಂದು ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆಯಾದ ಬಳಿಕ ಪ್ರತಿಕ್ರಿಯಿಸಿದ ಸರಣ್ ಅವರು ಜನವರಿ 12, 2016ರಂದು ಪರ್ತ್ ನಲ್ಲಿ ಏಕದಿನ ಕ್ರಿಕೆಟ್ ಗೆ ಎಂಟ್ರಿ ಕೊಟ್ಟಿದ್ದಾರೆ.

ರಾಹುಲ್ ದ್ರಾವಿಡ್ ಕಿವಿಮಾತು ಸ್ಪೂರ್ತಿದಾಯಕ
ರಾಹುಲ್ ದ್ರಾವಿಡ್ ಅವರು ನಾಯಕರಾಗಿ ನಂತರ ಕೋಚ್ ಆಗಿದ್ದ ಐಪಿಎಲ್ ತಂಡ ರಾಜಸ್ಥಾನ್ ರಾಯಲ್ಸ್ ಪರ ಆಡುವ ಬರಿಂದರ್ ಸರಣ್ ಬಗ್ಗೆ ಎದುರಾಳಿ ನಾಯಕ ಸ್ಟೀವ್ ಸ್ಮಿತ್ ಕೂಡಾ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ರಾಯಲ್ಸ್ ಪರ ಸ್ಮಿತ್ ಕೂಡಾ ಆಡುತ್ತಾರೆ ಎಂಬುದನ್ನು ನೆನಪಿಸಬೇಕಾಗಿಲ್ಲ. ಜೊತೆಗೆ ತಂಡದಲ್ಲಿದ್ದ ಟಿಮ್ ಸೌಥಿ, ಜೇಮ್ಸ್ ಫಾಲ್ಕ್ನರ್ ರಿಂದ ಸಾಕಷ್ಟು ಕಲಿತೆ. ದ್ರಾವಿಡ್ ಸರ್ ಅವರು ನನ್ನಲ್ಲಿ ಸದಾ ಆತ್ಮವಿಶ್ವಾಸ ಹೆಚ್ಚಿಸಿದರು ಎಂದಿದ್ದಾರೆ.
ಜ್ಯೂನಿಯರ್ ಜಹೀರ್ ಖಾನ್ ಎಂದ ಯುವಿ
ಬರಿಂದರ್ ಸರಣ್ ನೋಡಿದರೆ ಜ್ಯೂನಿಯರ್ ಜಹೀರ್ ಖಾನ್ ರಂತೆ ಕಾಣುತ್ತಾರೆ. ಅವರಿಗೆ ಶುಭವಾಗಲಿ ಎಂದ ಕ್ರಿಕೆಟರ್ ಯುವರಾಜ್ ಸಿಂಗ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications