Boxing Day Test: ಮೊದಲ ದಿನ ಯುವ ಬ್ಯಾಟರ್ ಅಬ್ಬರ: ಬೃಹತ್ ಮೊತ್ತದತ್ತ ಆಸೀಸ್ ದಾಪುಗಾಲು
ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ಮೆಲ್ಬೋರ್ನ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಮಾಡಿತು. ಅಲ್ಲದೆ ದಿನದ ಗೌರವವನ್ನು ತನ್ನದಾಗಿಸಿಒಂಡಿದೆ. ಈಗಾಗಲೇ ದಿನದಾಟದಂತ್ಯಕ್ಕೆ 6 ವಿಕೆಟ್‌ಗೆ 311 ರನ್ ಸಿಡಿಸಿದೆ. ಈ ಮೂಲಕ ಆಈಸ್ ದಿನದ ಎರಡೂ ಸೆಷನ್‌ಗಳನ್ನು ತನ್ನ ಹೆಸರಿಗೆ ಮಾಡಿಕೊಂಡರೆ, ಟೀಮ್ ಇಂಡಿಯಾ ಕೊನೆಯ ಸೆಷನ್ ತನ್ನ ಪಾಲಾಗಿಸಿಕೊಂಡಿದೆ.
ಮೊದಲು ಬ್ಯಾಟ್ ಮಾಡುವ ನಾಯಕ ಪ್ಯಾಟ್ ಕಮಿನ್ಸ್ ನಿರ್ಧಾರವನ್ನು ಆಸ್ಟ್ರೇಲಿಯಾ ಬ್ಯಾಟರ್‌ಗಳು ಸಮರ್ಥಿಸಿಕೊಂಡರು. ಆಸೀಸ್ ತಂಡದ ಯುವ ಬ್ಯಾಟರ್ ಸ್ಯಾಮ್ ಕಾನ್‌ಸ್ಟಾನ್ಸ್‌ಗೆ ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡರು. ಇವರು ಭರವಸೆಯ ಆಟಗಾರ ಉಸ್ಮಾನ್ ಖವಾಜ್ ಜೊತೆಗೂಡಿ ಮೊದಲ ವಿಕೆಟ್‌ಗೆ 89 ರನ್ ಸೇರಿಸಿದರು. ಈ ವೇಳೆ ರವೀಂದ್ರ ಜಡೇಜಾ ತೋಡಿದ ಖೆಡ್ಡಾಗೆ ಸ್ಯಾಮ್ ಕಾನ್‌ಸ್ಟಾನ್ಸ್ ಬಲಿಯಾದರು. ಸ್ಯಾಮ್ 6 ಬೌಂಡರಿ, 2 ಸಿಕ್ಸರ್ ಸಹಾಯದಿಂದ 60 ರನ್ ಸಿಡಿಸಿ ಮಿಂಚಿದರು.

ಟಾಪ್ ಆರ್ಡರ್ ಬ್ಯಾಟರ್ ಅಬ್ಬರ
ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ಟಾಪ್ ಆರ್ಡರ್ ಬ್ಯಾಟರ್‌ಗಳು ಅಮೋಘ ಬ್ಯಾಟಿಂಗ್ ನಡೆಸಿದರು. ಸರಣಿಯಲ್ಲಿ ಮಂಕಾಗಿ ಕಂಡು ಬಂದಿದ್ದ ಉಸ್ಮಾನ್ ಖವಾಜ ನಾಲ್ಕನೇ ಟೆಸ್ಟ್‌ನಲ್ಲಿ ಅರ್ಧಶತಕ ಬಾರಿಸಿದರು. ಇವರು ಪಕ್ಕಾ ಟೆಸ್ಟ್ ರೀತಿಯಲ್ಲಿ ಬ್ಯಾಟ್ ಮಾಡಿ 121 ಎಸೆತಗಳಲ್ಲಿ 6 ಬೌಂಡರಿ ಸೇರಿದಂತೆ 57 ರನ್ ಸಿಡಿಸಿ ಔಟ್ ಆದರು. ಎರಡನೇ ವಿಕೆಟ್‌ಗೆ ಖವಾಜ ಹಾಗೂ ಲಂಬುಶೇನ್ ಜೊತೆಗೂಡಿ 150 ಎಸೆತಗಳಲ್ಲಿ 65 ರನ್ ಸಿಡಿಸಿದರು.
ಮೂರನೇ ವಿಕೆಟ್‌ಗೆ ಮಾರ್ನಸ್ ಲಂಬುಶೇನ್ ಹಾಗೂ ಸ್ಟೀವನ್ ಸ್ಮಿತ್ ಜೋಡಿ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿಯನ್ನು ಬೇರ್ಪಡಿಸಲು ಟೀಮ್ ಇಂಡಿಯಾ ಬೌಲರ್‌ಗಳು ಹೈರಾಣಾದರು. ಈ ಜೋಡಿ 127 ಎಸೆತಗಳಲ್ಲಿ 83 ರನ್‌ಗಳ ಅಮೋಘ ಜೊತೆಯಾಟ ನೀಡಿತು. ಮಾರ್ನಸ್ ಲಂಬುಶೇನ್ 72 ರನ್ ಬಾರಿಸಿ ಮುನ್ನಗುತ್ತಿದ್ದಾಗ ವಾಷಿಂಗ್ಟನ್ ಸುಂದರ್ ತೋಡಿದ ಖೆಡ್ಡಾಗೆ ಬಲಿಯಾದರು.

ಟ್ರಾವಿಸ್ ಹೆಡ್ ಮಂಕು
ಸರಣಿಯಲ್ಲಿ ಟೀಮ್ ಇಂಡಿಯಾದ ಬೌಲರ್‌ಗಳನ್ನು ಮನಬಂದಂತೆ ಕಾಡಿದ್ದ ಟ್ರಾವಿಸ್ ಹೆಡ್ ನಾಲ್ಕನೇ ಟೆಸ್ಟ್‌ನಲ್ಲಿ ಮಂಕಾದರು. ಇವರು ಎದುರಿಸಿದ ಏಳು ಎಸೆತಗಳಲ್ಲಿ ಖಾತೆ ತೆರೆಯದೆ ಪೆವಲಿಯನ್ ಸೇರಿದರು.
ಸ್ಟೀವನ್ ಸ್ಮಿತ್ ಅಜೇಯ 68
ಆಸ್ಟ್ರೇಲಿಯಾದ ಭರವಸೆಯ ಆಟಗಾರ ಸ್ಟೀವನ್ ಸ್ಮಿತ್ 111 ಎಸೆತಗಳಲ್ಲಿ ಅಜೇಯ 68 ರನ್ ಸಿಡಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಅಲೆಕ್ಸ್ ಕ್ಯಾರಿ 31 ರನ್‌ಗಳಿಗೆ ಔಟ್ ಆದರು. ಇನ್ನು ನಾಯಕ ಪ್ಯಾಟ್ ಕಮಿನ್ಸ್ ಅಜೇಯ 8 ರನ್ ಸಿಡಿಸಿ ಶುಕ್ರವಾರಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಬುಮ್ರಾಗೆ 3 ವಿಕೆಟ್
ಟೀಮ್ ಇಂಡಿಯಾದ ಭರವಸೆಯ ಬೌಲರ್ ಜಸ್ಪ್ರಿತ್ ಬುಮ್ರಾ ಮೊದಲ ಸ್ಪೆಲ್‌ನಲ್ಲಿ ದುಬಾರಿ ಆದರೂ, ನಂತರ ಶಿಸ್ತು ಬದ್ಧ ದಾಳಿ ನಡೆಸಿದರು. ಇವರು 21 ಓವರ್ ಬೌಲರ್ ಮಾಡಿ 75 ರನ್ ನೀಡಿ ಮೂರು ವಿಕೆಟ್ ಪಡೆದರು. ಉಳಿದಂತೆ ಆಕಾಶ್ ದೀಪ್, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್ ತಲಾ ಒಂದು ವಿಕೆಟ್ ಕಬಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications