IND vs AUS: ವೀರೇಂದ್ರ ಸೆಹ್ವಾಗ್‌ಗೆ ಸ್ಯಾಮ್ ಕಾನ್‌ಸ್ಟಾಸ್ ಬ್ಯಾಟಿಂಗ್ ಹೋಲಿಕೆ; ರವಿಶಾಸ್ತ್ರಿ
ಮೆಲ್ಬೋರ್ನ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ದಿನ ರೋಚಕತೆಯಿಂದ ಕೂಡಿತ್ತು. ಈ ಪಂದ್ಯದಲ್ಲಿ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡುತ್ತಿರುವ ಆಸ್ಟ್ರೇಲಿಯಾ 19 ವರ್ಷದ ಯುವ ಆರಂಭಿಕ ಬ್ಯಾಟರ್ ಸ್ಯಾಮ್ ಕಾನ್‌ಸ್ಟಾಸ್ 60 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಈ ಮೂಲಕ ಕ್ರಿಕೆಟ್ ಲೋಕದಲ್ಲಿ ಸಾಕಷ್ಟು ಮೆಚ್ಚುಗೆ ಗಳಿಸಿದ್ದಾರೆ. ಕಾನ್‌ಸ್ಟಾಸ್ ಇಷ್ಟೊಂದು ಮೆಚ್ಚುಗೆ ಪಡೆಯಲು ಕಾರಣವೆಂದರೆ ವಿಶ್ವದ ನಂಬರ್ 1 ಟೆಸ್ಟ್ ಬೌಲರ್ ಜಸ್ಪ್ರೀತ್ ಬುಮ್ರಾ ಅವರನ್ನು ಎದುರಿಸಿದ ರೀತಿ ಎಲ್ಲರ ಗಮನ ಸೆಳೆಯಿತು. ಇದೀಗ ಭಾರತ ತಂಡದ ಮಾಜಿ ಹೆಡ್‌ಕೋಚ್ ರವಿಶಾಸ್ತ್ರಿ ಅವರು ಸ್ಯಾಮ್ ಕಾನ್‌ಸ್ಟಾಸ್ ಹೊಗಳಿದ್ದಾರೆ.
ಜಸ್ಪ್ರೀತ್ ಬುಮ್ರಾ ಬೌಲಿಂಗ್‌ನಲ್ಲಿ ಸ್ಯಾಮ್ ಕಾನ್‌ಸ್ಟಾಸ್ ಭಯವಿಲ್ಲದೆ ಬ್ಯಾಟಿಂಗ್ ಮಾಡಿದರು. ಮೆಲ್ಬೋರ್ನ್‌ನಲ್ಲಿ ತುಂಬಿ ಕ್ರಿಕೆಟ್ ಅಭಿಮಾನಿಗಳು ಸ್ಯಾಮ್ ಕಾನ್‌ಸ್ಟಾಸ್ ಬ್ಯಾಟಿಂಗ್ ಪ್ರದರ್ಶನ ನೋಡಿ ಕಣ್ತುಂಬಿಕೊಂಡರು. ಮತ್ತೊಂದೆಡೆ ರವಿಶಾಸ್ತ್ರಿ ಅವರ ಗಮನವನ್ನು ಸೆಳೆಯುವಲ್ಲಿ ಕಾನ್‌ಸ್ಟಾಸ್ ಯಶಸ್ವಿಯಾಗಿದ್ದಾರೆ. ಹೀಗಾಗಿ ಕಾನ್‌ಸ್ಟಾಸ್ ಅವರನ್ನು ಟೀಮ್ ಇಂಡಿಯಾದ ಮಾಜಿ ದಿಗ್ಗಜ ಬ್ಯಾಟರ್ ವೀರೇಂದ್ರ ಸೆಹ್ವಾಗ್ ಅವರಿಗೆ ರವಿಶಾಸ್ತ್ರಿ ಹೋಲಿಕೆ ಮಾಡಿದ್ದಾರೆ.

ಹೊಗಳಿದ ಶಾಸ್ತ್ರಿ
ಸಂದರ್ಶನವೊಂದರಲ್ಲಿ ಮಾತನಾಡಿರುವ ರವಿಶಾಸ್ತ್ರಿ, ರೆಡ್ ಬಾಲ್ ಕ್ರಿಕೆಟ್ ಬಿಟ್ಟು, ಆಟದ ಯಾವುದೇ ಸ್ವರೂಪದಲ್ಲಿ ಯಾರೂ ಜಸ್ಪ್ರೀತ್ ಬುಮ್ರಾ ವಿರುದ್ಧ ಈ ರೀತಿ ಬ್ಯಾಟಿಂಗ್ ಮಾಡಿದ್ದಾರೆ ಎಂದು ನಾನು ಭಾವಿಸುವುದಿಲ್ಲ. ಕಾನ್‌ಸ್ಟಾಸ್ ಆತ್ಮವಿಶ್ವಾಸದಿಂದ ಮೈದಾನಕ್ಕೆ ಬಂದು ಕೆಲವು ಉತ್ತಮ ಶಾಟ್‌ಗಳನ್ನು ಹೊಡೆಯಲು ಪ್ರಯತ್ನಿಸುತ್ತಿರುವುದು ಬೇರೆಯೇ ಆಗಿತ್ತು. ಇದನ್ನು ನೋಡಿದಾಗ ಭಾರತ ತಂಡವು ಆಲೋಚನೆಗಳನ್ನು ಕಳೆದುಕೊಂಡಂತೆ ಭಾಸವಾಯಿತು ಎಂದು ಹೇಳಿದ್ದಾರೆ.
ಭಾರತ ತಂಡದ ಮಾಜಿ ಓಪನರ್ ಸೆಹ್ವಾಗ್ ಅವರಂತೆ ಕಾನ್‌ಸ್ಟಾಸ್ ಸಂಪೂರ್ಣ ಮನರಂಜನೆ ಎಂದು ಶಾಸ್ತ್ರಿ ಹೇಳಿದರು. ಆಸ್ಟ್ರೇಲಿಯಾದಲ್ಲಿ ಈ ಯುವ ಆಟಗಾರನಿಗೆ ಯಶಸ್ವಿ ವೃತ್ತಿಜೀವನದ ಭವಿಷ್ಯ ನುಡಿದ್ದಾರೆ. ಕಾನ್‌ಸ್ಟಾಸ್ ಮೊದಲು ಮೈದಾನಕ್ಕೆ ಬಂದಾಗ ವೀರೇಂದ್ರ ಸೆಹ್ವಾಗ್ ಅವರನ್ನು ನೆನಪಿಸುತ್ತಾರೆ. ವೀರೇಂದ್ರ ಸೆಹ್ವಾಗ್ ಆಡಿದಾಗ ಪ್ರೇಕ್ಷಕರನ್ನು ರಂಜಿಸುತ್ತಿದ್ದರು. ಅವರು ಮನರಂಜನೆಗಾಗಿ ಜನಿಸಿದರು. ಇದೀಗ ಕಾನ್‌ಸ್ಟಾಸ್ ಅವರು ಆಸ್ಟ್ರೇಲಿಯಾ ಪರ ಸ್ವಲ್ಪ ಸಮಯ ಆಡಿದರೆ, ವೀರೇಂದ್ರ ಸೆಹ್ವಾಗ್ ರೀತಿಯೇ ಮಾಡುತ್ತಾರೆ ಎಂದು ರವಿಶಾಸ್ತ್ರಿ ಹೊಗಳಿದ್ದಾರೆ.
ಆಸ್ಟ್ರೇಲಿಯಾದ ಇನಿಂಗ್ಸ್‌ನ 11ನೇ ಓವರ್ ಬೌಲಿಂಗ್ ಮಾಡಲು ಜಸ್ಪ್ರೀತ್ ಬುಮ್ರಾ ಬಂದರು. ಈ ವೇಳೆ ಸ್ಯಾಮ್ ಕಾನ್‌ಸ್ಟಾಸ್ ಅವರು ಜಸ್ಪ್ರೀತ್ ಬುಮ್ರಾ ಓವರ್‌ನಲ್ಲಿ ಒಂದು ಸಿಕ್ಸರ್ ಮತ್ತು ಎರಡು ಬೌಂಡರಿಗಳ ನೆರವಿನಿಂದ 18 ರನ್ ಗಳಿಸಿದರು. ಇದಕ್ಕೂ ಮೊದಲು, ಕಾನ್‌ಸ್ಟಾಸ್ ಇನಿಂಗ್ಸ್‌ನ 7ನೇ ಓವರ್‌ನಲ್ಲಿ ಜಸ್ಪ್ರೀತ್ ಬುಮ್ರಾ ಅವರಿಗೆ ಒಂದು ಸಿಕ್ಸರ್ ಮತ್ತು ಎರಡು ಬೌಂಡರಿಗಳೊಂದಿಗೆ 14 ರನ್ ಬಾರಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications