BPL 2025-26: ಜನವರಿ 1 ರಿಂದ ಪುನರಾರಂಭ
ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ಜನವರಿ 1, 2026 ರಂದು ನಡೆಯಲಿದೆ ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಬುಧವಾರ (ಡಿ.31) ರಂದು ಖಚಿತ ಪಡಿಸಿದೆ. ಬೆಗಂ ಖಲೀದಾ ಜಿಯಾ ಅವರ ನಿಧನದ ಹಿನ್ನೆಲೆಯಲ್ಲಿ ರಾಷ್ಟ್ರಾದ್ಯಂತ ಶೋಕಾಚರಣೆ ನಡೆಯುತ್ತಿದ್ದರೂ ಸಹ, ಬಿಪಿಎಲ್ (BPL) 2025-26 ಆವೃತ್ತಿಯು ಯೋಜನೆಯಂತೆ ನಡೆಯಲಿದೆ ಎಂದು ತಿಳಿದು ಬಂದಿದೆ.
ಬಾಂಗ್ಲಾದೇಶ ಮೊದಲ ಮಹಿಳಾ ಪ್ರಧಾನಿ ಬೆಗಂ ಖಲೀದಾ (80) ಮಂಗಳವಾರ (ಡಿ.30) ನಿಧನರಾಗಿದ್ದಾರೆ. ದೇಶ ಶೋಕಸಾಗರದಲ್ಲಿ ಮುಳುಗಿದೆ. ಇನ್ನು ಬಾಂಗ್ಲಾದೇಶ ನ್ಯಾಷನಲ್ ಪಾರ್ಟಿ ಸಹ ಏಳು ದಿನ ಶೋಕಾಚರಣೆ ಘೋಷಿಸಿದೆ. ಇನ್ನು ಬೆಗಂ ಖಲೀದಾ ಪ್ರಧಾನಿ ಆಗಿದ್ದಾಗ ಕ್ರಿಕೆಟ್ ಕ್ರೀಡೆಗೆ ನೀಡಿದ ಕೊಡುಗೆಯನ್ನು ಬಿಸಿಬಿ ಸ್ಮರಿಸಿದೆ.

ಕ್ರಿಕೆಟ್ ಮೂಲ ಸೌಕರ್ಯ ಸುಧಾರಣೆ, ಕ್ರೀಡೆಯ ಬೆಳವಣಿಗೆಗೆ ಬೆಗಂ ಖಲೀದಾ ನೀಡಿದ ಕೊಡುಗೆ ಅಪಾರ. ಅವರ ದೂರ ದೃಷ್ಟಿ ಹಾಗೂ ಪ್ರೋತ್ಸಾಹ ಇಂದು ಕ್ರೀಡೆ ದೇಶದಲ್ಲಿ ಈ ಮಟ್ಟಕ್ಕೆ ತಲುಪಲು ಸಹಾಯವಾಗಿ ಎಂದು ಬಿಸಿಬಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಇನ್ನು ಮಾಜಿ ಪ್ರಧಾನಿ ನಿಧನದ ಶೋಕಾಚರಣೆಯ ಗೌರವಾರ್ಥ, ಬುಧವಾರದಿಂದ ಆರಂಭವಾಗಬೇಕಿದ್ದ ಬಿಪಿಎಲ್ ಪಂದ್ಯಗಳನ್ನು ರದ್ದುಗೊಳಿಸಲಾಗಿದೆ. ಇನ್ನು ಪರಿಷ್ಕೃತ ಪಂದ್ಯಗಳ ವೇಳಾಪಟ್ಟಿಯ ಬಗ್ಗೆ ಶೀಘ್ರದಲ್ಲಿ ಮಾಹಿತಿ ನೀಡಲಾಗುವುದು ಎಂದು ಬಿಸಿಬಿ ತಿಳಿಸಿದೆ.
ಜನವರಿ 1 ರಿಂದ ಲೀಗ್
ಜನವರಿ 1 ರಂದು ಸಿಲ್ಹೆಟ್ ಟೈಟಾನ್ಸ್, ಢಾಕಾ ಕ್ಯಾಪಿಟಲ್ಸ್ ವಿರುದ್ಧ ಆಡಿದರೆ, ರಂಗ್ಪುರ್ ರೈಡರ್ಸ್, ರಾಜ್‌ಶಾಹಿ ವಾರಿಯರ್ಸ್ ವಿರುದ್ಧ ಕಾದಾಟವನ್ನು ನಡೆಸಲಿದೆ. ಮಂಗಳವಾರ ನಡೆಯಬೇಕಿದ್ದ ಪಂದ್ಯಗಳನ್ನು ರದ್ದು ಮಾಡಲಾಗಿದೆ. ಅಲ್ಲದೆ ಈ ಪಂದ್ಯಗಳನ್ನು ಜನವರಿ 4 ರಂದು ನಡೆಸಲು ತೀರ್ಮಾನಿಸಲಾಗಿದೆ. ಇನ್ನು ಟೂರ್ನಿಯ ವೇಳಾಪಟ್ಟಿಯಲ್ಲಿ ಕೊಂಚ ಬದಲಾವಣೆಗಳನ್ನು ಕಾಣಬಹುದಾಗಿದೆ. ಇನ್ನು ಇದಕ್ಕೂ ಮೊದಲು ಪ್ರಕಟಿತ ವೇಳಾಪಟ್ಟಿಯಲ್ಲಿ ಜ.4 ವಿಶ್ರಾಂತಿ ದಿನವಾಗಿತ್ತು. ಆದರೆ ಅಪ್‌ಡೇಟ್ ವೇಳಾಪಟ್ಟಿಯಲ್ಲಿ ಈ ದಿನದಂದು ಮಂಗಳವಾರ ನಡೆಯಬೇಕಿದ್ದ ಪಂದ್ಯಗಳು ನಡೆಯಲಿವೆ.
ಈ ಮೊದಲು ಹೊರಡಿಸಿದ ವೇಳಾಪಟ್ಟಿಯಂತೆ ರಂಗ್‌ಪುರ, ಢಾಕಾ, ಚಟ್ಟೋಗ್ರಾಮ್ ಮತ್ತು ರಾಜ್‌ಶಾಹಿ ತಂಡಗಳು ಜನವರಿ 5 ಚಟ್ಟೋಗ್ರಾಮ್ ಹೋರಾಟ ನಡೆಸಬೇಕಿತ್ತು. ಈ ಪಂದ್ಯಗಳನ್ನು ಮರು ನಿಗದಿ ಪಡಿಸಲಾಗಿದ್ದು, ಅಪ್‌ಡೇಟ್ ವೇಳಾಪಟ್ಟಿಯನ್ನು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಬುಧವಾರ ಬಿಡುಗಡೆ ಮಾಡುವ ಸಾಧ್ಯತೆ ಇದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications