ಐಪಿಎಲ್ ಆಡಿದ್ರೆ ಹಣ ಸಿಗಲ್ಲ; ಬಿಸಿಸಿಐ ವಿರುದ್ಧ ವೇತನ ಸಿಗದ ಆಟಗಾರನ ಗಂಭೀರ ಆರೋಪ!

ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಉಳಿದ 31 ಪಂದ್ಯಗಳು ಯುಎಇಯಲ್ಲಿ ಸೆಪ್ಟೆಂಬರ್ ಮೂರನೇ ವಾರದಿಂದ ಮುಂದುವರಿಯಲಿದೆ. ಏಪ್ರಿಲ್ 9ರಂದು ಭಾರತದಲ್ಲಿ ಆರಂಭವಾಗಿದ್ದ ಈ ಬಾರಿಯ ಐಪಿಎಲ್ ಟೂರ್ನಿಯ 29 ಪಂದ್ಯಗಳು ಯಶಸ್ವಿಯಾಗಿ ಮುಗಿದ ನಂತರ ವಿವಿಧ ತಂಡಗಳ ಆಟಗಾರರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಕಾರಣ ಟೂರ್ನಿಯನ್ನು ಮುಂದೂಡಲಾಗಿತ್ತು.
ಈ ನಡುವೆ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ತಂಡವೊಂದರ ಕುರಿತು ಆಸ್ಟ್ರೇಲಿಯಾದ ಮಾಜಿ ಆಟಗಾರ ಬ್ರಾಡ್ ಹಾಡ್ಜ್ ಗಂಭೀರವಾದ ಆರೋಪವೊಂದನ್ನು ಮಾಡಿದ್ದಾರೆ. 2011ರ ಐಪಿಎಲ್ ಆವೃತ್ತಿಯಲ್ಲಿ ಬ್ರಾಡ್ ಹಾಡ್ಜ್ ಕೊಚ್ಚಿ ಟಸ್ಕರ್ಸ್ ಕೇರಳದ ಪರ ಆಟವಾಡಿದ್ದರು. ಆ ವರ್ಷದ ವೇತನದಲ್ಲಿ ಶೇ.35ರಷ್ಟು ಬಾಕಿ ಬರಬೇಕಾಗಿದ್ದು ಹತ್ತು ವರ್ಷಗಳು ಕಳೆದಿದ್ದರೂ ಸಹ ಇನ್ನೂ ಕೈಸೇರಿಲ್ಲ ಎಂದು ಬ್ರಾಡ್ ಹಾಡ್ಜ್ ಆರೋಪಿಸಿದ್ದಾರೆ.
ಈ ಕುರಿತು ಬಿಸಿಸಿಐಯನ್ನು ಕುಟುಕಿರುವ ಬ್ರಾಡ್ ಹಾಡ್ಜ್ ಕಳೆದ ಹತ್ತು ವರ್ಷಗಳ ಹಿಂದೆ ನಾನು ಕೊಚ್ಚಿ ಟಸ್ಕರ್ಸ್ ಕೇರಳ ತಂಡದ ಪರ ಆಡಿದ್ದ ವೇತನದ ಶೇ.35ರಷ್ಟು ಹಣ ಬಾಕಿ ಬರಬೇಕಿದೆ, ಈ ಹಣವನ್ನು ಬಿಸಿಸಿಐ ಹುಡುಕಿಕೊಡಬಹುದಾ ಎಂದು ವ್ಯಂಗ್ಯವಾಡಿದ್ದಾರೆ. ಹೀಗೆ ವ್ಯಂಗ್ಯ ಮಾಡುವುದರ ಮೂಲಕ ಹೇಗಾದರೂ ಮಾಡಿ ಪ್ರಸ್ತುತ ಐಪಿಎಲ್ ಟೂರ್ನಿಯನ್ನು ಮುಂದುವರಿಸಲು ಯತ್ನಿಸುತ್ತಿರುವ ಬಿಸಿಸಿಐ ಅಧ್ಯಕ್ಷರಾದ ಗಂಗೂಲಿ ಕಾಲೆಳೆದಿದ್ದಾರೆ ಬ್ರಾಡ್ ಹಾಡ್ಜ್.
ಇನ್ನು ಇದೇ ರೀತಿಯ ಆರೋಪವೊಂದು ಬಿಸಿಸಿಐ ವಿರುದ್ಧ ಇತ್ತೀಚೆಗಷ್ಟೇ ಕೇಳಿಬಂದಿತ್ತು. ಕಳೆದ ವರ್ಷ ನಡೆದ ಮಹಿಳೆಯರ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಹಣ ಇನ್ನೂ ಸಹ ಆಟಗಾರ್ತಿಯರಿಗೆ ಸಿಕ್ಕಿಲ್ಲ ಎಂಬ ಆರೋಪ ಬಿಸಿಸಿಐ ವಿರುದ್ಧ ಕೇಳಿ ಬಂದಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications