'ಹಿಟ್‌ಮ್ಯಾನ್'ನಿಂದ ದೊಡ್ಡ ಶತಕ ನಿರೀಕ್ಷಿಸುತ್ತಿದ್ದೇನೆ': ಬ್ರಾಡ್ ಹಾಗ್

ಚೆನ್ನೈ: ಇಂಗ್ಲೆಂಡ್ ವಿರುದ್ಧದ ಆರಂಭಿಕ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾದ ಪ್ರಮುಖ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಗಮನಾರ್ಹ ಪ್ರದರ್ಶನ ನೀಡಿರಲಿಲ್ಲ. ನೀಡಿರಲಿಲ್ಲ ಅನ್ನುವುದಕ್ಕಿಂತ ವೈಫಲ್ಯ ಅನುಭವಿಸಿದ್ದರು ಅನ್ನೋದೇ ಸರಿ. ಆದರೆ ಇಂಗ್ಲೆಂಡ್ ವಿರುದ್ಧದ ದ್ವಿತೀಯ ಪಂದ್ಯದಲ್ಲಾದರೂ ರೋಹಿತ್ ಮತ್ತೆ ಫಾರ್ಮ್‌ಗೆ ಮರಳಬೇಕು ಎಂದು ಕ್ರಿಕೆಟ್ ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ.
ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್ ಬ್ರಾಡ್ ಹಾಗ್ ಕೂಡ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ದ್ವಿತೀಯ ಟೆಸ್ಟ್‌ನಲ್ಲಿ ರೋಹಿತ್ ಶರ್ಮಾ ದೊಡ್ಡ ಶತಕ ಅಂದರೆ ದ್ವಿಶತಕ ಅಥವಾ ತ್ರಿಶತಕ ಬಾರಿಸುವುದನ್ನು ನಿರೀಕ್ಷಿಸುತ್ತಿದ್ದಾರೆ. ಇದನ್ನು ಸ್ವತಃ ಬ್ರಾಡ್ ಹೇಳಿಕೊಂಡಿದ್ದಾರೆ.
ದ್ವಿತೀಯ ಟೆಸ್ಟ್‌ಗೂ ಮುನ್ನ ಮಾತನಾಡಿರುವ ಬ್ರಾಡ್ ಹಾಗ್, 'ರೋಹಿತ್ ಅವರನ್ನು ತಂಡದಿಂದ ಕೈಬಿಡುವುದನ್ನು ನಾನು ಬಯಸಲಾರೆ. ದಕ್ಷಿಣ ಆಫ್ರಿಕಾ ವಿರುದ್ಧ ರೋಹಿತ್ ತ್ರಿಶತಕ ಬಾರಿಸಿದ್ದನ್ನು ಯೋಚಿಸಿ. ಆ ಮೂರು ಶತಕಗಳಲ್ಲಿ ಒಂದು ದ್ವಿಶತಕವಾಗಿತ್ತು. ರೋಹಿತ್ ಒಬ್ಬ ಅಸಾಧಾರಣ ಬ್ಯಾಟ್ಸ್‌ಮನ್, ದ್ವಿತೀಯ ಟೆಸ್ಟ್‌ನಲ್ಲಿ ಅವರಿಂದ ದೊಡ್ಡ ಶತಕ ನಿರೀಕ್ಷಿಸುತ್ತಿದ್ದೇನೆ,' ಎಂದಿದ್ದಾರೆ.
ಮೊದಲ ಟೆಸ್ಟ್ ಪಂದ್ಯದಲ್ಲಿ ಆರಂಭಿಕರಾಗಿ ಆಡಿದ್ದ ಶರ್ಮಾ ಕ್ರಮವಾಗಿ 6, 12 ರನ್ ಬಾರಿಸಿದ್ದರು. ದುರ್ಬಲ ಫಾರ್ಮ್ ತೋರಿಕೊಂಡಿದ್ದ ಶರ್ಮಾ ಅವರನ್ನು ದ್ವಿತೀಯ ಟೆಸ್ಟ್‌ನಲ್ಲಿ ತಂಡದಿಂದ ಕೈ ಬಿಡಬೇಕು ಅನ್ನುವ ಮಾತುಗಳು ಕೇಳಿಬಂದಿದ್ದವು. ಫೆಬ್ರವರಿ 13ರ 9.30 amನಿಂದ ಚೆನ್ನೈನಲ್ಲಿ ದ್ವಿತೀಯ ಟೆಸ್ಟ್ ಆರಂಭಗೊಳ್ಳಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications