Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WTCಗೆ ಅತ್ಯುತ್ತಮ XI ಹೆಕ್ಕಿದ ಬ್ರಾಡ್, ಪ್ರಮುಖ ಭಾರತೀಯನ ಅವಗಣನೆ, ಪಾಕ್ ಆಟಗಾರನಿಗೆ ಮಣೆ!

Brad Hogg picks his best XI from WTC 2019-21 edition, Babar Azam Included
ಬ್ರಾಡ್ ಕೊಟ್ಟ ಹೇಳಿಕೆ ನೋಡೀ ನೆಟ್ಟಿಗರು ಶಾಕ್!| Oneindia Kannada

ಲಂಡನ್: ಟೆಸ್ಟ್‌ ಕ್ರಿಕೆಟ್‌ ಅನ್ನು ಕ್ರಿಕೆಟ್‌ನ ಸಾಂಪ್ರದಾಯಿಕ ಮಾದರಿ ಎಂದು ಕರೆಯುತ್ತಾರೆ. ಆದರೆ ಟೆಸ್ಟ್‌ ಕ್ರಿಕೆಟ್ ಬೋರ್ ಅಂತ ಗೊಣಗುವವರೂ ನಮ್ಮ ಮಧ್ಯೆಯಿದ್ದಾರೆ. ಟೆಸ್ಟ್‌ ಕ್ರಿಕೆಟನ್ನು ಇನ್ನಷ್ಟು ಮನರಂಜನಾ ಮಾದರಿಯನ್ನಾಗಿಸೋಕೆ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್‌ ಎನ್ನುವ ಹೊಸ ಚಾಂಪಿಯನ್‌ಶಿಪ್‌ ಅನ್ನು ಪರಿಚಯಿಸಿದೆ. ಈ ಟೆಸ್ಟ್‌ ಚಾಂಪಿಯನ್‌ಶಿಪ್‌ನ ಆರಂಭಿಕ ಆವೃತ್ತಿ 2019-21ರ ವರೆಗೆ ನಡೆದಿದೆ.

ಟೆಸ್ಟ್‌ ಚಾಂಪಿಯನ್‌ಶಿಪ್‌ ಆರಂಭಿಕ ಆವೃತ್ತಿ ಮುಗಿದಿದ್ದಾಗಿದೆ. ಫೈನಲ್‌ನಲ್ಲಿ ಭಾರತ ಸೋಲಿಸಿರುವ ನ್ಯೂಜಿಲೆಂಡ್ ತಂಡ ಇತಿಹಾಸದ ಪುಟ ಸೇರಿದೆ. ಆದರೆ ಟೆಸ್ಟ್‌ ಚಾಂಪಿಯನ್‌ಶಿಪ್‌ಗೆ ವಿಶ್ವದ ಎಲ್ಲಾ ಪ್ರಮುಖ ಆಟಗಾರರನ್ನು ಸೇರಿಸಿ ಒಂದು ತಂಡ ತಯಾರಿಸುತ್ತಿದ್ದರೆ ಆ ತಂಡ ಹೇಗಿರುತ್ತಿತ್ತು?!

ವಿಶ್ವದ ಬೆಸ್ಟ್ ತಂಡ ಹೆಕ್ಕಿದ ಬ್ರಾಡ್

ವಿಶ್ವದ ಬೆಸ್ಟ್ ತಂಡ ಹೆಕ್ಕಿದ ಬ್ರಾಡ್

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ಗೆ ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್ ಸ್ಟುವರ್ಟ್ ಬ್ರಾಡ್ ಬಲಿಷ್ಠ ತಂಡವನ್ನು ಹೆಸರಿಸಿದ್ದಾರೆ. ಭಾರತ, ಪಾಕಿಸ್ತಾನ, ಶ್ರೀಲಂಕಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಇಂಗ್ಲೆಂಡ್ ತಂಡಗಳ ಆಟಗಾರರು ಸೇರಿರುವ ಈ ತಂಡ ಬಲಿಷ್ಠವಾಗಿದೆ. ಭಾರತದ ನಾಲ್ವರು ಆಟಗಾರರು ಈ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ.

ಬಾಬರ್‌, ಪಂತ್‌ಗೆ ಸ್ಥಾನ

ಬಾಬರ್‌, ಪಂತ್‌ಗೆ ಸ್ಥಾನ

ಪಾಕಿಸ್ತಾನ ಕ್ರಿಕೆಟ್ ತಂಡದ ಪ್ರತಿಭಾನ್ವಿತ ಆಟಗಾರ ಬಾಬರ್ ಅಝಾಮ್‌ಗೆ ಬ್ರಾಡ್ ತನ್ನ ನೆಚ್ಚಿನ WTC XIನಲ್ಲಿ ಸ್ಥಾನ ನೀಡಿದ್ದಾರೆ. ವಿಶೇಷವೆಂದರೆ ವಿಶ್ವದಲ್ಲಿ ಮೂರೂ ಕ್ರಿಕೆಟ್ ಮಾದರಿಗಳಲ್ಲಿ ಶ್ರೇಷ್ಠ ಬ್ಯಾಟ್ಸ್‌ಮನ್‌ ಎನಿಸಿರುವ ಭಾರತದ ನಾಯಕ ವಿರಾಟ್ ಕೊಹ್ಲಿ ತಂಡದಲ್ಲಿ ಕಾಣಿಸಿಕೊಂಡಿಲ್ಲ. ಆದರೆ ಭಾರತದ ಯುವ ಬ್ಯಾಟ್ಸ್‌ಮನ್‌ ರಿಷಭ್ ಪಂತ್, ಅನುಭವಿ ರೋಹಿತ್ ಶರ್ಮಾ ಬ್ರಾಡ್ ನೆಚ್ಚಿನ WTC ತಂಡದಲ್ಲಿ ಕಾಣಿಸಿಕೊಂಡಿದ್ದಾರೆ.

ಬ್ರಾಡ್ ನೆಚ್ಚಿನ WTC ‍XI

ಬ್ರಾಡ್ ನೆಚ್ಚಿನ WTC ‍XI

ರೋಹಿತ್ ಶರ್ಮಾ (ಭಾರತ), ದಿಮುತ್ ಕರುಣರತ್ನೆ (ಶ್ರೀಲಂಕಾ), ಕೇನ್ ವಿಲಿಯಮ್ಸನ್ (ನಾಯಕ, ನ್ಯೂಜಿಲೆಂಡ್), ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ), ಬಾಬರ್ ಅಝಾಮ್ (ಪಾಕಿಸ್ತಾನ), ಬೆನ್ ಸ್ಟೋಕ್ಸ್ (ಇಂಗ್ಲೆಂಡ್), ರಿಷಭ್ ಪಂತ್ (ವಿಕೆಟ್ ಕೀಪರ್), ಕೈಲ್ ಜೇಮಿಸನ್ (ನ್ಯೂಜಿಲೆಂಡ್), ರವಿಚಂದ್ರನ್ ಅಶ್ವಿನ್ (ಭಾರತ), ಸ್ಟುವರ್ಟ್ ಬ್ರಾಡ್ (ಇಂಗ್ಲೆಂಡ್), ಮೊಹಮ್ಮದ್ ಶಮಿ (ಭಾರತ).

Story first published: Wednesday, June 30, 2021, 15:23 [IST]
Other articles published on Jun 30, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+