"ಆರ್‌ಸಿಬಿ ಈ ಬಾರಿಯ ಚಾಂಪಿಯನ್": ಬಲಿಷ್ಠ ಕಾರಣಗಳನ್ನು ಹೇಳಿದ ಆಸಿಸ್ ದಿಗ್ಗಜ

ಐಸಿಸಿ ವಿಶ್ವಕಪ್ ಟೂರ್ನಿಯನ್ನು ಮುಂದೂಡುವ ನಿರ್ಧಾರ ಪ್ರಕಟಗೊಳಿಸಿದಂತೆಯೇ ಆ ವೇದಿಕೆಯಲ್ಲಿ ಬಿಸಿಸಿಐ ಐಪಿಎಲ್ ನಡೆಸಲು ಸಜ್ಜಾಗಿದೆ. ಈಗಾಗಲೇ ಐಪಿಎಲ್ ಚೇರ್‌ಮನ್ ಬ್ರಿಜೇಶ್ ಪಟೇಲ್ ಸೆಪ್ಟೆಂಬರ್-ನವೆಂಬರ್ ಅವಧಿಯಲ್ಲಿ ಐಪಿಎಲ್ ನಡೆಯುವುದನ್ನು ಸ್ಪಷ್ಟಪಡಿಸಿದ್ದಾರೆ.
ಈ ಬೆನ್ನಲ್ಲೇ ಆರ್‌ಸಿಬಿ ಅಭಿಮಾನಿಗಳಿಗೆ ಖುಷಿ ನೀಡುವ ಹೇಳಿಕೆಯನ್ನು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ನೀಡಿದ್ದಾರೆ. ಕಳೆದ 12 ಐಪಿಎಲ್ ಆವೃತ್ತಿಯಲ್ಲಿ ನಿರಾಸೆ ಅನುಭವಿಸಿರುವ ಆರ್‌ಸಿಬಿ ತಂಡ ಈ ಬಾರಿ ಚಾಂಪಿಯನ್ ಆಗಲಿದೆ ಎಂಬ ಭವಿಷ್ಯ ನುಡಿದಿದ್ದಾರೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಬ್ರಾಡ್ ಹಾಗ್.

ಈ ಬಾರಿ ಆರ್‌ಸಿಬಿ ಚಾಂಪಿಯನ್ ಆಗಲಿದೆ
ಆರ್‌ಸಿಬಿ ತಂಡ ಕಾಗದದಲ್ಲಿ ಯಾವಾಗಲೂ ಬಲಿಷ್ಠವಾಗಿಯೇ ಇರುವ ತಂಡ. ಆದರೆ ಆರ್‌ಸಿಬಿಗೆ ಚಾಂಪಿಯನ್ ಆಗುವ ಅವಕಾಶ ಈವರೆಗೆ ದೊರೆತಿಲ್ಲ. ಆದರೆ ಈ ಬಾರಿ ಅದು ಚಾಂಪಿಯನ್ ಪಟ್ಟಕ್ಕೇರಲಿದೆ ಎಂದಿದ್ದಾರೆ. ಮುಂಬೈ ಇಂಡಿಯನ್ಸ್ ಚಾಂಪಿಯನ್ ಪಟ್ಟಕ್ಕೇರುವ ಸಾಧ್ಯತೆಯಿರುವ ಮತ್ತೊಂದು ತಂಡ ಎಂದಿದ್ದಾರೆ ಬ್ರಾಡ್ ಹಾಗ್.

ಆರೋನ್ ಫಿಂಚ್ ಬಲ
ಆರ್‌ಸಿಬಿ ತಂಡಕ್ಕೆ ಈ ಬಾರಿ ಆರೋನ್ ಫಿಂಚ್ ಕೂಡ ಸೇರ್ಪಡೆಯಾಗುತ್ತಿದ್ದಾರೆ. ಪವರ್‌ಪ್ಲೇನಲ್ಲಿ ಅವರು ಬೌಲರ್‌ಗಳ ಮೇಲೆ ಸವಾರಿ ಮಾಡಲಿದ್ದಾರೆ. ಈ ವೇಳೆ ಸಾಕಷ್ಟು ರನ್ ಗಳಿಸಿ ಮಧ್ಯಮ ಕ್ರಮಾಂಕದ ಒತ್ತಡವನ್ನು ಕಡಿಮೆಮಾಡಲಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಅವರಂತಾ ಆಟಗಾರರು ಎದುರಾಳಿಗಳನ್ನು ದಂಡಿಸಲಿದ್ದಾರೆ ಎಂದು ಬ್ರಾಡ್ ಹಾಗ್ ಹೇಳಿದ್ದಾರೆ.

ಬೌಲಿಂಗ್ ಸಮತೋಲನ
ಬೌಲಿಂಗ್ ವಿಭಾಗದಲ್ಲೂ ಆರ್‌ಸಿಬಿ ಬಲಿಷ್ಠವಾಗಿದೆ. ಡೇಲ್ ಸ್ಟೇನ್ ಹಾಗೂ ಕೇನ್ ರಿಚರ್ಡ್‌ಸನ್ ತಂಡದ ಸಮತೋಲನವನ್ನು ಈ ಹಿಂದಿನ ಟೂರ್ನಿಗಿಂತ ಹೆಚ್ಚುಗೊಳಿಸಲಿದ್ದಾರೆ. ಮಾತ್ರವಲ್ಲದೆ ಈ ಹಿಂದಿನ ಟೂರ್ನಿಯಲ್ಲಿ ಮಾಡಿದ ರಣತಂತ್ರಕ್ಕಿಂತ ಬೇರೆಯದ್ದೇ ರಣತಂತ್ರವನ್ನು ಹೆಣೆಯಲಿದ್ದಾರೆ ಎಂದು ಬ್ರಾಡ್ ಹಾಗ್ ಹೇಳಿದ್ದಾರೆ.

ಹಾರ್ದಿಕ್ ಪಾಂಡ್ಯ ಶ್ರೇಷ್ಠ ಪ್ರದರ್ಶನ
ಇನ್ನು ಇದೇ ಸಂದರ್ಭದಲ್ಲಿ ಟೀಮ್ ಇಂಡಿಯಾದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಈ ಬಾರಿಯ ಟೂರ್ನಿಯಲ್ಲಿ ಅದ್ಭುತವಾದ ಪ್ರದರ್ಶನವನ್ನು ನೀಡಿ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಎನಿಸಿಕೊಳ್ಳಲಿದ್ದಾರೆ ಎಂದಿದ್ದಾರೆ. ಬಹಳ ಸಮಯದ ನಂತರ ಕ್ರಿಕೆಟ್‌ಗೆ ಹಾರ್ದಿಕ್ ಮತ್ತೆ ಮರಳುತ್ತಿದ್ದು ಈಗ ತಂದೆಯಾಗುವ ಸಂಭ್ರಮದಲ್ಲೂ ಇದ್ದಾರೆ. ಇದು ಅವರಿಗೆ ಸಾಕಷ್ಟು ಶಕ್ತಿಯನ್ನು ನೀಡಲಿದ್ದು ಇದು ಆಟದಲ್ಲೂ ವ್ಯಕ್ತವಾಗಲಿದೆ ಎಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications