ಪಂಜಾಬ್ ವಿರುದ್ಧ ಬೆಂಗಳೂರು ಸೋಲಿಗೆ ಕಾರಣ ಹೇಳಿದ ಬ್ರಾಡ್ ಹಾಗ್

ದೆಹಲಿ: ಶುಕ್ರವಾರ (ಏಪ್ರಿಲ್ 30) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯದಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪಂಜಾಬ್ ಕಿಂಗ್ಸ್ ವಿರುದ್ಧ ನಿರಾಶೆಯ ಪ್ರದರ್ಶನ ನೀಡಿತ್ತು. ಪಂಜಾಬ್ ನೀಡಿದ್ದ 180 ರನ್ ಗುರಿ ಬೆನ್ನಟ್ಟಿದ ಬೆಂಗಳೂರು 34 ರನ್‌ನಿಂದ ಪಂದ್ಯ ಸೋತಿತ್ತು. ಈ ಸೋಲು ಆರ್‌ಸಿಬಿಗೆ ನೆಟ್ ರನ್‌ರೇಟ್ ವಿಚಾರದಲ್ಲಿ ಹೊಡೆತ ಕೊಟ್ಟಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟಿದ್ದ ಪಂಜಾಬ್ ಕಿಂಗ್ಸ್, ನಾಯಕ ಕೆಎಲ್ ರಾಹುಲ್ ಅಜೇಯ 91, ಕ್ರಿಸ್ ಗೇಲ್ 46 ರನ್‌ನೊಂದಿಗೆ 20 ಓವರ್‌ಗೆ 5 ವಿಕೆಟ್ ಕಳೆದು 179 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಆರ್‌ಸಿಬಿ, 20 ಓವರ್‌ಗೆ 8 ವಿಕೆಟ್ ಕಳೆದು 145 ರನ್ ಬಾರಿಸಿ ಶರಣಾಗಿತ್ತು.

ಬ್ರಾರ್ ಮಾರಕ ಬೌಲಿಂಗ್
ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯದಲ್ಲಿ ಆರ್‌ಸಿಬಿಯಲ್ಲಿ ವಿರಾಟ್ ಕೊಹ್ಲಿ, ಎಬಿ ಡಿ ವಿಲಿಯರ್ಸ್, ಗ್ಲೆನ್ ಮ್ಯಾಕ್ಸ್‌ವೆಲ್ ಅವರಂಥ ಆಟಗಾರರಿದ್ದೂ ಪಂದ್ಯ ಗೆಲ್ಲಲಾಗಲಿಲ್ಲ. ಇದಕ್ಕೆ ಮುಖ್ಯ ಕಾರಣ ಪಂಜಾಬ್ ಸ್ಪಿನ್ನರ್ ಹರ್‌ಪ್ರೀತ್ ಬ್ರಾರ್. ಬ್ರಾರ್ ಆರ್‌ಸಿಬಿ ಕೊಹ್ಲಿ, ಮ್ಯಾಕ್ಸ್‌ವೆಲ್ ಮತ್ತು ಎಬಿ ಡಿ ಮೂವರ ವಿಕೆಟ್ ಕೂಡ ಮುರಿದು ಬೆಂಗಳೂರು ಸೋಲಿಗೆ ಕಾರಣರಾದರು.

ಕೊಹ್ಲಿ ನೀರಸ ಬ್ಯಾಟಿಂಗ್
ಆರ್‌ಸಿಬಿ ಸೋತಿದ್ದೆಲ್ಲಿ ಎಂದು ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್ ಬ್ರಾಡ್ ಹಾಗ್ ಹೇಳಿಕೊಂಡಿದ್ದಾರೆ. ಕೊಹ್ಲಿ 34 ಎಸೆತಗಳಲ್ಲಿ 35 ರನ್ ಬಾರಿಸಿದರು. ಅಲ್ಲದೆ ಆರ್‌ಸಿಬಿ 1 ವಿಕೆಟ್ ಕಳೆದಿದ್ದರೂ 10 ಓವರ್‌ಗಳವರೆಗೆ ಪ್ರತೀ ಓವರ್‌ಗೆ ಕೇವಲ 6 ರನ್ ಬರುವಂತೆ ಆರ್‌ಸಿಬಿ ಆಡುತ್ತಿತ್ತು. ಅದೂ ಕೂಡ 180 ರನ್ ಗುರಿ ಬೆನ್ನಟ್ಟುವಾಗ ಹೀಗೆ ಆಟ ಆಡುತ್ತಿತ್ತು ಎಂದು ಹಾಗ್ ಹೇಳಿದ್ದಾರೆ.

ಆರ್‌ಸಿಬಿ ನಿಧಾನಗತಿಯ ಆಟ
'ಕೇವಲ 1 ವಿಕೆಟ್ ಕಳೆದು 180 ರನ್ ಗುರಿ ಬೆನ್ನಟ್ಟಿದ್ದಾಗ ಆರ್‌ಸಿಬಿ ಪ್ರತೀ ಓವರ್‌ಗೆ 6 ರನ್‌ನಂತೆ 10 ಓವರ್‌ಗಳನ್ನು ಕಳೆದಿತ್ತು. ಇದು ಒಳ್ಳೆಯ ಆಟವಲ್ಲ. ಹೌದು ನಿಮ್ಮಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್, ಎಬಿ ಡಿ ವಿಲಿಯರ್ಸ್ ಇದ್ದಾರೆ ನಿಜ. ಆದರೆ ಎಲ್ಲಾ ಹೊರೆ ಅವರ ಮೇಲೆ ಹಾಕಿ ಪ್ರತೀ ಸಾರಿಯೂ ಅವರು ಗೆಲ್ಲಿಸುತ್ತಾರೆ ಎಂದು ನಿರೀಕ್ಷಿಸೋದು ತಪ್ಪು,' ಎಂದು ಹಾಗ್ ಹೇಳಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications