For Quick Alerts
ALLOW NOTIFICATIONS  
For Daily Alerts
 

ಬೋಲ್ಟ್, ರೊನಾಲ್ಡೋಗಿಂತ 'ಬ್ರ್ಯಾಂಡ್' ಧೋನಿ ಬೆಸ್ಟ್!

By Mahesh

ಬೆಂಗಳೂರು, ಅ. 25: ಫೋರ್ಬ್ಸ್ ನಿಯತಕಾಲಿಕೆ ಇತ್ತೀಚೆಗೆ ಬಿಡುಗಡೆ ಮಾಡಿರುವ ಅತ್ಯಂತ ಶ್ರೀಮಂತ ಕ್ರೀಡಾಪಟುಗಳ ಪಟ್ಟಿಯಲ್ಲಿ ಭಾರತದ ಏಕದಿನ ಕ್ರಿಕೆಟ್ ತಂಡದ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅವರ ಹೆಸರಿನ 'ಬ್ಯ್ರಾಂಡ್' ಐದನೇ ಸ್ಥಾನ ಪಡೆದುಕೊಂಡಿದೆ. ಅಥ್ಲೀಟ್ ಉಸೇನ್ ಬೋಲ್ಟ್ ಹಾಗೂ ಫುಟ್ಬಾಲರ್ ರೊನಾಲ್ಡೊ ಅವರಿಗಿಂತ ಧೋನಿ ಹೆಸರೇ ಹೆಚ್ಚಿನ ಬಲ ಹೊಂದಿದೆ.

2015ನೇ ಸಾಲಿನ ಅತ್ಯಂತ ಹೆಚ್ಚು ಬ್ರಾಂಡ್ ಮೌಲ್ಯವನ್ನು ಹೊಂದಿರುವ ಕ್ರೀಡಾಪಟುಗಳ ಪೈಕಿ ಧೋನಿ ಅವರು 5ನೇ ಸ್ಥಾನ ಪಡೆದಿದ್ದಾರೆ. ಎಂಎಸ್ ಧೋನಿ ಸುಮಾರು 21 ಮಿಲಿಯನ್ ಯುಎಸ್ ಡಾಲರ್ ಬ್ರಾಂಡ್ ಮೌಲ್ಯವನ್ನು ಹೊಂದಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಸುಮಾರು 135 ಕೋಟಿ ರು, ಗೂ ಅಧಿಕ ಏರಿಕೆ ಧೋನಿ ಬ್ರ್ಯಾಂಡ್ ನೇಮ್ ಗೆ ಸಿಕ್ಕಿದೆ.[ಫೋರ್ಬ್ಸ್ ಶ್ರೀಮಂತ ಕ್ರೀಡಾಪಟು ಪಟ್ಟಿಯಲ್ಲಿ ಧೋನಿ]

Brand Dhoni is bigger than Ronaldo and Usain Bolt : Forbes

30 ಮಿಲಿಯನ್ ಬ್ರಾಂಡ್ ಮೌಲ್ಯ ಪಡೆದಿರುವ ಗಾಲ್ಫ್ ಆಟಗಾರ ಟೈಗರ್‌ ವುಡ್ಸ್ ಫೋರ್ಬ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದಿದ್ದಾರೆ. ಗಾಲ್ಫರ್ ಫಿಲ್ ಮಿಕೆಲ್ ಸನ್, ರೊರಿ ಮೆಲ್ ರಾಯ್ ಹಾಗೂ ಎನ್ ಬಿಎ ಪಟುಗಳು ಟಾಪ್ 10 ಪಟ್ಟಿಯಲ್ಲಿದ್ದಾರೆ.

ರಿಯಲ್ ಮ್ಯಾಡ್ರಿಡ್ ಮತ್ತು ಪೋರ್ಚುಗಲ್ ತಂಡದ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ 8ನೇ ಸ್ಥಾನ ಹೊಂದಿದ್ದಾರೆ. ಬಾರ್ಸಿಲೋನಾ ಮತ್ತು ಅರ್ಜೆಂಟೀನಾ ಫುಟ್ಬಾಲ್ ತಂಡದ ಆಟಗಾರ ಲಿಯೊನೆಲ್ ಮೆಸ್ಸಿ ಈ ಪಟ್ಟಿಯಲ್ಲಿ ಅಗ್ರ 10ರಲ್ಲಿ ಸ್ಥಾನ ಪಡೆದಿದ್ದಾರೆ.

ಫೋರ್ಬ್ಸ್ ಮ್ಯಾಗಜೀನ್ ಪ್ರಕಟಿಸಿರುವ ವಿಶ್ವ ಕ್ರೀಡಾ ಲೋಕದಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ಆಟಗಾರರ ಟಾಪ್ 100 ಪಟ್ಟಿಯಲ್ಲಿ ಭಾರತೀಯ ಕ್ರಿಕೆಟ್ ತಂಡದ ನಾಯಕ ಮಹೇಂದರ್ ಸಿಂಗ್ ಧೋನಿ ಮಾತ್ರ ಸ್ಥಾನ ಪಡೆದುಕೊಂಡಿದ್ದಾರೆ. 2014ರ ಅಂತ್ಯಕ್ಕೆ ಟೆಸ್ಟ್ ಕ್ರಿಕೆಟ್ ಗೆ ವಿದಾಯ ಹೇಳಿದ 33 ವರ್ಷದ ಕ್ರಿಕೆಟರ್ ಧೋನಿ ಅವರು 23ನೇ ಸ್ಥಾನದಲ್ಲಿದ್ದಾರೆ . ಧೋನಿ ಅವರ ಗಳಿಕೆ 31 ಮಿಲಿಯನ್ ಯುಎಸ್ ಡಾಲರ್ ನಷ್ಟಿದೆ.

Story first published: Wednesday, January 3, 2018, 10:03 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+