Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Brendon McCullum: 'ಬೇಸ್‌ಬಾಲ್ ಕಿಂಗ್'ಗೆ ಹೊಸ ಜವಾಬ್ದಾರಿ ನೀಡಿದ ಇಂಗ್ಲೆಂಡ್

2023-25ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ (ಡಬ್ಲ್ಯೂಟಿಸಿ) ಫೈನಲ್‌ನ ದಿನಾಂಕವನ್ನು ಮಂಗಳವಾರ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ ಪ್ರಕಟಿಸಿದೆ. ಇದಾದ ಕೆಲವು ಗಂಟೆಗಳ ನಂತರ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ (ಇಸಿಬಿ) ಕೂಡ ದೊಡ್ಡ ಘೋಷಣೆ ಮಾಡಿದೆ.

ಇಂಗ್ಲೆಂಡ್ ತಂಡದ ಮೂರು ಸ್ವರೂಪಗಳ ಮುಖ್ಯ ಕೋಚ್‌ನ ಜವಾಬ್ದಾರಿಯನ್ನು 'ಬೇಸ್‌ಬಾಲ್ ಕಿಂಗ್' ಖ್ಯಾತಿಯ ಬ್ರೆಂಡನ್ ಮೆಕಲಮ್‌ ಅವರಿಗೆ ಇಸಿಬಿ ಹಸ್ತಾಂತರಿಸಿದೆ. ಏಕದಿನ, ಟಿ20 ಅಥವಾ ಟೆಸ್ಟ್ ಆಗಿರಲಿ ಅವರ ಆಟ ಒಂದೇ ಆಗಿತ್ತು. ಹೊಡಿಬಡಿ ಆಟಕ್ಕೆ ಹೆಸರುವಾಸಿಯಾಗಿದ್ದ ಅವರು ಬೌಲರ್‌ಗಳಿಗೆ ನಡುಕ ಹುಟ್ಟಿಸಿದ್ದರು.

Brendon McCullum appointed as head coach of England team

2022ರಲ್ಲಿ ಇಂಗ್ಲೆಂಡ್ ಟೆಸ್ಟ್ ತಂಡದ ಮುಖ್ಯ ಕೋಚ್ ಆಗಿ ಬ್ರೆಂಡನ್ ಮೆಕಲಮ್ ಅವರನ್ನು ನೇಮಿಸಲಾಗಿತ್ತು.ಈಗ ಅವರ ಅಧಿಕಾರಾವಧಿಯನ್ನು 2027 ರವರೆಗೆ ವಿಸ್ತರಿಸಲಾಗಿದೆ. ಇದರೊಂದಿಗೆ ಇದೀಗ ವೈಟ್ ಬಾಲ್ ಕ್ರಿಕೆಟ್ ಜವಾಬ್ದಾರಿಯನ್ನೂ ನೀಡಲಾಗಿದೆ. ಈಗಾಗಲೇ ಹಂಗಾಮಿ ತರಬೇತುದಾರರಾಗಿ ಸೇವೆಯಲ್ಲಿರುವ ಮಾರ್ಕಸ್ ಟ್ರೆಸ್ಕೊಥಿಕ್ ಅವರು ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಸರಣಿ ಮತ್ತು ವೆಸ್ಟ್ ಇಂಡೀಸ್ ಪ್ರವಾಸದ ವೇಳೆ ತಮ್ಮ ಕರ್ತವ್ಯಗಳನ್ನು ಮುಂದುವರಿಸಲಿದ್ದಾರೆ.

ಯಾವಾಗ ಕಮಾಂಡ್?

ಕೆಳಮಟ್ಟದಲ್ಲಿ ಇಂಗ್ಲೆಂಡ್ ತಂಡವನ್ನು ಬಲಪಡಿಸುವ ನಿರ್ಧಾರಗಳನ್ನು ಈಗಾಗಲೇ ತೆಗೆದುಕೊಳ್ಳಲಾಗಿದೆ. ನೂತನ ಮುಖ್ಯಕೋಚ್ ಆಗಿ ನೇಮಕಗೊಂಡಿರುವ ಬ್ರೆಂಡನ್ ಮೆಕಲಮ್ ಅವರು ವೈಟ್ ಕ್ರಿಕೆಟ್ ತಂಡದಲ್ಲಿ ಹಲವು ಬದಲಾವಣೆ ತರುವ ಸಾಧ್ಯತೆಗಳಿವೆ. ಇದಕ್ಕೂ ಮುನ್ನ ಅವರು 2025ರ ಜನವರಿ 1 ರಂದು ಅಧಿಕಾರ ಸ್ವೀಕರ ಮಾಡಲಿದ್ದಾರೆ. ಈ ಹೊಸ ಜವಾಬ್ದಾರಿ ಸಿಕ್ಕಿರುವುದಕ್ಕೆ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

'ಹೊಸ ಸವಾಲನ್ನು ಸ್ವೀಕರಿಸಲು ನಾನು ಸಿದ್ಧನಿದ್ದೇನೆ. ನಾಯಕ ಜೋಸ್ ಬಟ್ಲರ್ ಅವರೊಂದಿಗೆ ಕೆಲಸ ಮಾಡಲು ನಾನು ಉತ್ಸುಕನಾಗಿದ್ದೇನೆ' ಎಂದು ಬ್ರೆಂಡನ್ ಮೆಕಲಮ್ ಹೇಳಿದ್ದಾರೆ.

ಎಲ್ಲಿಯವರಗೆ ಅಧಿಕಾರವಧಿ?

ಬ್ರೆಂಡನ್ ಮೆಕಲಮ್ ತಮ್ಮ ಅಧಿಕಾರಾವಧಿಯಲ್ಲಿ ದೊಡ್ಡ ಜವಾಬ್ದಾರಿಗಳನ್ನು ಹೊರಬೇಕಾಗುತ್ತದೆ. ಏಕದಿನ ಮತ್ತು ಟಿ20 ತಂಡಗಳ ಕೋಚ್ ಆಗಿ ಬಲಿಷ್ಠ ತಂಡವನ್ನು ಕಟ್ಟಬೇಕಿದೆ. 2026ರ ಟಿ20 ವಿಶ್ವಕಪ್, 2027ರ ಏಕದಿನ ವಿಶ್ವಕಪ್ ಮತ್ತು ಇದಕ್ಕೂ ಮುನ್ನ ನಡಯಲರುವ 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ತಂಡವನ್ನು ಗೆಲುವಿನ ಕಡೆ ಮುನ್ನಡೆಸುವ ಜವಾಬ್ದಾರಿ ಅವರ ಹೆಗಲ ಮೇಲಿರಲಿದೆ. ಇದರ ಹೊರತಾಗಿ ಅವರ ಸಂಪೂರ್ಣ ಗಮನವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2027ರ ಮೇಲೂ ಇರಲಿದೆ.

ಡಬ್ಲ್ಯೂಟಿಸಿ ಫೈನಲ್ ಯಾವಾಗ-ಎಲ್ಲಿ?

ಬಹುನಿರೀಕ್ಷಿತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಮೂರನೇ ಆವೃತ್ತಿಯ ಫೈನಲ್‌ನ ವೇಳಾಪಟ್ಟಿಯನ್ನು ಐಸಿಸಿ ಪ್ರಕಟಿಸಿದ್ದು, ಮುಂದಿನ ವರ್ಷ 2025ರ ಜೂನ್ 11 ಮತ್ತು 15 ರ ನಡುವೆ ಲಾರ್ಡ್ಸ್‌ ಮೈದಾನದಲ್ಲಿ ಡಬ್ಲ್ಯೂಟಿಸಿ ಫೈನಲ್ ಆಡಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಲ್ಲದೆ, ಈ ಫೈನಲ್ ಪಂದ್ಯಕ್ಕೆ ಜೂನ್ 16 ಅನ್ನು ಮೀಸಲು ದಿನವನ್ನಾಗಿ ಇರಿಸಲಾಗಿದೆ.

Story first published: Wednesday, September 4, 2024, 8:10 [IST]
Other articles published on Sep 4, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+