ಈ ಭಾರತೀಯ ಕ್ರಿಕೆಟಿಗನಿಂದ ಮಾತ್ರ 400 ರನ್‌ಗಳ ಬ್ರಿಯಾನ್ ಲಾರಾ ವಿಶ್ವದಾಖಲೆ ಮುರಿಯಲು ಸಾಧ್ಯ: ಬ್ರೆಂಡನ್ ಮೆಕ್ಕಲಮ್

ವಿಶ್ವ ಕ್ರಿಕೆಟ್‌ನಲ್ಲಿ ಟಿ20 ಕ್ರಿಕೆಟ್ ಮಾದರಿಯ ಅಬ್ಬರ ಎಷ್ಟೇ ಹೆಚ್ಚಾಗಿದ್ದರೂ ಟೆಸ್ಟ್ ಕ್ರಿಕೆಟ್ ತನ್ನ ಘನತೆಯನ್ನು ಕಳೆದುಕೊಂಡಿಲ್ಲ. ಟೆಸ್ಟ್ ಕ್ರಿಕೆಟ್ ಮಾದರಿಯಲ್ಲಿ ಅನೇಕ ಅದ್ಭುತ ಆಟಗಾರರು ಪ್ರದರ್ಶನ ನೀಡುತ್ತಿರುವ ಕಾರಣ ಅಭಿಮಾನಿಗಳು ಕೂಡ ಟೆಸ್ಟ್ ಕ್ರಿಕೆಟ್‌ನ ಮೇಲಿನ ಒಲವನ್ನು ಕಡಿಮೆ ಮಾಡಿಲ್ಲ. ಅದರಲ್ಲೂ ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಟೆಸ್ಟ್ ಸರಣಿಗಳು ಹೆಚ್ಚಿನ ಪ್ರಮಾಣದಲ್ಲಿ ಕುತೂಹಲ ಕೆರಳಿಸುವಲ್ಲಿ ಯಶಸ್ವಿಯಾಗಿದೆ. ಇಂಥಾ ಸಂದರ್ಭದಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡಕ್ಕೆ ನೂತನವಾಗಿ ಕೋಚ್ ಆಗಿ ನೇಮಕವಾಗಿರುವ ಬ್ರೆಂಡನ್ ಮೆಕ್ಕಲಮ್ ಟೆಸ್ಟ್ ಕ್ರಿಕೆಟ್‌ನ ದೊಡ್ಡ ದಾಖಲೆಯೊಂದರ ಬಗ್ಗೆ ಮಾತನಾಡಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಬ್ಯಾಟಿಂಗ್ ವಿಚಾರಕ್ಕೆ ಬಂದರೆ ಹೆಚ್ಚಿನ ದಾಖಲೆಗಳು ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ. ಬ್ರಿಯಾನ್ ಲಾರಾ ರಿಕಿ ಪಾಂಟಿಂಗ್ ಕೂಡ ಅನೇಕ ದಾಖಲೆಗಳನ್ನು ಹೊಂದಿದ್ದಾರೆ. ಇತ್ತೀಚಿನ ದಶಕದಲ್ಲಿ ಭಾರತದ ವಿರಾಟ್ ಕೊಹ್ಲಿ, ಸ್ಟೀವ್ ಸ್ಮಿತ್, ಜೋ ರೂಟ್, ಕೇನ್ ವಿಲಿಯಮ್ಸನ್ ರೀತಿಯ ಆಟಗಾರರು ಟೆಸ್ಟ್ ಕ್ರಿಕೆಟ್‌ನ ಕೆಲ ದಾಖಲೆಗಳನ್ನು ತಮ್ಮ ಹೆಸರಿನಲ್ಲಿಯೂ ಬರೆದುಕೊಳ್ಳುತ್ತಿದ್ದು ದಿಗ್ಗಜರ ದಾಖಲೆ ಮೇಲೆ ಕಣ್ಣಿಟ್ಟಿರುವುದು ಸ್ಪಷ್ಟವಾಗಿದೆ. ಆದರೆ ವಿಶ್ವ ಕ್ರಿಕೆಟ್‌ನ ಕೆಲ ಬೃಹತ್ ದಾಖಲೆಯನ್ನು ಮುರಿಯುವುದು ಈ ಆಟಗಾರರಿಂದ ಎಷ್ಟರ ಮಟ್ಟಿಗೆ ಸಾಧ್ಯವಾಗಲಿದೆ ಎಂಬುದು ಕಾದು ನೋಡಬೇಕಿದೆ.
ಹೀಗಿದ್ದಾಗ ಟೆಸ್ಟ್‌ನಲ್ಲಿ ಮುರಿಯುವುದು ಅಸಾಧ್ಯ ಎಂಬಂಥಾ ದಾಖಲೆಯೊಂದನ್ನು ವೆಸ್ಟ್ ಇಂಡೀಸ್ ದಿಗ್ಗಜ ಬ್ರಿಯಾನ್ ಲಾರಾ ತಮ್ಮ ಹೆಸರಿನಲ್ಲಿ ಬರೆದುಕೊಂಡಿದ್ದಾರೆ. ಟೆಸ್ಟ್‌ನ ಇನ್ನಿಂಗ್ಸ್‌ವೊಂದರಲ್ಲಿ ಅತಿ ಹೆಚ್ಚು ಅಜೇಯ 400 ರನ್ ಬಾರಿಸಿದ ದಾಖಲೆ ಲಾರಾ ಹೆಸರಿನಲ್ಲಿದೆ. ಈ ದಾಖಲೆಯನ್ನು ಓರ್ವ ಭಾರತೀಯ ಆಟಗಾರನಿಂದ ಮಾತ್ರ ಸಾಧ್ಯ ಎಂದಿದ್ದಾರೆ ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್ ತಂಡದ ಕೋಚ್ ಬ್ರೆಂಡನ್ ಮೆಕ್ಕಲಮ್

ಭಾರತೀಯ ಮಾತ್ರ ಮುರಿಯಲು ಸಾಧ್ಯ
ಟೆಸ್ಟ್ ಕ್ರಿಕೆಟ್‌ನಲ್ಲಿ ಸದ್ಯ ಅನೇಕ ಆಟಗಾರರು ಅದ್ಭುತ ಪ್ರದರ್ಶನ ನೀಡಿ ಮಿಂಚುತ್ತಿದ್ದರೂ ಬ್ರಿಯಾನ್ ಲಾರಾ ಹೆಸರಿನಲ್ಲಿರುವ ದಾಖಲೆ ಮುರಿಯಲು ಈ ಓರ್ವ ಭಾರತೀಯ ಆಟಗಾರನಿಂದ ಮಾತ್ರ ಸಾಧ್ಯ ಎಂದಿದ್ದಾರೆ ಬ್ರೆಂಡನ್ ಮೆಕ್ಕಲಮ್. ಈ ಬೃಹತ್ ದಾಖಲೆಯನ್ನು ಮುರಿಯುವ ಸಾಮರ್ಥ್ಯ ಭಾರತದ ಆಟಗಾರನಲ್ಲಿ ಮಾತ್ರವೇ ಇದೆ ಎಂದಿದ್ದಾರೆ ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಬ್ರೆಂಡನ್ ಮೆಕ್ಕಲಮ್.

ರೋಹಿತ್ ಹೆಸರು ಹೇಳಿದ ಮೆಕ್ಕಲಮ್
ಬ್ರೆಂಡನ್ ಮೆಕ್ಕಲಮ್ ಸೂಚಿಸಿದ ಆ ಆಟಗಾರ ಬೇರೆ ಯಾರೂ ಅಲ್ಲ. ಟೀಮ್ ಇಂಡಿಯಾದ ಮೂರು ಮಾದರಿಯ ಖಾಯಂ ನಾಯಕ ರೋಹಿತ್ ಶರ್ಮಾ. ಬ್ರಿಯಾನ್ ಲಾರಾ ಹೆಸರಿನಲ್ಲಿರುವ 400 ರನ್‌ಗಳ ದಾಖಲೆ ಮುರಿಯಲು ರೋಹಿತ್ ಶರ್ಮಾ ಅವರಿಂದ ಸಾಧ್ಯವಿದೆ. ಅವರಲ್ಲಿ ಅಂಥಾ ಮ್ಯಾರಥಾನ್ ಇನ್ನು ಆಡುವ ಸಾಮರ್ಥ್ಯವಿದೆ ಎಂದಿದ್ದಾರೆ ಮೆಕ್ಕಲಮ್.

ಟೆಸ್ಟ್‌ನಲ್ಲಿ ವಿಶ್ವದಾಖಲೆ ಹೊಂದಿರುವ ಬ್ರಿಯಾನ್ ಲಾರಾ
ಟೆಸ್ಟ್ ಕ್ರಿಕೆಟ್‌ನಲ್ಲಿ ಇನ್ನಿಂಗ್ಸ್‌ವೊಂದರಲ್ಲಿ ಅತಿ ಹೆಚ್ಚಿನ ರನ್ ಗಳಿಸಿದ ದಾಖಲೆಯನ್ನು ಬ್ರಿಯಾನ್ ಲಾರಾ ಹೊಂದಿದ್ದಾರೆ. 2004ರಲ್ಲಿ ಇಂಗ್ಲೆಂಡ್ ವಿರುದ್ಧ ಆಂಟಿಗುವಾದಲ್ಲಿ ನಡೆದ ಪಂದ್ಯದಲ್ಲಿ ಲಾರಾ ಈ ಮ್ಯಾರಥಾನ್ ಇನ್ನಿಂಗ್ಸ್ ಆಡಿದ್ದರು. ಟೆಸ್ಟ್ ಕ್ರಿಕೆಟ್‌ನಲ್ಲಿ 400 ರನ್‌ಗಳ ಮೈಲಿಗಲ್ಲನ್ನು ಮುಟ್ಟಿದ ಮೊದಲ ಹಾಗೂ ಕೊನೆಯ ದೃಷ್ಠಾಂತ ಇದಾಗಿದೆ. ಸುಮಾರು ಎರಡು ದಶಕ ಆಗುತ್ತಾ ಬಂದರೂ ಈವರೆಗೆ ಆ ದಾಖಲೆ ಲಾರಾ ಹೆಸರಿನಲ್ಲಿಯೇ ಭದ್ರವಾಗಿದೆ. ಈ ದಾಖಲೆ ಮುರಿಯುವುದು ಅಸಾಧ್ಯ ಎಂಬ ಮಾತುಗಳನ್ನು ಕೂಡ ಅನೇಕ ವಿಶ್ಲೇಷಕರು ವ್ಯಕ್ತಪಡಿಸುತ್ತಾರೆ. ಆದರೆ ರೋಹಿತ್ ಶರ್ಮಾ ಅವರಲ್ಲಿ ಆ ಸಾಮರ್ಥ್ಯವಿದೆ ಎಂದಿದ್ದಾರೆ ಬ್ರೆಂಡನ್ ಮೆಕ್ಕಲಮ್.

ದಕ್ಷಿಣ ಆಫ್ರಿಕಾ ಸರಣಿಯಿಂದ ರೋಹಿತ್ ವಿಶ್ರಾಂತಿ
ಟೀಮ್ ಇಂಡಿಯಾದ ಮೂರು ಮಾದರಿಯ ನಾಯಕನಾಗಿರುವ ರೋಹಿತ್ ಶರ್ಮಾ ಸದ್ಯ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಟಿ20 ಸರಣಿಯಿಂದ ವಿಶ್ರಾಂತಿ ಪಡೆದುಕೊಂಡಿದ್ದಾರೆ. ರೋಹಿತ್ ಶರ್ಮಾ ಜೊತೆಗೆ ವಿರಾಟ್ ಕೊಹ್ಲಿ, ಜಸ್ಪ್ರೀತ್ ಬೂಮ್ರಾಗೂ ವಿಶ್ರಾಂತಿ ನೀಡಲಾಗಿದೆ. ಇನ್ನು ಮೊದಲಿಗೆ ಈ ಸರಣಿಯಲ್ಲಿ ನಾಯಕನಾಗಿ ಆಯ್ಕೆಯಾಗಿದ್ದ ಕೆಎಲ್ ರಾಹುಲ್ ಗಾಯಗೊಂಡು ಸರಣಿಯಿಂದ ಹೊರಗುಳಿದಿದ್ದು ರಿಷಭ್ ಪಂತ್ ನಾಯಕತ್ವ ವಹಿಸಿಕೊಂಡಿದ್ದಾರೆ. ಆದರೆ ಈ ಸರಣಿಯಲ್ಲಿ ಮೊದಲ ಎರಡು ಪಂದ್ಯಗಳನ್ನು ಈ ಸೋತಿರುವ ಟೀಮ್ ಇಂಡಿಯಾ ಹಿನ್ನಡೆ ಅನುಭವಿಸುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications