For Quick Alerts
ALLOW NOTIFICATIONS  
For Daily Alerts
 

ಕೆಕೆಆರ್ ತಂಡದಲ್ಲಿ ಸುನಿಲ್ ನರೈನ್ ಭವಿಷ್ಯದ ಬಗ್ಗೆ ಬಾಯ್ಬಿಟ್ಟ ಬ್ರೆಂಡನ್ ಮೆಕ್ಕಲಂ

Brendon McCullum explains whether Sunil Narine is still in KKRs plans for season

ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಆಲ್‌ರೌಂಡರ್ ಆಗಿ ಅಬ್ಬರಿಸುತ್ತಿದ್ದ ಸುನಿಲ್ ನರೈನ್ ಕಳೆದ ಕೆಲ ಆವೃತ್ತಿಗಳಿಂದೀಚೆಗೆ ಮಂಕಾಗಿದ್ದರು. ಈ ಬಾರಿ ಆಡಿದ ಮೂರು ಪಂದ್ಯಗಳಲ್ಲಿಯೂ ಸುನಿಲ್ ನರೈನ್ ಆಡುವ ಬಳಗದಿಂದ ಹೊರಗುಳಿದಿದ್ದಾರೆ. ಆದರೆ ಕೆಕೆಆರ್ ಪರವಾಗಿ ನರೈನ್ ಮತ್ತೆ ಕಣಕ್ಕಿಳಿಯಲಿದ್ದಾರೆ ಎಂದು ಕೋಚ್ ಬ್ರೆಂಡನ್ ಮೆಕ್ಕಲಮ್ ಹೇಳಿದ್ದಾರೆ.

ಸುನಿಲ್ ನರೈನ್ ಮೊದಲ ಪಂದ್ಯದಲ್ಲಿಯೇ ಆಡಲು ಸಜ್ಜಾಗಿದ್ದರು. ಆದರೆ ಅವರು ಈಗ ಆಡಲು ಸಂಪೂರ್ಣವಾಗಿ ಫಿಟ್ ಆಗಿಲ್ಲ. ನಮ್ಮ ತಂಡದ ಒಳಗೆ ಅವರು ಶೀಘ್ರವಾಗಿ ಕಾಣಿಸಿಕೊಳ್ಳಲಿದ್ದಾರೆ. ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಅವರು ಕಾಣಿಸಿಕೊಳ್ಳುವ ಸಾಧ್ಯತೆಯಿತ್ತು. ಆದರೆ ಬ್ಯಾಟಿಂಗ್‌ನಲ್ಲಿ ಹೆಚ್ಚಿನ ಶಕ್ತಿ ದೊರೆಯಬಹುದು ಎಂಬ ಲೆಕ್ಕಾಚಾರದೊಂದಿಗೆ ಶಕೀಬ್ ಅವರನ್ನು ಕಣಕ್ಕಿಳಿಸಿದೆವು" ಎಂದು ಮೆಕ್ಕಲಮ್ ಹೇಳಿದ್ದಾರೆ.

"ಮೂರು ಪಂದ್ಯಗಳ ನಂತರ ನೋಡಿದರೆ ನಮ್ಮ ಆಟಗಾರರು ಚೆನ್ನಾಗಿ ಆಡಿದ್ದಾರೆ. ಫಲಿತಾಂಶ ನಮ್ಮ ಪರವಾಗಿ ಬಂದಿಲ್ಲದಿರಬಹುದು. ಬಹುಶಃ ಮುಂಬೈನಲ್ಲಿ ಭಿನ್ನ ಪಿಚ್ ಇರುವ ಕಾರಣ ಕೆಲ ಹೊಸ ಆಟಗಾರರು ಆಡುವ ಬಳಗದಲ್ಲಿ ಸೇರಿಕೊಳ್ಳಬಹುದು" ಎಂದಿದ್ದಾರೆ.

"ಮುಂದಿನ ಪಂದ್ಯದಲ್ಲಿ ನಾವು ಒಂದು ಅಥವಾ ಎರಡು ಬದಲಾವಣೆಗಳನ್ನು ಮಾಡಬಹುದು. ಆದರೆ ಒಟ್ಟಾರೆಯಾಗಿ ನಾವು ಗಮನಿಸಿದರೆ ನಮ್ಮ ಸಾಮರ್ಥ್ಯವನ್ನು ನೋಡಿದರೆ ಟೂರ್ನಿಯಲ್ಲಿ ನಮಗೆ ಉತ್ತಮ ಅವಕಾಶಗಳು ಇದೆ" ಎಂಬ ವಿಶ್ವಾಸವನ್ನು ಮೆಕ್ಕಲಮ್ ವ್ಯಕ್ತಪಡಿಸಿದ್ದಾರೆ.

Story first published: Sunday, April 18, 2021, 21:45 [IST]
Other articles published on Apr 18, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+